For Quick Alerts
ALLOW NOTIFICATIONS  
For Daily Alerts

ಕಡಿಮೆ ಸಂಬಳ ಪಡೆಯುವ ನೌಕರರಿಗೆ ಸರ್ಕಾರದಿಂದ ಭರ್ಜರಿ ಉಡುಗೊರೆ, ಆಗಸ್ಟ್ ನಿಂದ ಹೆಚ್ಚು ಸಂಬಳ

ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮೋದಿ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ! ನೀವು ತಿಂಗಳಿಗೆ 21 ಸಾವಿರ ಸಂಬಳ ಪಡೆಯುವವರಾದರೆ ಈ ತಿಂಗಳಿನಿಂದ ನಿಮ್ಮ ಸಂಬಳ ಹೆಚ್ಚಾಗಲಿದೆ.

|

ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮೋದಿ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ! ನೀವು ತಿಂಗಳಿಗೆ 21 ಸಾವಿರ ಸಂಬಳ ಪಡೆಯುವವರಾದರೆ ಈ ತಿಂಗಳಿನಿಂದ ನಿಮ್ಮ ಸಂಬಳ ಹೆಚ್ಚಾಗಲಿದೆ.
ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐ) ಯೋಜನೆಯಡಿ ನೌಕರರ ಕೊಡುಗೆಯನ್ನು ಸರ್ಕಾರ ಕಡಿಮೆ ಮಾಡಿದ್ದು, ಈ ನಿರ್ಧಾರವು 1 ಜುಲೈ 2019 ರಿಂದ ಜಾರಿಗೆ ಬಂದಿದೆ. ನೌಕರರ ಕೊಡುಗೆ ಕಡಿತದ ಫಲವಾಗಿ ನೌಕರರಿಗೆ ಆಗಸ್ಟ್ ತಿಂಗಳಿನಲ್ಲಿ ಮೊದಿಗಿಂತ ಹೆಚ್ಚಿನ ಸಂಬಳ ಸಿಗುತ್ತದೆ.

ಕೊಡುಗೆ

ಕೊಡುಗೆ

ಇಲ್ಲಿಯವರೆಗೆ ಇಎಸ್ಐ ಕೊಡುಗೆ ಶೇ. 6.5 ರಷ್ಟಿತ್ತು. ಉದ್ಯೋಗಿ ಕೊಡುಗೆ ಶೇ. 1.75 ರಷ್ಟಿದ್ದರೆ, ಕಂಪನಿ ಕೊಡುಗೆ ಶೇ. 4.5 ರಷ್ಟಿತ್ತು. ಸರ್ಕಾರ ಈಗ ಇದನ್ನು ಶೇ. 4ಕ್ಕೆ ಇಳಿಕೆ ಮಾಡಿದೆ. ಅಂದರೆ ಉದ್ಯೋಗಿ ಸಂಬಳದಿಂದ ಕೊಡುಗೆ ಭಾಗವನ್ನು ಶೇ. 0.75ರಷ್ಟು ಮಾತ್ರ ಕಡಿತಗೊಳಿಸಲಾಗುವುದು. ಉದ್ಯೋಗದಾತರು ಶೇ. 3.25 ರಷ್ಟು ಕೊಡುಗೆ ನೀಡಬೇಕಾಗುತ್ತದೆ.
ಇದರಿಂದ ನೌಕರರ ಸಂಬಳ ಶೇ. 1 ರಷ್ಟು ಹೆಚ್ಚಾಗಲಿದ್ದು, 21 ಸಾವಿರ ರೂಪಾಯಿ ಸಂಬಳ ಪಡೆಯುವ ವ್ಯಕ್ತಿಗೆ ಆಗಸ್ಟ್ ನಿಂದ ರೂ. 210 ಹೆಚ್ಚಿಗೆ ಸಿಗಲಿದೆ.

ಎಷ್ಟು ಉದ್ಯೋಗಿಗಳಿಗೆ ಲಾಭ?

ಎಷ್ಟು ಉದ್ಯೋಗಿಗಳಿಗೆ ಲಾಭ?

ಸರ್ಕಾರದ ಈ ನಿರ್ಧಾರದಿಂದ ದೇಶಾದ್ಯಂತ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ 35 ದಶಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನ ಸಿಗಲಿದೆ. ಕಂಪನಿಗಳಿಗೆ ಅನುಕೂಲಗಳು ಸಹ ಲಭ್ಯವಿರುತ್ತವೆ. ಈಗ ಅವರು ವಿಮೆಗಾಗಿ ಕಡಿಮೆ ಖರ್ಚು ಮಾಡಬೇಕಾಗುತ್ತದೆ.

ಈ ಯೋಜನೆಯ ಪ್ರಯೋಜನಗಳೇನು?

ಈ ಯೋಜನೆಯ ಪ್ರಯೋಜನಗಳೇನು?

- ಯಾವುದೇ ಉದ್ಯೋಗಿ ಆರು ತಿಂಗಳ ಕೆಲಸದ ನಂತರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
- ಉದ್ಯೋಗಿ ಅವಲಂಬಿತ ಅಂದರೆ ಹೆಂಡತಿ, ಮಗ-ಮಗಳು ಅಥವಾ ಪೋಷಕರಿಗೆ ಸಹ ಚಿಕಿತ್ಸೆ ನೀಡಲಾಗುವುದು. ಅವರ ತಿಂಗಳ ಆದಾಯ ಕೇವಲ ರೂ. 9000 ಆಗಿರಬೇಕು.
- ಈಗ ಯಾವುದೇ ಉದ್ಯೋಗಿಯ ಚಿಕಿತ್ಸೆಗಾಗಿ ಶೇ. 87.5 ರಷ್ಟು ಖರ್ಚನ್ನು ಇಎಸ್‌ಐ ಪಾವತಿಸುತ್ತದೆ. ರಾಜ್ಯ ಸರ್ಕಾರ ಉಳಿದ ಶೇ. 12.5 ರಷ್ಟು ಭರಿಸುಸುತ್ತದೆ.
- ಮಹಿಳಾ ಉದ್ಯೋಗಿಗೆ 26 ವಾರಗಳ ಹೆರಿಗೆ ಸೌಲಭ್ಯ ಸಿಗುತ್ತದೆ. ಇದರರ್ಥ ಮಹಿಳಾ ಉದ್ಯೋಗಿ ಕಚೇರಿಗೆ ಹೋಗದೆ ಪೂರ್ಣ ಸಂಬಳ ನೀಡುವ ಅವಕಾಶವಿದೆ.
- ನೌಕರನನ್ನು ವಿಕಲಚೇತನನಾದರೆ ನೌಕರನ ಒಟ್ಟು ವೇತನದ 90 ಪ್ರತಿಶತವನ್ನು ಪಾವತಿಸುವ ಅವಕಾಶವಿದೆ.
- ಉದ್ಯೋಗಿ ನಿರುದ್ಯೋಗಿಯಾಗಿದ್ದರೆ, ಅವನು ಹೊಸ ಉದ್ಯೋಗ ಪಡೆಯುವವರೆಗೆ ಅವನಿಗೆ ಭತ್ಯೆ ನೀಡಲಾಗುತ್ತದೆ. ನಗದು ಮೊತ್ತವನ್ನು ಅವನ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ.

ಯಾವ ಉದ್ಯೋಗಿಗಳು ಇಎಸ್‌ಐ ಲಾಭ ಪಡೆಯುತ್ತಾರೆ?

ಯಾವ ಉದ್ಯೋಗಿಗಳು ಇಎಸ್‌ಐ ಲಾಭ ಪಡೆಯುತ್ತಾರೆ?

ಇಎಸ್ಐ ಯೋಜನೆಯು ಮಾಸಿಕ ಆದಾಯವು 21 ಸಾವಿರ ಗಿಂತ ಕಡಿಮೆ ಇರುವ ಉದ್ಯೋಗಿಗಳಿಗೆ ಪ್ರಯೋಜನ ನೀಡುತ್ತದೆ. ಅವರು ಕನಿಷ್ಠ 10 ಉದ್ಯೋಗಿಗಳನ್ನು ಹೊಂದಿರುವ ಕಂಪನಿಯಲ್ಲಿ ಕೆಲಸ ಮಾಡುವವರಿರಬೇಕು.

Read more about: salary money savings
English summary

Gift from the government for private company employees, high salary from August

government reduces private employees esi contribution rate from 1st july.
Story first published: Tuesday, July 9, 2019, 15:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X