For Quick Alerts
ALLOW NOTIFICATIONS  
For Daily Alerts

ಬಿಸಿನೆಸ್ ನಲ್ಲಿ ಸಕ್ಸಸ್ ಪಡೆಯೋದು ಹೇಗೆ?

ಸ್ವಂತ ಉದ್ಯಮ ಅಥವಾ ಬಿಸಿನೆಸ್ ಪ್ರಾರಂಭಿಸಿ ಯಶಸ್ವಿ ಉದ್ಯಮಿಯಾಗಬೇಕು ಎಂಬುದು ಹೆಚ್ಚಿನವರ ಬಯಕೆಯಾಗಿರುತ್ತದೆ. ಉದ್ಯಮ/ವ್ಯವಹಾರ ಪ್ರಾರಂಭಿಸುವುದು ಸುಲಭವಾದರೂ ಇದನ್ನು ಬೆಳೆಸಿ ಅಭಿವೃದ್ದಿಪಡಿಸಿ ಸಕ್ಸಸ್ ಪಡೆಯೋದು ಅಷ್ಟು ಸುಲಭವಲ್ಲ.

|

ಸ್ವಂತ ಉದ್ಯಮ ಅಥವಾ ಬಿಸಿನೆಸ್ ಪ್ರಾರಂಭಿಸಿ ಯಶಸ್ವಿ ಉದ್ಯಮಿಯಾಗಬೇಕು ಎಂಬುದು ಹೆಚ್ಚಿನವರ ಬಯಕೆಯಾಗಿರುತ್ತದೆ. ಉದ್ಯಮ/ವ್ಯವಹಾರ ಪ್ರಾರಂಭಿಸುವುದು ಸುಲಭವಾದರೂ ಇದನ್ನು ಬೆಳೆಸಿ ಅಭಿವೃದ್ದಿಪಡಿಸಿ ಸಕ್ಸಸ್ ಪಡೆಯೋದು ಅಷ್ಟು ಸುಲಭವಲ್ಲ. ವ್ಯಾಪಾರ ಅಭಿವೃದ್ದಿಗೊಳ್ಳುತ್ತಾ ಹೋಗುವುದು ಮುಖ್ಯ. ಯಾವುದೇ ವಹಿವಾಟು ತನ್ನನ್ನು ತಾನೇ ಪೋಷಿಸಿ ಹೋಗುವಂತಹದ್ದಾಗಿರಬೇಕು. ಒಂದು ವೇಳೆ ಇದು ಸಾಧ್ಯವಾಗದೇ ನಷ್ಟ ಅನುಭವಿಸುವಂತಿದ್ದರೆ? ಈಗ ಇದನ್ನು ಮತ್ತೊಮ್ಮೆ ಲಾಭದಾಯಕವಾಗಿಸುವುದು ಹೇಗೆ? ಯಶಸ್ವಿ ಉದ್ಯಮಿಯಾಗುವುದು ಹೇಗೆ?
ಈ ವಿಷಯದ ಬಗ್ಗೆ ತುಂಬಾ ಜನ ತಜ್ಞರು, ಪರಿಣಿತರು ಸಲಹೆ-ಮಾಗದರ್ಶನಗಳನ್ನು ನೀಡಿದ್ದಾರೆ. ಇಲ್ಲಿ ನೀಡಲಾಗಿರುವ ಕೆಲ ಸಲಹೆಗಳನ್ನು ಪಾಲಿಸುವ ಮೂಲಕ ಹೊಸ ಕೌಶಲವನ್ನು ಅನುಸರಿಸಿ ಬಿಸಿನೆಸ್ ಉತ್ತಮಗೊಳಿಸಬಹುದು.

 

1. ಈಗಿನ ಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡಿ

1. ಈಗಿನ ಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡಿ

ನಿಮ್ಮ ವ್ಯಾಪಾರ ಉತ್ತಮಗೊಳ್ಳಬೇಕೆಂದು ಯೋಚಿಸಿದರೆ ಮೊದಲಿಗೆ ನಿಮ್ಮ ಮನಸ್ಸಿನಲ್ಲಿ ಬರುವುದೆಂದರೆ ಹೊಸ ಗ್ರಾಹಕರನ್ನು ಪಡೆಯುವುದು. ಆದರೆ ಈಗಿನ ನಿಮ್ಮ ಗ್ರಾಹಕರೇ ನಿಮ್ಮ ವಹಿವಾಟನ್ನು ಉತ್ತಮಗೊಳಿಸುವ ಅತ್ಯುತ್ತಮ ಗ್ರಾಹಕರಾಗಿದ್ದು, ಇವರೇ ನಿಮ್ಮ ಮಾರಾಟವನ್ನು ಹೆಚ್ಚಿಸುವ ಗ್ರಾಹಕರೂ ಆಗಿದ್ದಾರೆ. ಆದ್ದರಿಂದ ಇವರೇ ನಿಮ್ಮಲ್ಲಿ ಈಗ ಕೊಳ್ಳುವುದಕ್ಕಿಂತ ಇನ್ನೂ ಹೆಚ್ಚಿನದನ್ನು ಕೊಳ್ಳುವಂತೆ ಮಾಡುವುದು ಹೊಸ ಗ್ರಾಹಕರನ್ನು ಪಡೆಯುವುದಕ್ಕಿಂತ ಸುಲಭವಾದ ವಿಧಾನವಾಗಿದೆ.

2. ಗ್ರಾಹಕರಿಂದ ಹೊಸ ಗ್ರಾಹಕರನ್ನು ಆಕರ್ಷಿಸಿ

2. ಗ್ರಾಹಕರಿಂದ ಹೊಸ ಗ್ರಾಹಕರನ್ನು ಆಕರ್ಷಿಸಿ

ಹೊಸ ಹೊಸ ಗ್ರಾಹಕರನ್ನು ಆಕರ್ಷಿಸುವುದು ತಪ್ಪೇನಲ್ಲ. ಆದರೆ ಇದಕ್ಕೂ ಸುಲಭವಾದುದೆಂದರೆ ನಿಮ್ಮ ಈಗಿನ ಗ್ರಾಹಕರಿಗೆ ತಮ್ಮ ಸ್ನೇಹಿತ ಹಾಗೂ ಕುಟುಂಬದವರನ್ನೂ ಕರೆತರುವಂತೆ ಆಕರ್ಷಿಸುವುದು ಮುಖ್ಯ. ಗ್ರಾಹಕರಿಗೆ ಬೇಕಾದುದನ್ನು ಒದಗಿಸಿ ಹೆಚ್ಚು ಹೆಚ್ಚು ವಸ್ತುಗಳನ್ನು ಅಥವಾ ಸೇವೆಯನ್ನು ನೀಡುವ ಮೂಲಕ ನಿಮ್ಮ ಗ್ರಾಹಕರನ್ನು ಇನ್ನಷ್ಟು ತೃಪ್ತಿಪಡಿಸಬಹುದೇ ವಿನಃ ಹೊಸ ಗ್ರಾಹಕರನ್ನು ಆಕರ್ಷಿಸುವುದು ಸಾಧ್ಯವಿಲ್ಲ. ಆದ್ದರಿಂದ ನೇರವಾಗಿ ನಿಮ್ಮ ಗ್ರಾಹಕರಿಗೆ ತಮ್ಮ ಪರಿಚಯದವರನ್ನೂ ಕರೆತರಲು ಹೇಳಬೇಕು. ಪ್ರತಿ ಬಾರಿ ಗ್ರಾಹಕ ನಿಮ್ಮ ಸೇವೆ ಅಥವಾ ವಸ್ತುಗಳನ್ನು ಕೊಂಡ ಬಳಿಕ ನಿಮ್ಮ ಸೇವೆ ಅವರಿಗೆ ಇಷ್ಟವಾಗಿದ್ದರೆ ತಮ್ಮ ಸ್ನೇಹಿತ-ಕುಟುಂಬದವರನ್ನೂ ಕರೆತರಲು ವಿನಂತಿಸಿಕೊಳ್ಳಬೇಕು.

3. ಉತ್ಪನ್ನ ಮತ್ತು ಸೇವೆಗಳನ್ನು ನವಿಕರಿಸಿ
 

3. ಉತ್ಪನ್ನ ಮತ್ತು ಸೇವೆಗಳನ್ನು ನವಿಕರಿಸಿ

ಕಾಲಕಾಲಕ್ಕೆ ನಿಮ್ಮ ಉತ್ಪನ್ನ ಹಾಗು ಸೇವೆಗಳನ್ನು ನವೀಕರಿಸುತ್ತಾ ಗ್ರಾಹಕರನ್ನು ಸೆಳೆಯಬೇಕು. ನಿಮ್ಮ ವ್ಯವಹಾರದ ಶೈಲಿ ಹಳೆಯ ಓಬೀರಾಯನ ಕಾಲದಲ್ಲಿದ್ದರೆ ಇರುವ ಗ್ರಾಹಕರೂ ಹೊರಟು ಹೋಗುತ್ತಾರೆ. ಹಾಗಾಗಿ ಬಿಸಿನೆಸ್ ನಲ್ಲಿ ಸದಾ ನೂತನ ಉತ್ಪನ್ನಗಳು ಹಾಗೂ ಸೇವೆಗಳು ಲಭ್ಯವಾಗುವಂತೆ ನೋಡಿಕೊಳ್ಳಿ. ಇದರಿಂದ ಈಗಿನ ಗ್ರಾಹಕರ ಜೊತೆಗೆ ಹೊಸ ಗ್ರಾಹಕರೂ ನಿಮ್ಮ ವಹಿವಾಟಿನತ್ತ ಆಕರ್ಷಿತರಾಗುತ್ತಾರೆ. ಅದರಲ್ಲೂ ಒಂದಕ್ಕಿಂತ ಹೆಚ್ಚಿನ ಬಳಕೆ ಇರುವಂತಹ ಉತ್ಪನ್ನಗಳಾದ ಪೆಟ್ರೋಲಿಯಂ ಜೆಲ್ಲಿ ಅಥವಾ ಅಂಟು ಟೇಪ್ ಮೊದಲಾದ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಿ.

4. ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಿ

4. ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಿ

ನಿಮ್ಮ ಉತ್ಪನ್ನ ಅಥವಾ ಸೇವೆ ಒಂದು ವಲಯಕ್ಕೆ ಸೀಮಿತವಾಗಿರದೆ, ಇದರ ವ್ಯಾಪ್ತಿ ವಿಸ್ತರಿಸುತ್ತಾ ಸಾಗಬೇಕು. ಇದನ್ನು ವಿಸ್ತರಿಸುವತ್ತ ಸೂಕ್ತ ಕ್ರಮಗಳನ್ನು ಕೈಗೊಳ್ಳಿ. ಇದರಿಂದ ಹೊಸ ಗ್ರಾಹಕರನ್ನು ಪಡೆಯುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಹೊಸ ಊರು ಅಥವಾ ಬಡಾವಣೆಯಲ್ಲಿ ಅಂಗಡಿ ತೆರೆಯುವುದು, ಆನ್ಲೈನ್ ವ್ಯಾಪಾರ, ಈಗಿರುವ ವ್ಯಾಪಾರವನ್ನು ಆನ್ಲೈನ್ ಮೂಲಕ ವಿಸ್ತರಿಸುವುದು ಇತ್ಯಾದಿ. ಇನ್ನೊಂದು ವಿಧಾನವೆಂದರೆ ಜಾಹೀರಾತಿನ ಮೂಲಕ ಇನ್ನೂ ತಲುಪದ ಸ್ಥಳಕ್ಕೆ ತಲುಪುವುದು. ಹೊಸ ವಾಣಿಜ್ಯ ವಲಯವನ್ನು ಗುರುತಿಸಿ ಇಲ್ಲಿನ ಸ್ಥಳೀಯ ಮಾಧ್ಯಮಗಳ ಮೂಲಕ ಹೊಸ ಗ್ರಾಹಕರನ್ನು ಸೆಳೆಯುವಂತೆ ಮಾಡಬಹುದು. ಈ ವಲಯದಲ್ಲಿ ಹೆಚ್ಚು ಯುವಜನರಿದ್ದರೆ ಅವರ ನೆಚ್ಚಿನ ಸಾಮಾಜಿಕ ಜಾಲತಾಣಗಳನ್ನು ಬಳಸಬಹುದು.

5. ವಾಣಿಜ್ಯ ಪ್ರದರ್ಶನದಲ್ಲಿ ಭಾಗವಹಿಸಿ

5. ವಾಣಿಜ್ಯ ಪ್ರದರ್ಶನದಲ್ಲಿ ಭಾಗವಹಿಸಿ

ವಾಣಿಜ್ಯ ಪ್ರದರ್ಶನದಲ್ಲಿ ಭಾಗವಹಿಸುವುದು ಉದ್ಯಮದ ಯಶಸ್ಸಿಗೆ ತುಂಬಾ ಸಹಕಾರಿ. ಈ ಪ್ರದರ್ಶನಗಳಲ್ಲಿ ಒಂದೇ ಸ್ಥಳದಲ್ಲಿ ಒಂದು ಬಗೆಯ ವಾಣಿಜ್ಯ ವಹಿವಾಟಿನಲ್ಲಿ ತೊಡಗಿರುವ ವ್ಯಕ್ತಿಗಳು ಸೇರುವ ಮೂಲಕ ಯಾವ ಸೇವೆ ಅಥವಾ ಉತ್ಪನ್ನಗಳು ಹೊಸದಾಗಿ ಪರಿಚಯಿಸಲ್ಪಟ್ಟಿವೆ, ಇಲ್ಲಿ ನಿಮ್ಮ ಪಾತ್ರ ಏನಾಗಬಹುದು, ಏನನ್ನು ನೀಡಬೇಕು ಎಂಬ ಬಗ್ಗೆ ಸ್ಥೂಲವಾದ ಮಾಹಿತಿ ದೊರಕುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಿಮ್ಮ ವಹಿವಾಟಿಗೆ ಸೂಕ್ತವಾದ ಪ್ರದರ್ಶನಗಳಲ್ಲಿ ಮಾತ್ರವೇ ಭಾಗವಹಿಸಬೇಕು. ಆಗ ಮಾತ್ರ ನಿಮ್ಮ ಬಂಡವಾಳಕ್ಕೆ ಅರ್ಹವಾದ ಪ್ರತಿಫಲ ಸಿಗುವ ಅವಕಾಶ ಲಭಿಸುತ್ತದೆ.

6. ಸೂಕ್ತ ಸ್ಥಾನ, ಸೂಕ್ತ ವ್ಯವಹಾರ

6. ಸೂಕ್ತ ಸ್ಥಾನ, ಸೂಕ್ತ ವ್ಯವಹಾರ

ಎಷ್ಟೋ ವಹಿವಾಟುಗಳು ಕೇವಲ ಮಾರುಕಟ್ಟೆಯ, ಸ್ಥಳದ ಮಹಾತ್ಮೆಯಿಂದಲೇ ಯಶಸ್ಸು ಗಳಿಸುತ್ತವೆ. ಉದಾಹರಣೆಗೆ ರೈಲ್ವೇ ನಿಲ್ದಾಣದ ಟೀ ಅಂಗಡಿ. ನಿಮ್ಮ ವಾಣಿಜ್ಯ ವಹಿವಾಟು ಅಭಿವೃದ್ದಿಗೊಳ್ಳಬೇಕಾದರೆ ಇಂತಹ ಸ್ಥಳಗಳನ್ನು ಗುರುತಿಸುವುದು ಮುಖ್ಯ. ಅದರಲ್ಲೂ ಕೆಲವು ಸ್ಥಳಗಳಿಗೆ ಕೆಲವು ಬಗೆಯ ಗ್ರಾಹಕರು ಮಾತ್ರವೇ ಬರುತ್ತಾರೆ. ಇದನ್ನು ಗಮನಿಸುವುದೂ ಅಗತ್ಯ. ಇಲ್ಲಿ ಬರುವ ಜನರ ಅಗತ್ಯವನ್ನು ಮನಗಂಡು ಆ ನಿಟ್ಟಿನಲ್ಲಿಯೇ ನಿಮ್ಮ ವಹಿವಾಟನ್ನು ಮುಂದುವರೆಸುವುದು ಹಾಗೂ ಅವರಿಗೆ ಇಷ್ಟವಾಗಬಹುದಾದ ವಸ್ತು ಅಥವಾ ಸೇವೆಗಳನ್ನು ನೀಡುವುದೇ ಅಭಿವೃದ್ದಿಯ ಮಂತ್ರವಾಗಿದೆ. ಉದಾಹರಣೆಗೆ ಕೇವಲ ಗುಲಾಬಿ ಹೂವುಗಳನ್ನು ಮಾರುವ ಅಂಗಡಿಯಲ್ಲಿ ಮನೆಯ ಕಿಟಕಿಯ ಅಂದವನ್ನು ಹೆಚ್ಚಿಸುವ ಸೇವೆಯನ್ನು ಹೆಚ್ಚುವರಿಯಾಗಿ ನೀಡುವತ್ತ ಗಮನಹರಿಸಿದರೆ ಗ್ರಾಹಕರು ಹೆಚ್ಚು ಆಕರ್ಷಿತರಾಗುತ್ತಾರೆ.

7. ಮೂಲ ವೆಚ್ಚಗಳನ್ನು ಕಡಿಮೆಗೊಳಿಸಿ

7. ಮೂಲ ವೆಚ್ಚಗಳನ್ನು ಕಡಿಮೆಗೊಳಿಸಿ

ನಾವು ವಾಣಿಜ್ಯ ವಹಿವಾಟನ್ನು ಹೆಚ್ಚಿಸುವ ಬಗ್ಗೆ ಮಾತನಾಡುವಾಗ ವಾಸ್ತವದಲ್ಲಿ ಈ ವಹಿವಾಟಿನ ಮೂಲವನ್ನು ದೃಢಪಡಿಸುವ ಬಗ್ಗೆ ಎಚ್ಚರವಹಿಸಬೇಕು. ಇಂದಿನ ದಿನಗಳಲ್ಲಿ ತೆರಿಗೆಯ ಬಗ್ಗೆ ಹೆಚ್ಚು ಎಚ್ಚರಿಕೆಯಿಂದಿರಬೇಕು. ತೆರಿಗೆಗೂ ಮುನ್ನ ಹಾಗೂ ತೆರಿಗೆಯ ಬಳಿಕ ತಗಲುವ ವೆಚ್ಚ ಅಭಿವೃದ್ದಿಯ ಮೇಲೆ ಪರಿಣಾಮ ಬೀರಬಹುದು. ಮೂಲವೆಚ್ಚಗಳನ್ನು ಕನಿಷ್ಟವಾಗಿಸಲು ಎರಡು ವಿಧಾನಗಳಿವೆ. ಒಂದು ಲಾಭಕರವಲ್ಲದ ಉತ್ಪನ್ನಗಳನ್ನು ಹೇಗಾದರೂ ನಿವಾರಿಸುವುದು ಹಾಗೂ ಲಾಭ ತರುವಂತಹ ಉತ್ಪನ್ನಗಳನ್ನು ಹೆಚ್ಚಿಸುವುದು.

8. ಉತ್ಪನ್ನ/ಸೇವೆಗಳನ್ನು ವೈವಿದ್ಯಗೊಳಿಸಿ

8. ಉತ್ಪನ್ನ/ಸೇವೆಗಳನ್ನು ವೈವಿದ್ಯಗೊಳಿಸಿ

ನಿಮ್ಮಲ್ಲಿರುವ ಉತ್ಪನ್ನ ಅಥವಾ ಸೇವೆಗಳಿಗೆ ಪೂರಕವಾದ ಉತ್ಪನ್ನ/ಸೇವೆಗಳನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ಗ್ರಾಹಕರಿಗೆ ಒಂದೇ ಸ್ಥಳದಲ್ಲಿ ಎಲ್ಲವೂ ದೊರಕುತ್ತದೆ ಎಂಬ ಭಾವನೆ ಬರುತ್ತದೆ ಹಾಗೂ ಗ್ರಾಹಕರು ಇದನ್ನು ಇಷ್ಟ ಪಡುತ್ತಾರೆ. ಉದಾಹರಣೆಗೆ ಸುಂದರ ವರ್ಣಚಿತ್ರಗಳನ್ನು ಬಿಡಿಸಿದ ಕಲಾವಿದ ಕೇವಲ ವರ್ಣಚಿತ್ರಗಳನ್ನು ಮಾತ್ರವೇ ಮಾರಿದರೆ ಸಾಲದು. ಇದಕ್ಕೆ ಬೇಕಾಗುವ ಚೌಕಟ್ಟು ಹಾಗೂ ಇತರ ಸಾಮಾಗ್ರಿಗಳನ್ನೂ ಮಾರುವಂತಿರಬೇಕು. ಬೆಟ್ಟದ ಮೇಲೆ ಬೈಕುಗಳನ್ನು ಬಾಡಿಗೆಗೆ ನೀಡುವ ಅಂಗಡಿ ಸ್ಕೀ ಹಾಗೂ ಸ್ನೋಶೂಗಳನ್ನು ಚಳಿಗಾಲದಲ್ಲಿ ನೀಡುವ ಬಗ್ಗೆ ಯೋಚಿಸಬೇಕು.

9. ಪ್ರಾಂಚೈಸಿ (franchising)

9. ಪ್ರಾಂಚೈಸಿ (franchising)

ದೊಡ್ಡ ದೊಡ್ಡ ಉದ್ಯಮಿಗಳು ಯಶಸ್ವಿಯಾಗಲು ಇವರು ತಮ್ಮ ವಹಿವಾಟಿನ ಕೆಲವು ಭಾಗಗಳನ್ನು ಬೇರೆಯವರಿಗೆ ವಹಿಸಿ ಕೊಟ್ಟಿರುವುದೇ ಮುಖ್ಯ ಕಾರಣವಾಗಿದೆ. ಹೀಗೆ ಯಶಸ್ವಿಯಾದದ್ದು ಕೇವಲ ಕಥೆಗಳಲ್ಲ, ಬದಲಿಗೆ ಪ್ರೇರಣೆ ನೀಡುವ ಸತ್ಯ ಸಂಗತಿಗಳೇ ಆಗಿವೆ. ಒಂದು ವೇಳೆ ಈಗ ನಿಮ್ಮ ವಹಿವಾಟು ಯಶಸ್ವಿಯಾಗಿ ನಡೆಯುತ್ತಿದ್ದು ಇನ್ನೂ ಮುಂದುವರೆಸಬೇಕಿದ್ದರೆ ನಿಮ್ಮದೇ ವಹಿವಾಟಿನ ನಕಲನ್ನು ಇನ್ನೊಬ್ಬರಿಗೆ ನಡೆಸಲು ವಹಿಸಿಕೊಡುವುದು (franchising) ಒಂದು ಉತ್ತಮ ತಂತ್ರವಾಗಿದೆ. ಇದರಿಂದ ನಿಮ್ಮ ವಹಿವಾಟು ದ್ವಿಗುಣವಾದಂತಾಯಿತು, ನಿಮ್ಮಿಂದ ಇನ್ನೊಬ್ಬರಿಗೆ ನೆರವೂ ಸಿಕ್ಕಿದಂತಾಯಿತು.

10. ರಫ್ತು, ಅಂತಾರಾಷ್ಟ್ರೀಯ ಮಾರುಕಟ್ಟೆ

10. ರಫ್ತು, ಅಂತಾರಾಷ್ಟ್ರೀಯ ಮಾರುಕಟ್ಟೆ

ನಿಮ್ಮ ಉತ್ಪನ್ನಗಳಿಗೆ ಯಾವಾಗ ಅಂತಾರಾಷ್ಟ್ರೀಯ ಮಾರುಕಟ್ಟೆ ದೊರಕಿತೋ, ಆಗ ನಿಮ್ಮ ವಹಿವಾಟಿನ ಯಶಸ್ಸಿನ ನಾಗಾಲೋಟ ಪ್ರಾರಂಭವಾಯಿತೆಂದೇ ಲೆಕ್ಕ. ವಹಿಸಿಕೊಡುವಂತೆಯೇ (franchising) ನಿಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಸೂಕ್ತ ಏಜೆಂಟರನ್ನು ಸಂಪರ್ಕಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಸಾಧ್ಯ. ಆದರೆ ಇದಕ್ಕೆ ಸಾಕಷ್ಟು ಸಿದ್ಧತೆ, ಗುಣಮಟ್ಟ ಕಾಪಾಡುವುದು ಹಾಗೂ ರಫ್ತು ಮಾಡುವ ಸ್ಥಳದಲ್ಲಿ ನಿಮ್ಮ ಉತ್ಪನ್ನಗಳಿಗೆ ಇರುವ ಬೇಡಿಕೆ ಮೊದಲಾದ ಹತ್ತು ಹಲವು ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ.

ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ? ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

English summary

How to become a Successful Businessman?

Learning how to grow your business isn’t just a worthy goal; growing your business is often a necessity for your business’s survival and your economic well-being.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X