For Quick Alerts
ALLOW NOTIFICATIONS  
For Daily Alerts

ಯುಎಸ್-ಚೀನಾ ವಾಣಿಜ್ಯ ಸಮರ ಎಫೆಕ್ಟ್! ಸೆನ್ಸೆಕ್ಸ್ 350 ಅಂಕ ಕುಸಿತ

ಶುಕ್ರವಾರ ಆರಂಭದ ವಹಿವಾಟಿನಲ್ಲಿ ದೇಶೀಯ ಷೇರು ಮಾರುಕಟ್ಟೆಗಳು ತೀವ್ರ ನಷ್ಟವನ್ನು ದಾಖಲಿಸಿದ್ದು, ಷೇರುಪೇಟೆ ನಿನ್ನೆಯಿಂದ ತೀವ್ರ ಒತ್ತಡಕ್ಕೆ ಒಳಗಾಗಿದೆ.

|

ಶುಕ್ರವಾರ ಆರಂಭದ ವಹಿವಾಟಿನಲ್ಲಿ ದೇಶೀಯ ಷೇರು ಮಾರುಕಟ್ಟೆಗಳು ತೀವ್ರ ನಷ್ಟವನ್ನು ದಾಖಲಿಸಿದ್ದು, ಷೇರುಪೇಟೆ ನಿನ್ನೆಯಿಂದ ತೀವ್ರ ಒತ್ತಡಕ್ಕೆ ಒಳಗಾಗಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ 401.34 ಪಾಯಿಂಟ್ ಕುಸಿದು ಕಂಡು 36,616.98 ಅಂಶಗಳಿಗೆ ತಲುಪಿದರೆ, ಎನ್ಎಸ್ಇ ನಿಫ್ಟಿ ಸೂಚ್ಯಂಕವು 123 ಪಾಯಿಂಟ್ ಕುಸಿತದೊಂದಿಗೆ 10,856.90 ಕ್ಕೆ ತಲುಪಿದೆ.

ಯುಎಸ್-ಚೀನಾ ವಾಣಿಜ್ಯ ಸಮರ ಎಫೆಕ್ಟ್! ಸೆನ್ಸೆಕ್ಸ್ 350 ಅಂಕ ಕುಸಿತ

ಬ್ಯಾಂಕಿಂಗ್, ಆಟೋ ಮತ್ತು ಲೋಹದ ವಲಯಗಳಲ್ಲಿನ ಷೇರುಗಳಲ್ಲಿನ ನಷ್ಟವು ಮಾರುಕಟ್ಟೆಯನ್ನು ಕೆಳಕ್ಕೆ ತಳ್ಳಿದೆ.
ಬೆಳಿಗ್ಗೆ 9:51 ಕ್ಕೆ ಸೆನ್ಸೆಕ್ಸ್ ಸೂಚ್ಯಂಕವು 321.59 ಪಾಯಿಂಟ್‌ ಕುಸಿತ ಕಂಡು 36,696.73ಕ್ಕೆ ತಲುಪಿದರೆ, ನಿಫ್ಟಿ ಸುಚ್ಯಂಕ 102.90 ಪಾಯಿಂಟ್‌ಗಳಷ್ಟು ನಷ್ಟ ಕಂಡು 10,877.10 ಕ್ಕೆ ವಹಿವಾಟು ನಡೆಸಿದೆ. ಆ ಸಮಯದಲ್ಲಿ ಗೇಲ್ ಇಂಡಿಯಾ, ಹೀರೋ ಮೊಟೊಕಾರ್ಪ್, ಒಎನ್‌ಜಿಸಿ, ಕೋಲ್ ಇಂಡಿಯಾ, ಎಚ್‌ಸಿಎಲ್ ಟೆಕ್, ಹಿಂಡಾಲ್ಕೊ ಮತ್ತು ವೇದಾಂತ ಕಂಪನಿಗಳು ಶೇ. 2.17 ರಿಂದ 3.15 ರಷ್ಟು ನಷ್ಟವನ್ನು ಎದುರಿಸುತ್ತಿದ್ದವು. ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಸೆನ್ಸೆಕ್ಸ್‌ನಲ್ಲಿ ಧನಾತ್ಮಕವಾಗಿ ಸಾಗಿದ್ದವು.
ಯುಎಸ್-ಚೀನಾ ನಡುವಿನ ವಾಣಿಜ್ಯ ಮಾತುಕತೆ ಮತ್ತು ಜಾಗತಿಕ ಮಂದಗತಿಯ ಪ್ರಭಾವ ಮತ್ತು ಕಳವಳಗಳು ಮಾರುಕಟ್ಟೆಗಳನ್ನು ಬೆಚ್ಚಿ ಬೀಳಿಸುತ್ತಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಯುಎಸ್-ಚೀನಾ ವ್ಯಾಪಾರ ಮಾತುಕತೆ, ಎಫ್‌ಪಿಐಗಳ ಮೇಲಿನ ತೆರಿಗೆ, ಆರ್ಥಿಕ ಕುಸಿತ ಮತ್ತು ಹೆಚ್ಚಿನ ವಲಯಗಳಿಗೆ ಹರಿಯುವ ಸಾಲದ ಬಿಕ್ಕಟ್ಟು ಹೀಗೆ ಹಲವಾರು ಅಂಶಗಳು ಷೇರುಪೇಟೆಯ ಏರಿಳಿತಕ್ಕೆ ಕಾರಣವಾಗಿದೆ. ವಾಹನ ಮಾರಾಟ ಕುಸಿತ ಈಗಾಗಲೇ ಕಳವಳಕ್ಕೆ ಕಾರಣವಾಗಿದೆ.
ನಿನ್ನೆ ಗುರುವಾರ ಸೆನ್ಸೆಕ್ಸ್ ಸೂಚ್ಯಂಕವು 462.80 ಅಂಕಗಳ ಕುಸಿತದೊಂದಿಗೆ 37,018.32 ಮಟ್ಟದಲ್ಲೂ ಹಾಗು ನಿಫ್ಟಿ ಸೂಚ್ಯಂಕ 138 ಪಾಯಿಂಟ್‌ಗಳ ಕುಸಿತದೊಂದಿಗೆ 10,980 ಮಟ್ಟಕ್ಕೆ ದಿನದ ವಹಿವಾಟನ್ನು ಅಂತ್ಯಗೊಳಿಸಿದ್ದವು. ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ದರ ಕಡಿತದ ಬಗ್ಗೆ ನೀಡಿದ ಕಾಮೆಂಟ್‌ಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ಮೇಲೆ ಭಾರೀ ಪ್ರಭಾವ ಬೀರಿ ಭಾರತೀಯ ಷೇರುಗಳು ಗುರುವಾರ ಇಸ್ಪೀಟ್ ಎಲೆಗಳಂತೆ ಮುಳುಗುತ್ತ ಐದು ತಿಂಗಳ ಕನಿಷ್ಠ ಮಟ್ಟದಲ್ಲಿ ಕೊನೆಗೊಂಡಿತ್ತು.

English summary

US-China Trade war effect! Sensex Slumps 350 Point

BSE Sensex index fell as much as 401.34 points in early trade to 36,616.98, and the broader NSE Nifty benchmark moved to 10,856.90.
Story first published: Friday, August 2, 2019, 10:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X