For Quick Alerts
ALLOW NOTIFICATIONS  
For Daily Alerts

ದೇಶದ ಬೆಳವಣಿಗೆ ದರ ಕುಂಠಿತ: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಭಾರತೀಯ ಆರ್ಥಿಕತೆ ಚಟುವಟಿಕೆಗಳು ಬೆಳವಣಿಗೆಯ ರಭಸವನ್ನು ಕಳೆದುಕೊಂಡಿದ್ದು, ವೃದ್ದಿ ದರ ನಿಧಾನಗೊಂಡಿರುವುದನ್ನು ಉತ್ತೇಜಿಸಲು ನಿರ್ಣಾಯಕ ವಿತ್ತೀಯ ನೀತಿಯ ಅಗತ್ಯವಿದೆ.

|

ಭಾರತೀಯ ಆರ್ಥಿಕ ಚಟುವಟಿಕೆಗಳು ಬೆಳವಣಿಗೆಯ ರಭಸವನ್ನು ಕಳೆದುಕೊಂಡಿದ್ದು, ವೃದ್ದಿ ದರ ನಿಧಾನಗೊಂಡಿರುವುದನ್ನು ಉತ್ತೇಜಿಸಲು ನಿರ್ಣಾಯಕ ವಿತ್ತೀಯ ನೀತಿಯ ಅಗತ್ಯವಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

 

ದೇಶದ ಬೆಳವಣಿಗೆ ದರ ಕುಂಠಿತ: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಜೂನ್ ತಿಂಗಳ ಆರಂಭದಲ್ಲಿ ನಡೆದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ 25 ಬೇಸಿಸ್ ಪಾಯಿಂಟ್ (ಬಿಪಿಎಸ್) ದರ ಕಡಿತ ಮಾಡಲಾಯಿತು. ಎಂಪಿಸಿ ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ಬಹಿರಂಗಪಡಿಸಿರುವ ಶಕ್ತಿಕಾಂತ್ ದಾಸ್ ಅವರು, ದೇಶಿ ಆರ್ಥಿಕ ವೃದ್ದಿ ದರ (ಜಿಡಿಪಿ) ಕುಂಠಿತಗೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

2012-2017ರ ಅವಧಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆಯು ಶೇ. ೫ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ ಎಂದು ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಹೇಳಿದ್ದರು.

 

ಕೇಂದ್ರ ಸರ್ಕಾರ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಬೆನ್ನಲ್ಲೇ ಶಕ್ತಿಕಾಂತ್ ದಾಸ್ ಅವರು ಈ ವಿಷಯ ಬಹಿರಂಗಗೊಳಿಸಿದ್ದಾರೆ. ಒಟ್ಟಾರೆ ದೇಶದ ಆರ್ಥಿಕ ಚಟುವಟಿಕೆಗಳು ತೀವ್ರತೆ ಕಳೆದುಕೊಂಡಿದ್ದು, ೨೦೧೮-೧೯ರ ಸಾಲಿನಲ್ಲಿ ೪ನೇ ತ್ರೈಮಾಸಿಕ ವೃದ್ದಿ ದರ ಶೇ. 5.8ಕ್ಕೆ ಕುಸಿದಿದೆ. ಈ ಅವಧಿಯಲ್ಲಿ ಬಂಡವಾಳ ಹೂಡಿಕೆ ಚಟುವಟಿಕೆಗಳು ಕೂಡ ಹೆಚ್ಚು ಕುಸಿತಕ್ಕೆ ಒಳಗಾಗಿವೆ ಎಂಬ ವಿಚಾರ ಹಂಚಿಕೊಂಡಿದ್ದಾರೆ.

English summary

Economic activity clearly losing traction: RBI governor Shaktikanta Das

The Indian economy has been clearly losing traction and needs a decisive monetary policy to promote growth, said Reserve Bank of India governor Shaktikanta Das.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X