ಸಂಘಟಿತ ವಲಯದಲ್ಲಿ 70 ಲಕ್ಷ ಉದ್ಯೋಗ ಸೃಷ್ಟಿ

ದೇಶದಲ್ಲಿ ಕಳೆದ 45 ವರ್ಷಗಳಲ್ಲಿಯೇ ನಿರುದ್ಯೋಗದ ಪ್ರಮಾಣ ಗರಿಷ್ಠ ಮಟ್ಟದಲ್ಲಿದ್ದರೂ, ಸಂಘಟಿತ ವಲಯದಲ್ಲಿ ಉದ್ಯೋಗ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ದೇಶದಲ್ಲಿ ಕಳೆದ 45 ವರ್ಷಗಳಲ್ಲಿಯೇ ನಿರುದ್ಯೋಗದ ಪ್ರಮಾಣ ಗರಿಷ್ಠ ಮಟ್ಟದಲ್ಲಿದ್ದರೂ, ಸಂಘಟಿತ ವಲಯದಲ್ಲಿ ಉದ್ಯೋಗ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಸುಧಾರಣೆಗಳು ಮತ್ತು ಉಪಕ್ರಮಗಳಿಂದಾಗಿ 2015-2018ರ ನಡುವಿನ ಅವಧಿಯಲ್ಲಿ 70 ಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಇಂಡಿಯನ್‌ ಸ್ಟಾಫಿಂಗ್ ಫೆಡರೇಷನ್ ಮತ್ತು ಸಂಶೋಧನಾ ಸಂಸ್ಥೆ ಐಎಂಆರ್ಬಿ ಕಾಂಟಾರ್ ತನ್ನ ವರದಿಯಲ್ಲಿ ತಿಳಿಸಿದೆ.

ಸಂಘಟಿತ ವಲಯದಲ್ಲಿ 70 ಲಕ್ಷ ಉದ್ಯೋಗ ಸೃಷ್ಟಿ

ಇಪಿಎಫ್‌ ಮತ್ತು ಇಎಸ್‌ಐ ಸುಧಾರಣೆ, ಜಿಎಸ್ಟಿ ಕಾಯಿದೆ ಹಾಗೂ ನೋಟು ರದ್ದತಿ ಪರಿಣಾಮದಿಂದ ಸಂಘಟಿತ ವಲಯದಲ್ಲಿ ಉದ್ಯೋಗ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಸಂಬಳದೊಂದಿಗೆ ಪಿಎಫ್, ಇಎಸ್ಐ, ವಿಮೆ ಇತ್ಯಾದಿ ಸೌಲಭ್ಯಗಳನ್ನು ಪಡೆಯುತ್ತಿರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಅಸಂಘಟಿತ ವಲಯದಲ್ಲಿ ಉದ್ಯೋಗಿಗಳಿಗೆ ಇಂಥ ಸೌಲಭ್ಯಗಳು ಸಿಗುವುದಿಲ್ಲ.
ಸಂಘಟಿತ ವಲಯದ ಉದ್ಯೋಗಾವಕಾಶಗಳ ಬಗ್ಗೆ
ಎನ್‌ಎಸ್‌ಎಸ್‌ಒ ಸಂಸ್ಥೆಯು (ನ್ಯಾಶನಲ್‌ ಸ್ಯಾಂಪಲ್‌ ಸರ್ವೇ ಸಂಸ್ಥೆ) ಇತ್ತೀಚಿನ ಅಂಕಿ ಅಂಶಗಳ ಅಧಾರಗಳೊಂದಿಗೆ ವರದಿಯನ್ನು ಸಿದ್ಧಪಡಿಸಿದ್ದು, 2015-2018ರ ಅವಧಿಯಲ್ಲಿ ಹಂಗಾಮಿ ಕಾರ್ಮಿಕರ ಸಂಖ್ಯೆ ಶೇ. 70 ರಿಂದ ಶೇ. 68ಕ್ಕೆ ಕುಸಿದಿದೆ. 70 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸಂಘಟಿತವಾಗಿವೆ. ಇ-ಕಾಮರ್ಸ್, ಉತ್ಪಾದನೆ ಮತ್ತು ಸರ್ಕಾರಿ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ವರದಿ ತಿಳಿಸಿದೆ. 2021ರ ವೇಳೆಗೆ ಹೆಚ್ಚುವರಿ 1.1 ಕೋಟಿ ಉದ್ಯೋಗಗಳು ಅಸಂಘಟಿತ ವಲಯದಿಂದ ಸಂಘಟಿತ ವಲಯಕ್ಕೆ ಪರಿವರ್ತನೆ ಹೊಂದಲಿವೆ ಎನ್ನಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+