For Quick Alerts
ALLOW NOTIFICATIONS  
For Daily Alerts

ಭಾರತೀಯರು ವಿದೇಶದಲ್ಲಿ 4,900 ಕೋಟಿ ಡಾಲರ್‌ ಕಾಳಧನ ಹೊಂದಿದ್ದಾರೆ!

1980 ಮತ್ತು 2010 ರ ನಡುವೆ ಭಾರತೀಯರು ವಿದೇಶದಲ್ಲಿ ಸಂಗ್ರಹಿಸಿದ ಲೆಕ್ಕವಿಲ್ಲದ ಸಂಪತ್ತು 216.48 ಬಿಲಿಯನ್ ಡಾಲರ್‌ನಿಂದ 490 ಬಿಲಿಯನ್ ಡಾಲರ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

|

1980 ಮತ್ತು 2010 ರ ನಡುವೆ ಭಾರತೀಯರು ವಿದೇಶದಲ್ಲಿ ಸಂಗ್ರಹಿಸಿದ ಲೆಕ್ಕವಿಲ್ಲದ ಸಂಪತ್ತು 216.48 ಬಿಲಿಯನ್ ಡಾಲರ್‌ನಿಂದ 490 ಬಿಲಿಯನ್ ಡಾಲರ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ ಎಂದು ಹಣಕಾಸು ಸ್ಥಾಯಿ ಸಮಿತಿಯು 17 ನೇ ಲೋಕಸಭಾ ಬಜೆಟ್ ಅಧಿವೇಶನದಲ್ಲಿ ಮಂಡಿಸಿದ ವರದಿಯಲ್ಲಿ ತಿಳಿಸಿದೆ.

 

ಭಾರತೀಯರು ವಿದೇಶದಲ್ಲಿ 4,900 ಕೋಟಿ ಡಾಲರ್‌ ಕಾಳಧನ ಹೊಂದಿದ್ದಾರೆ!

ಸೋಮವಾರ ಲೋಕಸಭೆಯಲ್ಲಿ ಆರ್ಥಿಕ ವಿಷಯಗಳ ಕುರಿತು ಹಣಕಾಸು ಸ್ಥಾಯಿ ಸಮತಿ ವರದಿಯನ್ನು ಮಂಡಿಸಿದೆ. ದೇಶದ ಹೊರಗಿರುವ ಭಾರತೀಯರು ಲೆಕ್ಕಪತ್ರವಿಲ್ಲದ 4,900 ಕೋಟಿ ಡಾಲರ್‌ ಕಾಳಧನವನ್ನು ಭಾರತದೊಳಗೆಯೇ ಮರು ಹೂಡಿಕೆ ಮಾಡಿದ್ದಾರೆ. 2010ರ ವರೆಗಿನ ಲೆಕ್ಕಾಚಾರ ಇದಾಗಿದ್ದು, ಸ್ಥಾಯಿ ಸಮಿತಿಯ ಅಧ್ಯಯನದ ಭಾಗವಾಗಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ರಾಷ್ಟ್ರೀಯ ಸಾರ್ವಜನಿಕ ನೀತಿ ಮತ್ತು ಹಣಕಾಸು ಸಂಸ್ಥೆ, ರಾಷ್ಟ್ರೀಯ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನೆ ಮಂಡಳಿ ಮತ್ತು ರಾಷ್ಟ್ರೀಯ ಆರ್ಥಿಕ ನಿರ್ವಹಣಾ ಸಂಸ್ಥೆ (ಎನ್‌ಐಎಫ್‌ಎಂ) ಜೊತೆಗೂಡಿ ನಡೆಸಿದ ಅಧ್ಯಯನದ ವರದಿ ತಿಳಿಸಿದೆ.

ಸರಿಆಯದ ದಾಖಲೆಗಳಿಲ್ಲ ಹಣ ರಿಯಲ್ ಎಸ್ಟೇಟ್, ಗಣಿಗಾರಿಕೆ, ಚಿನ್ನ-ಬೆಳ್ಳಿ ವ್ಯಾಪಾರ, ಕಮಾಡಿಟಿ, ಚಲನಚಿತ್ರ, ಫಾರ್ಮಾಸ್ಯುಟಿಕಲ್ಸ್‌, ಮಸಾಲೆ, ಗುಟ್ಕಾ, ತಂಬಾಕು ಮತ್ತು ಶಿಕ್ಷಣದಂತಹ ವಲಯಗಳಲ್ಲಿ ಹೆಚ್ಚು ಹೂಡಿಕೆಯಾಗಿದೆ. ರಾಷ್ಟ್ರೀಯ ಸಾರ್ವಜನಿಕ ನೀತಿ ಮತ್ತು ಹಣಕಾಸು ಸಂಸ್ಥೆ (ಎನ್‌ಐಪಿಎಫ್‌ಪಿ) ಅಂದಾಜಿನ ಪ್ರಕಾರ 1997-2009ರ ಅವಧಿಯಲ್ಲಿ ಅಕ್ರಮದ ಹಣದ ಹೊರ ಹರಿವಿನ ಪ್ರಮಾಣ ಒಟ್ಟಾರೆ ಜಿಡಿಪಿಯ ಶೇ. 0.2 ರಿಂದ ಶೇ. 7.4ರ ಶ್ರೇಣಿಯಲ್ಲಿತ್ತು. ರಾಷ್ಟ್ರೀಯ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನೆ ಮಂಡಳಿ (ಎನ್‌ಸಿಎಇಆರ್‌) ಅಂದಾಜಿನ ಪ್ರಕಾರ 1980-2019ರ ಅವಧಿಯಲ್ಲಿ ದೇಶದ ಹೊರಗಿರುವ ಭಾರತೀಯರ ಕಾಳಧನದ ಮೊತ್ತ ರೂ. 38,400 ಕೋಟಿ ಡಾಲರ್‌ನಿಂದ 4,900 ಕೋಟಿ ಡಾಲರ್ ವರೆಗೆ ಇದೆ ಎನ್ನಲಾಗಿದೆ.

Read more about: black money money finance news
English summary

Indians have $216-490 billion black money abroad

Unaccounted wealth stashed abroad by Indians is estimated to be in the range of $216.48 billion to $490 billion between 1980 and 2010.
Story first published: Tuesday, June 25, 2019, 16:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X