ಟ್ರಾಯ್ ಹೊಸ ನಿಯಮ: ಡಿಟಿಎಚ್, ಕೇಬಲ್ ಟಿವಿ ಗ್ರಾಹಕರಿಗೆ ಗಂಡಾಂತರ! ಏನಿದು..?

ಡಿಟಿಎಚ್ ಮತ್ತು ಕೇಬಲ್ ಟಿವಿ ಗ್ರಾಹಕರಿಗೆ ಅನುಕೂಲ ಮಾಡುವ ಸಲುವಾಗಿ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಏಪ್ರಿಲ್ ನಿಂದ ಹೊಸ ಕೇಬಲ್ ನೀತಿಯನ್ನು ಜಾರಿಗೆ ತಂದಿರುವ ವಿಷಯ ನಿಮಗೆ ತಿಳಿದಿದೆ.

ಡಿಟಿಎಚ್ ಮತ್ತು ಕೇಬಲ್ ಟಿವಿ ಗ್ರಾಹಕರಿಗೆ ಅನುಕೂಲ ಮಾಡುವ ಸಲುವಾಗಿ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಏಪ್ರಿಲ್ ನಿಂದ ಹೊಸ ಕೇಬಲ್ ನೀತಿಯನ್ನು ಜಾರಿಗೆ ತಂದಿರುವ ವಿಷಯ ನಿಮಗೆ ತಿಳಿದಿದೆ. ಆದರೆ ಕೇಳಿ ಬಂದಿರುವ ಆರೋಪಗಳ ಪ್ರಕಾರ ಇದರಿಂದ ಗ್ರಾಹಕರಿಗೆ ಪ್ರಯೋಜನಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿವೆ.
ಈ ಮೊದಲು ಇದ್ದ ಕೇಬಲ್ ಶುಲ್ಕಗಳಿಗಿಂತ ಈಗಿನ ಶುಲ್ಕ ದುಬಾರಿಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಹೊಸ ನಿಯಮ ಜಾರಿ: ಕೇಬಲ್ ಟಿವಿ, ಡಿಟಿಎಚ್ ಗ್ರಾಹಕರೇ ನೀವೇನು ಮಾಡಬೇಕು?

ಟ್ರಾಯ್ ನಿಯಮ

ಟ್ರಾಯ್ ನಿಯಮ

ಟ್ರಾಯ್ ನಿಯಮದ ಪ್ರಕಾರ ರೂ. 153ಕ್ಕೆ 100 ಚಾನೆಲ್ ಸೇವೆ ಒದಗಿಸಬೇಕು. 25 ಡಿಡಿ ಚಾನೆಲ್ ಗಳನ್ನು ಕಡ್ಡಾಯವಾಗಿ ನೀಡಬೇಕು. ಜೊತೆಗೆ ಗ್ರಾಹಕರ ಆಯ್ಕೆಯ 75 ಚಾನೆಲ್ ಗಳನ್ನು ಕೊಡಬೇಕು. ರೂ. 153 ಜೊತೆಗೆ ಸೇವಾ ತೆರಿಗೆ ಸೇರಿ ಕೇಬಲ್ ಶುಲ್ಕ ಜಾಸ್ತಿಯಾಗುತ್ತದೆ.
ಕೆಲವು ಕೇಬಲ್ ಆಪರೇಟರ್ ಗಳು ಹೊಸ ಪ್ಲಾನ್ ಸರಿಯಾಗಿ ತಿಳಿಸದೆ ಅವರಿಗೆ ಇಷ್ಟವಾದ ಚಾನೆಲ್ ಗಳ ಪ್ಲಾನ್ ನ್ನು ನೀಡುತ್ತಿದ್ದಾರೆ.

ಚಾನೆಲ್ ಆಯ್ಕೆಯಲ್ಲಿ ಗೊಂದಲ

ಚಾನೆಲ್ ಆಯ್ಕೆಯಲ್ಲಿ ಗೊಂದಲ

ಗ್ರಾಹಕರು ತಮಗಿಷ್ಟವಾಗುವ ಚಾನೆಲ್ ಆಯ್ಕೆಗೆ ಅವಕಾಶ ಹಾಗು ಚಾನೆಲ್ ಗೆ ತಕ್ಕಂತೆ ಹಣ ಪಾವತಿ ಮಾಡಬಹುದಾಗಿದೆ. ಕೇಬಲ್ ಆಪರೇಟರ್ಸ್ ಮನಸ್ಸಿಗೆ ಬಂದಂತೆ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಹೊಸ ನಿಯಮದಲ್ಲಿದೆ. ಆದರೆ ಬೇಕಾದ ಚಾನೆಲ್ ಗಳನ್ನು ಪಡೆದುಕೊಳ್ಳಲು ಗ್ರಾಹಕರಿಗೆ ಸುಲಭವಾಗಿಲ್ಲ. ಈ ಹಿಂದಿನ ಕೇಬಲ್ ಶುಲ್ಕಕ್ಕಿಂತ ಹೊಸ ಕೇಬಲ್ ಶುಲ್ಕ ಜಾಸ್ತಿಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಟ್ರಾಯ್ ಹೇಳಿದಂತೆ ಹೆಚ್ಚಿನ ಗ್ರಾಹಕರು ಹೊಸ ವ್ಯವಸ್ಥೆಗೆ ವರ್ಗಾವಣೆಯಾಗಿದ್ದಾರೆ. ಆದರೆ ಎಷ್ಟರಮಟ್ಟಿಗೆ, ಎಷ್ಟು ದಿನ ಉಳಿಯುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.

ಗ್ರಾಹಕರಿಂದ ದೂರು

ಗ್ರಾಹಕರಿಂದ ದೂರು

ಗ್ರಾಹಕರಿಂದ ಮೇಲಿಂದ ಮೇಲೆ ತಮಗಾಗುತ್ತಿರುವ ತೊಂದರೆ ಕುರಿತು ಅನೇಕ ಬಾರಿ ದೂರುಗಳನ್ನು ಸಲ್ಲಿಸಿದ್ದಾರೆ. ಕೇಬಲ್‌ ಟಿವಿ ಮತ್ತು ಡಿಟಿಎಚ್ ನಿರ್ವಾಹಕರು ಗ್ರಾಹಕರಿಗೆ ಚಾನೆಲ್‌ ಮತ್ತು ಶುಲ್ಕಗಳಲ್ಲಿ ಆಯ್ಕೆ ಅವಕಾಶ ನೀಡದೇ ಇರುವುದು ಹಾಗು ಸಾಫ್ಟ್‌ವೇರ್‌ಗಳ ಬಗೆಗೂ ದೂರು ನೀಡಲಾಗಿವೆ. ಕೇಬಲ್‌ ಟಿವಿ ಮತ್ತು ಡಿಟಿಎಚ್ ಗ್ರಾಹಕರ ಆಯ್ಕೆಗೆ ಅವಕಾಶ ಇಲ್ಲದಿದ್ದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು.
ಶೋಕಾಸ್ ನೋಟಿಸ್
ಗ್ರಾಹಕರ ದೂರಿನನ್ವಯ ಟ್ರಾಯ್ ಈಗಾಗಲೇ ಕೆಲ ವಿತರಕರಿಗೆ, ಕಂಪನಿಗಳಿಗೆ ಶೋಕಾಸ್‌ ನೋಟಿಸ್‌ಗಳನ್ನು ಜಾರಿ ಮಾಡಿದೆ.

ಗ್ರಾಹಕರು ತತ್ತರ

ಗ್ರಾಹಕರು ತತ್ತರ

ಜಾರಿಯಾಗಿರುವ ಹೊಸ ಕೇಬಲ್ ನಿಯಮದಿಂದ ದುಬಾರಿ ಶುಲ್ಕದ ಹೊಡೆತಕ್ಕೆ ಗ್ರಾಹಕರು ಕಂಗಾಲಾಗಿದ್ದಾರೆ. ಅಂದುಕೊಂಡಿದ್ದೆ ಒಂದು ಆದರೆ ಆಗಿದ್ದು ಮತ್ತೊಂದು ಎಂಬ ಗ್ರಾಹಕರ ಪರಿಸ್ಥಿತಿಯಾಗಿದೆ. ಇಷ್ಟವಾದ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಲು ದುಬಾರಿ ಶುಲ್ಕ ಪಾವತಿಸಬೇಕಿರುವುದರಿಂದ ಬಹುತೇಕ ಗ್ರಾಹಕರು ಟಿವಿಯಲ್ಲಿ ಬಂದ ಚಾನೆಲ್ ಗಳನ್ನು ಮಾತ್ರ ನೋಡುವಂತಾಗಿದೆ. ಒಟ್ಟಿನಲ್ಲಿ ಹೊಸ ಕೇಬಲ್ ನೀತಿಯಿಂದ ಗ್ರಾಹಕರು ಹೈರಾಣಾಗಿದ್ದು ಪರ್ಯಾಯ ಮಾರ್ಗಗಳತ್ತ ನೋಡುತ್ತಿದ್ದಾರೆ.

ಹಾಗಿದ್ದರೆ ಟ್ರಾಯ್ ಹೊಸ ನಿಯಮದಲ್ಲಿ ಏನಿದೆ?

ಹಾಗಿದ್ದರೆ ಟ್ರಾಯ್ ಹೊಸ ನಿಯಮದಲ್ಲಿ ಏನಿದೆ?

ಟ್ರಾಯ್ ಹೊಸ ನಿಯಮ ಕೇಬಲ್ ಹಾಗೂ ಡಿಟಿಹೆಚ್ ಮೇಲೆ ಪ್ರಭಾವ ಬೀರಲಿದೆ. ಕೇಬಲ್ ಟಿವಿ ಮತ್ತು ಡಿಟಿಎಚ್ ಅಪರೇಟರ್ ಗಳಿಗೆ ಅನ್ವಯವಾಗುವಂತೆ ಮನಸ್ಸಿಗೆ ಬಂದಂತೆ ಶುಲ್ಕ ವಸೂಲಿ ಮಾಡುವಂತಿಲ್ಲ. ಬದಲಾಗಿ ಗ್ರಾಹಕರಿಗೆ ಟಿವಿ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿದೆ. ಗ್ರಾಹಕರು ತಾವು ಇಷ್ಟಪಡುವ ಚಾನೆಲ್ ಗಳನ್ನು ನೋಡಬಹುದು ಹಾಗು ಅವುಗಳಿಗೆ ಮಾತ್ರ ಶುಲ್ಕ ಕಟ್ಟಬಹುದು. ಇದಕ್ಕಾಗಿ ಎಲ್ಲಾ ಪ್ರಸಾರಕರು ತಮ್ಮ ಚಾನೆಲ್ ಗಳನ್ನು ಲಭ್ಯವಾಗುವಂತೆ ಮಾಡಬೇಕಾಗುತ್ತದೆ. ಏಪ್ರಿಲ್ 1ರಿಂದ ಹೊಸ ನಿಯಮ ಜಾರಿ: ಕೇಬಲ್ ಟಿವಿ, ಡಿಟಿಎಚ್ ಗ್ರಾಹಕರೇ ನೀವೇನು ಮಾಡಬೇಕು?

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+