For Quick Alerts
ALLOW NOTIFICATIONS  
For Daily Alerts

ಬಜೆಟ್ 2019: ಮೋದಿ ಸರ್ಕಾರದ ಬಜೆಟ್ ನಲ್ಲಿ ಈ 5 ಅಂಶಗಳು ನಿರೀಕ್ಷಿಸಬಹುದೆ?

ನಾಳೆ ಜುಲೈ 5ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಬಾರಿ ಬಜೆಟ್ ಮಂಡಿಸುವ ತಯಾರಿಯಲ್ಲಿದ್ದಾರೆ.

|

ನಾಳೆ ಜುಲೈ 5ರಂದು ಕೇಂದ್ರ ಬಜೆಟ್ - 2019 ಮಂಡನೆಯಾಗಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಬಾರಿ ಬಜೆಟ್ ಮಂಡಿಸುವ ತಯಾರಿಯಲ್ಲಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಸನ್ನಿವೇಶಗಳಿವೆ, ಕೆಲ ರಾಜ್ಯಗಳು ಬರಕ್ಕೆ ತುತ್ತಾಗಿವೆ. ಇಂತಹ ಸಂದರ್ಭದಲ್ಲಿ ನರೆಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಗೆ ಮೊದಲ ಬಜೆಟ್ 2019 ಮಂಡಿಸಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆ ಪರಿಗಣಿಸುವುದಾದರೆ ಈ ಕೆಳಗಿನ ಅಂಶಗಳಿಗೆ ಆದ್ಯತೆ ನೀಡಬಹುದು.

 

ರೈತರಿಗೆ ಪ್ರಥಮ ಆದ್ಯತೆ

ರೈತರಿಗೆ ಪ್ರಥಮ ಆದ್ಯತೆ

ಲೋಕಸಭಾ ಚುನಾವಣೆ ಪೂರ್ವದ ಮಧ್ಯಂತರ ಬಜೆಟ್ ನಲ್ಲಿ ರೈತರಿಗೆ ಸಾಕಷ್ಟು ಕೊಡುಗೆಗಳನ್ನು ಘೋಷಿಸಲಾಗಿತ್ತು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ರೈತರಿಗೆ ಸಹಾಯಧನ ಘೋಷಿಸಲಾಯಿತು. ಅದರ ಮುಂದುವರೆದ ಭಾಗವಾಗಿ ಈ ಪ್ರಮಾಣವನ್ನು ಹೆಚ್ಚಿಸಬಹುದು. ಪ್ರಮಾನಿಕೆಯಲ್ಲಿ ಹೇಲಿರುವಂತೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 1-5 ವರ್ಷಗಳ ಅವಧಿಗೆ 1 ಲಕ್ಷ ಸಾಲವನ್ನು ಶೇ. ೭ ಬಡ್ಡಿದರದಂತರ ಒದಗಿಸಲಾಗುತ್ತದೆ. ರೈತರಿಗೆ ಬಡ್ಡಿ ರಹಿತ ಸಾಲ ಸಿಗಬಹುದೇ ನೋಡಬೇಕು.

ಉದ್ಯಮಶೀಲತೆಗೆ ಉತ್ತೇಜನ

ಉದ್ಯಮಶೀಲತೆಗೆ ಉತ್ತೇಜನ

ಉದ್ಯಮಶಿಲರಿಗಾಗಿ ಹಾಗು ಸ್ಟಾರ್ಟ್ಅಪ್ ಗಳಿಗಾಗಿ ಮುದ್ರಾ ಯೋಜನೆಯಡಿ ಸಿಗುವ ಸಾಲಕ್ಕೆ ಈ ಬಜೆಟ್ ನಲ್ಲಿ ಆದ್ಯತೆ ಸಿಗಬಹುದು. ಉದ್ಯಮಶೀಲ ಮಹಿಳೆಯರಿಗೆ ಶೇ. ೫೦ರಷ್ಟು, ಪರುಷರಿಗೆ ಶೇ. ೨೫ರಷ್ಟು ಸಾಲಕ್ಕೆ ಖಾತರಿ ನೀಡಬಹುದು.

ಪಿಡಿಎಸ್
 

ಪಿಡಿಎಸ್

ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಬಡ ಕುಟುಂಬಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಘೋಷಿಸಬಹುದು. ಸಬ್ಸಿಡಿ ದರದ ಸಕ್ಕರೆ ಪ್ರಮಾಣ ಹೆಚ್ಚಿಸುವ ನಿರೀಕ್ಷೆ ಇದೆ.

ಆಯುಷ್ಮಾನ್ ಭಾರತ ಯೋಜನೆ

ಆಯುಷ್ಮಾನ್ ಭಾರತ ಯೋಜನೆ

ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ಬಹುದೊಡ್ಡ ಯೋಜನೆಯಾಗಿದೆ. ಇದರ ವ್ಯಾಪಕವಾದ ವಿಸ್ತರಣೆಗೆ ಆದ್ಯತೆ ಸಿಗಬಹುದು.

ರೈತರ ಸಹಕಾರ ಸೊಸೈಟಿ

ರೈತರ ಸಹಕಾರ ಸೊಸೈಟಿ

ಬಿಜೆಪಿಯ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ 2022 ರ ವೆಳೆಗೆ ೧೦ ಸಾವಿರ ಹೊಸ ರೈತ ಉತ್ಪಾದಕರ ಸೊಸೈಟಿಗಳನ್ನು ಜಾರಿ ತರುವ ಬಗ್ಗೆ ಭರವಸೆ ನೀಡಲಾಗಿತ್ತು. ಕೃಷಿ ಉತ್ಪನ್ನಗಳ ನೇರ ಮಾರಾಟಕ್ಕೆ ಇದು ಸಹಕಾರಿಯಾಗಬಲ್ಲದು.

ಬಜೆಟ್ 2019: ಬಜೆಟ್ ಗೆ ಸಂಬಂಧಿಸಿದ ಈ 10 ನಿಯಮಗಳ ಬಗ್ಗೆ ಗೊತ್ತಿರಲಿಬಜೆಟ್ 2019: ಬಜೆಟ್ ಗೆ ಸಂಬಂಧಿಸಿದ ಈ 10 ನಿಯಮಗಳ ಬಗ್ಗೆ ಗೊತ್ತಿರಲಿ

English summary

Budget 2019 expectations: 5 point agenda for Modi government

Budget 2019 India will be a moment of truth for the newly-elected central government even as the industry expects an announcement of key measures pertaining to the country’s economy.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X