For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್, ಎಂಟಿಎನ್ಎಲ್ 1.98 ಲಕ್ಷ ಉದ್ಯೋಗಿಗಳ ಜುಲೈ ವೇತನ ಬಾಕಿ

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ತನ್ನ ಉದ್ಯೋಗಿಗಳ ಸಂಬಳ ಪಾವತಿಸಲು ವಿಫಲವಾಗಿದೆ.

|

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ತನ್ನ ಉದ್ಯೋಗಿಗಳ ಸಂಬಳ ಪಾವತಿಸಲು ವಿಫಲವಾಗಿದೆ.

ಬಿಎಸ್ಎನ್ಎಲ್, ಎಂಟಿಎನ್ಎಲ್ ಉದ್ಯೋಗಿಗಳ  ಜುಲೈ ವೇತನ ಬಾಕಿ

ಬಿಎಸ್ ಎನ್ ಎಲ್ ಮತ್ತು ಎಂಟಿಎನ್ ಎಲ್ (ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್) ಸುಮಾರು 1.98 ಲಕ್ಷ ಉದ್ಯೋಗಿಗಳಿಗೆ ಜುಲೈ ತಿಂಗಳ ಸಂಬಳವನ್ನು ಪಾವತಿಸಲು ವಿಫಲವಾಗಿದೆ ಎಂದು ಯೂನಿಯನ್ ಮುಖಂಡರು ಗುರುವಾರ ತಿಳಿಸಿದ್ದಾರೆ.
ಬಿಎಸ್ಎನ್ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಪುರ್ವಾರ್ ಅವರು, ಆಗಸ್ಟ್ 5 ರಂದು ನೌಕರರಿಗೆ ಜುಲೈ ತಿಂಗಳ ವೇತನ ಸಿಗಲಿದೆ ಎಂದು ತಿಳಿಸಿದ್ದಾರೆ. ಆದರೆ ವೇತನ ವಿತರಣೆಯ ಬಗ್ಗೆ ವ್ಯವಸ್ಥಾಪಕರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಯೂನಿಯನ್ ಮುಖಂಡರು ಹೇಳಿದ್ದಾರೆ.
ಜುಲೈ ತಿಂಗಳ ವೇತನ ಬಂದಿಲ್ಲ. ಇದು ಯಾವಾಗ ಪಾವತಿಸುತ್ತಾರೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ ಎಂದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಎಯುಎಬಿ) ಸಂಚಾಲಕ ಪಿ. ಅಭಿಮನ್ಯು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಭಾರತದಾದ್ಯಂತ ಬಿಎಸ್‌ಎನ್‌ಎಲ್ 1.76 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದರೆ, ಎಂಟಿಎನ್‌ಎಲ್ ಸುಮಾರು 22,000 ಉದ್ಯೋಗಿಗಳನ್ನು ಹೊಂದಿದೆ. ನೌಕರರ ವೇತನವನ್ನು ಪ್ರತಿ ತಿಂಗಳ ಕೊನೆಯ ದಿನಾಂಕದಂದು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಆದಾಗ್ಯೂ, ಈ ವರ್ಷ ಸಂಬಳ ಪಾವತಿಸುವಲ್ಲಿ ಎರಡು ಕಂಪನಿಗಳು ಎರಡು ಬಾರಿ ವಿಫಲವಾಗಿವೆ.

Read more about: bsnl salary money
English summary

BSNL, MTNL fail to pay July salary to 1.98 lakh employees

Loss-making telecom PSUs Bharat Sanchar Nigam Ltd and MTNL have failed to clear salaries of their 1.98 lakh employees for July in time, a union leader said on Thursday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X