For Quick Alerts
ALLOW NOTIFICATIONS  
For Daily Alerts

ಬಿಜೆಪಿ ಮುನ್ನಡೆ, ಸೆನ್ಸೆಕ್ಸ್ 848 ಪಾಯಿಂಟ್ ಭಾರೀ ಏರಿಕೆ

ಲೋಕಸಭಾ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ಎನ್ಡಿಎ ಮುನ್ನಡೆಯನ್ನು ಕಾಯ್ದುಕೊಂಡಿರುವುದು ಷೇರುಪೇಟೆಯ ಮೇಲೆ ಸಕರಾತ್ಮಕ ಪ್ರಭಾವ ಬೀರಿದೆ.

|

ಲೋಕಸಭಾ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ಎನ್ಡಿಎ ಮುನ್ನಡೆಯನ್ನು ಕಾಯ್ದುಕೊಂಡಿರುವುದು ಷೇರುಪೇಟೆಯ ಮೇಲೆ ಸಕರಾತ್ಮಕ ಪ್ರಭಾವ ಬೀರಿದೆ. ಲೋಕಸಭಾ ಚುನಾವಣಾ ಮತ ಎಣಿಕೆ ಇಂದು 8 ಗಂಟೆಗೆ ಆರಂಭಗೊಂಡಿದ್ದು, ಬಿಜೆಪಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಭಾರತದ ಷೇರುಪೇಟೆ ದೊಡ್ಡ ಲಾಭದೊಂದಿಗೆ ಆರಂಭ ಕಂಡಿದೆ.
ಸೋಮವಾರದಂದು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 1,421.90 ಪಾಯಿಂಟ್ ಗಳ ಜಿಗಿತದೊಂದಿಗೆ ದಿನದ ವಹಿವಾಟನ್ನು ಮುಗಿಸಿ, ನಂತರದ ದಿನಗಳಲ್ಲಿ ಮತ್ತೆ ಕುಸಿತ ಕಂಡಿತ್ತು. ಆದರೆ ಮತ ಎಣಿಕೆಯ ದಿನವಾದ ಇಂದು ಭಾರೀ ಏರಿಕೆ ಸಾದಿಸಿ ಮುನ್ನಡೆಯುತ್ತಿದೆ. ನಿನ್ನೆ ಬುಧವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್‌ 140.41 ಅಂಕಗಳ ಹಾಗು ನಿಫ್ಟಿ 28.80 ಪಾಯಿಂಟ್ ಏರಿಕೆಯೊಂದಿಗೆ 11,737.90 ಅಂಕಗಳಲ್ಲಿ ವ್ಯವಹಾರ ಕೊನೆಗೊಳಿಸಿದ್ದವು.

ಸೆನ್ಸೆಕ್ಸ್ 848 ಪಾಯಿಂಟ್ ಏರಿಕೆ

ಸೆನ್ಸೆಕ್ಸ್ 848 ಪಾಯಿಂಟ್ ಏರಿಕೆ

ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿರುವುದು ಸೆನ್ಸೆಕ್ಸ್ ಭಾರೀ ಏರಿಕೆ ದಾಖಲಿಸಿದೆ. ಬೆಳಿಗ್ಗೆ ಸುಮಾರು 10.25 ಗಂಟೆಗೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕವು 848 ಪಾಯಿಂಟ್ ಏರಿಕೆಯೊಂದಿಗೆ 39958 ಅಂಶಗಳಲ್ಲಿ ಹಾಗು ಎನ್ಎಸ್ಇ ನಿಫ್ಟಿ ಸೂಚ್ಯಂಕವು 247 ಪಾಯಿಂಟ್ ಗಳೊಂದಿಗೆ 11987 ಅಂಕಗಳಲ್ಲಿ ವಹಿವಾಟು ನಿರತವಾಗಿದ್ದವು.

ಲಾಭದಲ್ಲಿ ಬ್ಯಾಂಕಿಂಗ್ ಷೇರುಗಳು

ಲಾಭದಲ್ಲಿ ಬ್ಯಾಂಕಿಂಗ್ ಷೇರುಗಳು

ಬ್ಯಾಂಕಿಂಗ್ ಷೇರುಗಳ ಲಾಭದಲ್ಲಿ ಸಾಗುತ್ತಿದ್ದು, ​​ನಿಫ್ಟಿ ಬ್ಯಾಂಕ್ ಸೂಚ್ಯಂಕವು ಶೇ. 2ಕ್ಕಿಂತ ಏರಿಕೆ ಸಾಧಿಸಿದೆ. ಇಂಡಸ್ ಲ್ಯಾಮಡ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಶೇ. 6 ರಷ್ಟು ಏರಿಕೆ ಕಂಡಿವೆ. ಎಸ್ಬಿಐ, ಪಿಎನ್ಬಿ, ಯೆಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಶೇ. 3 ರಿಂದ 4ರಷ್ಟು ಏರಿವೆ.

ರೂಪಾಯಿ ಮೌಲ್ಯ
 

ರೂಪಾಯಿ ಮೌಲ್ಯ

ಹಿಂದಿನ ದಿನದ ವಹಿವಾಟಿನಲ್ಲಿ (ರೂ. 69.67) ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 21 ಪೈಸೆ ಏರಿಕೆ ಕಂಡು 69.45 ರೂಪಾಯಿಗಳಿಗೆ ತಲುಪಿದೆ.
ಬಾಂಡ್ ಬೆಲೆ ಇಳುವರಿಯು ಧನಾತ್ಮಕ ದಿಕ್ಕಿನಲ್ಲಿ ಚಲಿಸಿದ್ದು, ಬಾಂಡ್ ಬೆಲೆ ಶೇ. 7.26ರಷ್ಟು ಏರಿದೆ.

ಕಳೆದ ಮೂರು ಲೋಕಸಭೆ ಚುನಾವಣೆಗಳ ಫಲಿತಾಂಶದ ಸಂದರ್ಭಗಳಲ್ಲೂ ಭಾರತೀಯ ಷೇರು ಮಾರುಕಟ್ಟೆಗಳು ದೊಡ್ಡ ಪ್ರಮಾಣದಲ್ಲಿ ಏರಿಕೆ ಸಾಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇ. 1ಕ್ಕಿಂತ ಹೆಚ್ಚು ಏರಿಕೆ ಕಂಡಿವೆ.

English summary

Sensex nears 840 Points, BJP ahead in early leads

Indian markets opened with big gains today as early trends showed BJP leading in early trends.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X