For Quick Alerts
ALLOW NOTIFICATIONS  
For Daily Alerts

ಗುಡ್ ನ್ಯೂಸ್! ಟಿಡಿಎಸ್ ಕಡಿತ ವಿನಾಯಿತಿ ಮಿತಿ ಏರಿಕೆ

ರೂ. 5 ಲಕ್ಷದವರೆಗೆ ತೆರಿಗೆಗೆ ಒಳಪಡುವ ಆದಾಯ ಹೊಂದಿದ ಹಿರಿಯ ನಾಗರಿಕರು ಇನ್ನುಮುಂದೆ, ಪೋಸ್ಟ್ ಆಫೀಸ್, ಬ್ಯಾಂಕ್ ಠೇವಣಿಯ ಬಡ್ಡಿ ಆದಾಯಕ್ಕೆ ಟಿಡಿಎಸ್ (ಮೂಲದಲ್ಲಿಯೇ ತೆರಿಗೆ ಕಡಿತ) ವಿನಾಯಿತಿ ಪಡೆಯಬಹುದು.

|

ರೂ. 5 ಲಕ್ಷದವರೆಗೆ ತೆರಿಗೆಗೆ ಒಳಪಡುವ ಆದಾಯ ಹೊಂದಿದ ಹಿರಿಯ ನಾಗರಿಕರು ಇನ್ನುಮುಂದೆ, ಬಡ್ಡಿ ಆದಾಯಕ್ಕೆ ಟಿಡಿಎಸ್ (ಮೂಲದಲ್ಲಿಯೇ ತೆರಿಗೆ ಕಡಿತ) ವಿನಾಯಿತಿ ಪಡೆಯಬಹುದು ಎಂದು ಸಿಬಿಡಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಗುಡ್ ನ್ಯೂಸ್! ಟಿಡಿಎಸ್ ಕಡಿತ ವಿನಾಯಿತಿ ಮಿತಿ ಏರಿಕೆ

ಈ ಹಿಂದೆ, ಟಿಡಿಎಸ್ ತೆರಿಗೆ ವಿನಾಯಿತಿ ಪಡೆಯಲು ಮಿತಿ ರೂ. 2.5 ಲಕ್ಷವಾಗಿತ್ತು. ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ 15H ಅರ್ಜಿ ನಮೂನೆ ಸಲ್ಲಿಸಿ ಟಿಡಿಎಸ್ ನಿಂದ ವಿನಾಯಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಬಜೆಟ್ ಘೋಷಣೆ ಸಂದರ್ಭದಲ್ಲಿ ಫಾರ್ಮ್ 15 ಎಚ್ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಪ್ರಕಟಣೆ ಜಾರಿ ಮಾಡಿತ್ತು.
ಕೇಂದ್ರ ಬಜೆಟ್ 2019-20ರಲ್ಲಿ ವಾರ್ಷಿಕ ಆದಾಯ ₹ 5 ಲಕ್ಷದವರೆಗೆ ಹೊಂದಿರುವ ವ್ಯಕ್ತಿಗಳಿಗೆ ಪೂರ್ಣ ತೆರಿಗೆ ರಿಯಾಯಿತಿ ನೀಡಿದೆ. ಇದರಿಂದ ಸುಮಾರು 3 ಕೋಟಿ ಮಧ್ಯಮ ವರ್ಗದ ತೆರಿಗೆದಾರರಿಗೆ ಲಾಭವಾಗುತ್ತದೆ.
ಆದಾಯ ತೆರಿಗೆ ಕಾಯಿದೆ ೧೯೬೧ ಸೆಕ್ಷನ್ ೮೭ಎ ಅನ್ವಯ ರಿಯಾಯಿತಿ ಪಡೆದ ನಂತರ ತೆರಿಗೆ ಪಾವತಿಸುವ ಅಗತ್ಯವಿಲ್ಲದ ತೆರಿಗೆದಾರರಿಂದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಫಾರ್ಮ್ 15 ಎಚ್ ಸ್ವೀಕರಿಸಬೇಕಾಗುತ್ತದೆ.
ಹಿರಿಯ ನಾಗರಿಕರು (60 ವರ್ಷಕ್ಕಿಂತ ಹೆಚ್ಚಿನ) ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಗೆ ಫಾರ್ಮ್ 15 ಎಚ್ ಸಲ್ಲಿಸಿ ಠೇವಣಿಗೆ ಪಾವತಿಸುವ ಬಡ್ಡಿ ಆದಾಯಕ್ಕೆ ಟಿಡಿಎಸ್ ಕಡಿತ ಮಾಡದಂತೆ ಕೋರಬಹುದು. ಈ ಆದಾಯಗಳ ಮೇಲೆ ಟಿಡಿಎಸ್ ಕಡಿತವಾಗುತ್ತದೆ..

Read more about: tds money income tax
English summary

Form 15H amended, senior citizens to get higher TDS exemption on interest income

Senior citizens with a taxable income of up to ₹5 lakh can now submit in banks and post offices Form 15H to claim exemption from TDS.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X