For Quick Alerts
ALLOW NOTIFICATIONS  
For Daily Alerts

ಐಟಿಆರ್ ರಿಟರ್ನ್ ಸಲ್ಲಿಕೆ ಅವಧಿ ವಿಸ್ತರಣೆ

ಜೂನ್ 21ರಂದು ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಐಟಿಆರ್ ರಿಟರ್ನ್ ಸಲ್ಲಿಕೆ ಅವಧಿಯನ್ನು ಆಗಸ್ಟ್ 30ರವರೆಗೆ ವಿಸ್ತರಿಸಲಾಗಿದೆ.

|

ಜೂನ್ 21ರಂದು ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಐಟಿಆರ್ ರಿಟರ್ನ್ ಸಲ್ಲಿಕೆ ಅವಧಿಯನ್ನು ಆಗಸ್ಟ್ 30ರವರೆಗೆ ವಿಸ್ತರಿಸಲಾಗಿದೆ.

ಐಟಿಆರ್ ರಿಟರ್ನ್ ಸಲ್ಲಿಕೆ ಅವಧಿ ವಿಸ್ತರಣೆ

ಹೊಸ ಸರ್ಕಾರದ ಜಿಎಸ್ಟಿ ಮಂಡಳಿ ಸಭೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಜಿಎಸ್ಟಿ ರಿಟರ್ನ್ ಸಲ್ಲಿಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಂಡು ಎರಡು ತಿಂಗಳುಗಳ ಕಾಲ ಕಾಲಾವಧಿ ವಿಸ್ತರಿಸಲಾಗಿದೆ.
ಜಿಎಸ್ಟಿ ಮಂಡಳಿ ಸಭೆಯಲ್ಲಿ ಜಿಎಸ್ಟಿ ನೋಂದಣಿ ಹಾಗೂ ರಿಟರ್ನ್ ಸಲ್ಲಿಕೆಯನ್ನು ಸರಳಗೊಳಿಸಲಾಗಿದೆ. ಏಕರೂಪದ ಜಿಎಸ್ಟಿ ರಿಟರ್ನ್ ಫೈಲಂಗ್ ವ್ಯವಸ್ಥೆ ಜನೆವರಿ 1, 2020ರಿಂದ ಅನ್ವಯವಾಗಲಿದೆ.
ಹೊಸದಾಗಿ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಿರ್ಮಲಾ ಸೀತಾರಾಮನ್ ಜಿಎಸ್ಟಿ ಪರಿಷತ್ತಿನ 35 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳು ಹೊರತುಪಡಿಸಿ ಇನ್ನುಳಿದ ಎಲ್ಲಾ ರಾಜ್ಯಗಳು ಭಾಗವಹಿಸಿದ್ದವು.
ಎಲೆಕ್ಟ್ರಿಕ್ ವಾಹನಗಳಿಗೆ ಶೇ. 12 ರಿಂದ ಶೇ. 5ಕ್ಕೆ ಹಾಗೂ ಎಲೆಕ್ಟ್ರಿಕ್ ಚಾರ್ಜರ್ ಗಳಿಗೆ ಶೇ. 18 ರಿಂದ ಶೇ. 12ಕ್ಕೆ ಜಿಎಸ್ಟಿ ಇಳಿಸುವ ಪ್ರಸ್ತಾಪ ಪರಿಶೀಲನೆ ನಂತರ ಅಂತಿಮಗೊಳಿಸಲಾಗುವುದು.
ವಾಹನ ಉದ್ಯಮ ಹಾಗೂ ನಿರ್ಮಾಣ ಕ್ಷೇತ್ರದ ಪುನಶ್ಚೇತನಕ್ಕಾಗಿ ಜಿಎಸ್ಟಿ ಇಳಿಕೆ ಮಾಡುವಂತೆ ಮನವಿ ಸಲ್ಲಿಸಲಾಗಿತ್ತಾದರೂ ಈ ಕುರಿತು ಮಂಡಳಿ ಯಾವುದೇ ತೀರ್ಮಾನ ಕೈಗೊಂಡಿಲ್ಲ.

English summary

First meet under new FM approves annual return date extension

The GST Council on June 21 extended the deadline to file annual returns by a month to August 30.
Story first published: Saturday, June 22, 2019, 11:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X