For Quick Alerts
ALLOW NOTIFICATIONS  
For Daily Alerts

ಜೆಟ್ ಏರ್ವೇಸ್ ನ 2000 ಸಿಬ್ಬಂದಿಗಳಿಗೆ ಸ್ಪೈಸ್ ಜೆಟ್ ನಿಂದ ನೌಕರಿ

ದೇಶದ ವಿಮಾನಯಾನ ವಲಯ ಆರ್ಥಿಕ ಬಿಕ್ಕಟ್ಟಿನಲ್ಲಿರುವ ವಿಮಾನಯಾನ ವಲಯವನ್ನು ಉತ್ತೇಜಿಸಲು ಸ್ಪೈಸ್ ಜೆಟ್ ಸಂಸ್ಥೆ 2000 ಸಿಬ್ಬಂದಿಗಳನ್ನು ನೇಮಕ ಮಾಡಲು ಮುಂದಾಗಿದೆ. ಇದು ಪೈಲಟ್ ಮತ್ತು ಕ್ಯಾಬಿನ್ ಸಿಬ್ಬಂದಿಗಳನ್ನು ಒಳಗೊಂಡಿದೆ.

|

ದೇಶದ ವಿಮಾನಯಾನ ವಲಯ ಆರ್ಥಿಕ ಬಿಕ್ಕಟ್ಟಿನಲ್ಲಿರುವ ವಿಮಾನಯಾನ ವಲಯವನ್ನು ಉತ್ತೇಜಿಸಲು ಸ್ಪೈಸ್ ಜೆಟ್ ಸಂಸ್ಥೆ 2000 ಸಿಬ್ಬಂದಿಗಳನ್ನು ನೇಮಕ ಮಾಡಲು ಮುಂದಾಗಿದೆ. ಇದು ಪೈಲಟ್ ಮತ್ತು ಕ್ಯಾಬಿನ್ ಸಿಬ್ಬಂದಿಗಳನ್ನು ಒಳಗೊಂಡಿದೆ.

 
ಜೆಟ್ ಏರ್ವೇಸ್ ನ 2000 ಸಿಬ್ಬಂದಿಗಳಿಗೆ ಸ್ಪೈಸ್ ಜೆಟ್ ನಿಂದ ನೌಕರಿ

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿರುವ ಜೆಟ್ ಏರ್ವೇಸ್ ನ 22 ವಿಮಾನಗಳನ್ನು ಸ್ಪೈಸ್ ಜೆಟ್ ಖರೀದಿಸಿದೆ.
ಜೆಟ್ ಏರ್ವೇಸ್ ನ ಸುಮಾರು 2 ಸಾವಿರ ಉದ್ಯೋಗಿಗಳನ್ನು ಸ್ಪೈಸ್ ಜೆಟ್ ನೌಕರಿ ನೀಡುತ್ತಿದೆ.ಜೆಟ್ ಏವೇಸ್ ಉದ್ಯೋಗಿಗಳು ಉತ್ತಮ ಅರ್ಹತೆ ಹೊಂದಿರುವ ವೃತ್ತಿಪರ ನೌಕರರಾಗಿದ್ದು, ಬರಲಿರುವ ಸಮಯಗಳಲ್ಲಿ ಹೆಚ್ಚು ಜೆಟ್ ಸಿಬ್ಬಂದಿಗಳನ್ನು ಮುಂದುವರಿಸುತ್ತೇವೆ ಎಂದು ಸ್ಪೈಸ್ ಜೆಟ್ ಹೇಳಿದೆ.

 

ನಾವು ಸುಮಾರು 1,100 ಜನರನ್ನು ನೇಮಕ ಮಾಡಿದ್ದೇವೆ, ಇದು 2,000 ನೌಕರರವರೆಗೆ ಮುಟ್ಟಲಿದೆ. ಇವರಲ್ಲಿ ಪೈಲಟ್ ಗಳು, ಕ್ಯಾಬಿನ್ ಸಿಬ್ಬಂದಿ, ವಿಮಾನ ನಿಲ್ದಾಣ ಸೇವೆ, ಸೆಕ್ಯೂರಿಟಿ ಸಿಬ್ಬಂದಿಗಳು ಇರಲಿದ್ದಾರೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದ್ದಾರೆ.
ಪ್ರಸ್ತುತ, ಸ್ಪೈಸ್ ಜೆಟ್ ಸುಮಾರು 14,000 ಸಿಬ್ಬಂದಿ ಮತ್ತು 100 ವಿಮಾನ ಹಾರಾಟವನ್ನು ಹೊಂದಿದೆ. ಏರ್ ಇಂಡಿಯಾ, ಜೆಟ್ ಏರ್ವೇಸ್ ಮತ್ತು ಇಂಡಿಗೊಗಳ ನಂತರ 100 ವಿಮಾನಗಳನ್ನು ಹೊಂದಿರುವ ನಾಲ್ಕನೆಯ ವಿಮಾನಯಾನ ಸಂಸ್ಥೆ ಇದಾಗಿದೆ.
ಸ್ಪೈಸ್ ಜೆಟ್ ಬೋಯಿಂಗ್ 737s, ಬೊಂಬಾರ್ಡಿಯರ್ Q-400s ಮತ್ತು B737 ವಿಮಾನ ಅನ್ನು ಹೊಂದಿದೆ. ಇದು 575 ದೈನಂದಿನ ವಿಮಾನಗಳು ಸುಮಾರು 62 ಸ್ಥಳಗಳಲ್ಲಿ ಕಾರ್ಯಾಚರಣೆ ನಿರ್ವಹಿಸುತ್ತವೆ. ಇದರಲ್ಲಿ ಒಂಬತ್ತು ಅಂತರಾಷ್ಟ್ರೀಯ ವಿಮಾನಗಳು ಸೇರಿವೆ.

Read more about: jet airways spicejet airlines jobs
English summary

SpiceJet to hire up to 2,000 Jet Airways staff, says Ajay Singh

SpiceJet plans to hire up to 2,000 staff, including pilots and cabin crew, of the defunct Jet Airways as the no-frills carrier continues to expand its operations.
Story first published: Monday, June 3, 2019, 14:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X