For Quick Alerts
ALLOW NOTIFICATIONS  
For Daily Alerts

ವಾಟ್ಸಾಪ್ ಬಳಕೆದಾರರಿಗೆ ಸಿಹಿಸುದ್ದಿ!

ದೇಶದಲ್ಲಿ ಹೆಚ್ಚಿನ ಗ್ರಾಹಕರು ಡಿಜಿಟಲ್ ವಹಿವಾಟುಗಳತ್ತ ವಾಲುತ್ತಿದ್ದು, ಡಿಜಿಟಲ್ ಪೇಮೆಂಟ್ ಪ್ರವೃತ್ತಿ ಹೆಚ್ಚಾಗುತ್ತಿದೆ. ಡಿಜಿಟಲೀಕರಣದ ಮಹತ್ವ ಅರಿತಿರುವ ಹಲವಾರು ಸಂಸ್ಥೆಗಳು ಡಿಜಿಟಲ್ ಪೇಮೆಂಟ್ಸ್ ಸೌಲಭ್ಯ ಪೂರೈಸುತ್ತಿವೆ.

|

ದೇಶದಲ್ಲಿ ಹೆಚ್ಚಿನ ಗ್ರಾಹಕರು ಡಿಜಿಟಲ್ ವಹಿವಾಟುಗಳತ್ತ ವಾಲುತ್ತಿದ್ದು, ಡಿಜಿಟಲ್ ಪೇಮೆಂಟ್ ಪ್ರವೃತ್ತಿ ಹೆಚ್ಚಾಗುತ್ತಿದೆ. ಡಿಜಿಟಲೀಕರಣದ ಮಹತ್ವ ಅರಿತಿರುವ ಹಲವಾರು ಸಂಸ್ಥೆಗಳು ಡಿಜಿಟಲ್ ಪೇಮೆಂಟ್ಸ್ ಸೌಲಭ್ಯ ಪೂರೈಸುತ್ತಿವೆ. ಇದೀಗ ವಾಟ್ಸಾಪ್ ಸಂಸ್ಥೆ ಕೂಡ ಪೇಮೆಂಟ್ ಸರ್ವಿಸ್ ನೀಡುವ ಸಾದ್ಯತೆ ಇದೆಯೆಂದು ಹೇಳಿದೆ.

ವಾಟ್ಸಾಪ್ ಬಳಕೆದಾರರಿಗೆ ಸಿಹಿಸುದ್ದಿ!

ಜಗತ್ತಿನಾದ್ಯಂತ ಬಹಳ ಪ್ರಮಾಣದಲ್ಲಿ ಗ್ರಾಹಕರನ್ನು ಹೊಂದಿರುವ ವಾಟ್ಸಾಪ್, ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಸೇವೆ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಮೆಸೇಜಿಂಗ್ ಅಪ್ಲಿಕೇಶನ್ ಸಂಸ್ಥೆ ವಾಟ್ಸ್ಆಪ್ ಭಾರತದಲ್ಲಿ ಸುಮಾರು 400 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ದೇಶದಲ್ಲಿ ಕಳೆದ ವರ್ಷದಿಂದ ತನ್ನ ಪೇಮೆಂಟ್ಸ್ಗಳನ್ನು ಸುಮಾರು ಒಂದು ಮಿಲಿಯನ್ ಬಳಕೆದಾರರೊಂದಿಗೆ ಪರೀಕ್ಷಿಸುತ್ತಿದೆ.
ಪೇಟಿಎಂ, ಫೋನ್‌ಪೇ ಮತ್ತು ಗೂಗಲ್ ಪೇ ಮುಂತಾದ ಕಂಪನಿಗಳ ವಿರುದ್ಧ ಸ್ಪರ್ಧಿಸುವ ವಾಟ್ಸಾಪ್ ಸೇವೆಯನ್ನು ಭಾರತದಲ್ಲಿ ಇನ್ನೂ ಪರಿಚಯಿಸಬೇಕಿದೆ. ಜಾಗತಿಕವಾಗಿ 1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಒಡೆತನದ ಈ ಕಂಪನಿಯು ಇತರ ಮಾರುಕಟ್ಟೆಗಳಲ್ಲೂ ತನ್ನ ಪಾವತಿ ಸೇವೆಯನ್ನು ಹೊರತರುತ್ತಿದೆ.
ವಾಟ್ಸಾಪ್ ಆಪ್ ಪೇಮೆಂಟ್ ಬಗ್ಗೆ ಚರ್ಚೆ ನಡೆಯುತ್ತಿದ್ದು, ಬಳಕೆದಾರರಿಗೆ ಸುಲಭವಾಗುವ ಮಾರ್ಗವನ್ನು ಹುಡುಕಲಾಗುತ್ತಿದೆ. ವಾಟ್ಸಾಪ್ ಆಪ್ ಪೇಮೆಂಟ್ ಸೇವೆ ಪರಿಚಯಿಸಿದರೆ ಉಳಿದ ಪೇಮೆಂಟ್ ಆಪ್ ಗಳಿಗೆ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆಯಿದೆ. ಪೇಟಿಎಂ, ಗೂಗಲ್ ಪೇ ಜೊತೆ ವಾಟ್ಸಾಪ್ ಆ್ಯಪ್ ಪೇಮೆಂಟ್ ಸೇವೆಯಲ್ಲಿ ಪೈಪೋಟಿ ನೀಡಲಿದೆ.

English summary

WhatsApp confirms to roll out its payment services soon in India

WhatsApp Global Head Will Cathcart on Wednesday said the company could roll out its payments service to users across India later this year.
Story first published: Friday, July 26, 2019, 11:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X