For Quick Alerts
ALLOW NOTIFICATIONS  
For Daily Alerts

ಇವು ಪೇಟೆಯ ಮಂಥನದಲ್ಲಿ ದೊರೆವ ಬೆಣ್ಣೆಯೇ?

ಪ್ರಸ್ತುತ ಷೇರುಪೇಟೆ ಭಾರೀ ಏರಿಳಿತಕ್ಕೆ ಒಳಗಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಉತ್ತಮ ಆದಾಯವನ್ನು ಸೂಚಿಸುತ್ತಿದೆಯೇ ಎಂಬ ವಿಶ್ಲೇಷಣೆ, ಆಕಾಂಕ್ಷೆಗಳು ಹೆಚ್ಚಾಗಿವೆ!

By ಕೆ ಜಿ ಕೃಪಾಲ್
|

ಷೇರುಪೇಟೆಯ ವಿಶ್ಲೇಷಕರು, ತರಬೇತುದಾರರು ತಮ್ಮ ಭಾಷಣಗಳಲ್ಲಿ ಸಾಮಾನ್ಯವಾಗಿ 90ರ ದಶಕದಲ್ಲಿ ಇನ್ಫೋಸಿಸ್, ವಿಪ್ರೋದಂತಹ ಕಂಪೆನಿಗಳಲ್ಲಿ ಹತ್ತು ಸಾವಿರ ರೂಪಾಯಿಗಳು ಹೂಡಿಕೆ ಮಾಡಿದವರಿಗೆ ಕೋಟಿಗಟ್ಟಲೆ ಹಣದ ಲಾಭ ಗಳಿಕೆಯಾಗಿದೆ. ಹಾಗಾಗಿ ಹೂಡಿಕೆಯನ್ನು ದೀರ್ಘಕಾಲೀನವಾಗಿರಬೇಕು ಎಂದು ವಾದಿಸುತ್ತಾರೆ. ಅದೇ ರೀತಿ ಈಗಲು ನೀವು ಹೂಡಿಕೆ ಮಾಡುವುದನ್ನು ತಿಳಿಯಿರಿ ಎಂದು ಪ್ರತಿಪಾದಿಸುತ್ತಾರೆ. ಒಂದು ಮುಖ್ಯ ಬದಲಾವಣೆ ಎಂದರೆ ಆಗ ತಾಂತ್ರಿಕತೆಯಳವಡಿಕೆಯಾಗದ ದಿನಗಳಾಗಿದ್ದವು. ಎಲ್ಲವನ್ನು ದೈಹಿಕವಾಗಿ ನಿರ್ವಹಿಸುವ ಕಾಲವದು. ಸಂಪರ್ಕದ ಕೊರತೆಯಿಂದ ಮೊದಲು ಮಾಹಿತಿ ಪಡೆದವರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಂತಹ ಕಾಲವದು. ಕಂಪನಿಗಳು ವರ್ಷಕ್ಕೊಮ್ಮೆ ತಮ್ಮ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸುತ್ತಿದ್ದವು. ಈ ಅಂಶಗಳು ಮುಂದಿನ ವರ್ಷದ ಅಂಕಿ ಅಂಶಗಳು ಪ್ರಕಟವಾಗುವವರೆಗೂ ತಮ್ಮ ಪ್ರಭಾವ ಬಿರುತ್ತಿದ್ದವು. ಇಪಿಎಸ್, ಪಿ ಇ, ಬುಕ್ ವ್ಯಾಲ್ಯೂ, ಮುಂತಾದವುಗಳು ಸುಧೀರ್ಘವಾಗಿರುತ್ತಿದ್ದವು. ಈಗಿನ ಬದಲಾವಣೆ ಎಂದರೆ ಪ್ರತಿಯೊಂದು ಬೆಳವಣಿಗೆ, ಬದಲಾವಣೆಗಳು, ಸುದ್ಧಿಗಳು ಕ್ಷಣಾರ್ಧದಲ್ಲಿ ವಿಶ್ವವ್ಯಾಪಿಯಾಗುತ್ತದೆ. ಈ ಕಾರಣದಿಂದಾಗಿ ಹೆಚ್ಚು ಪಾರದರ್ಶಿಕತೆಯನ್ನು ಸೃಷ್ಟಿಮಾಡಲು ಕಂಪನಿಗಳು ಮೂರು ತಿಂಗಳಿಗೊಮ್ಮೆ ತಮ್ಮ ಅನ್ ಆಡಿಟೆಡ್ ಫಲಿತಾಂಶ ಪ್ರಕಟಿಸುವ ನಿಯಮ ಜಾರಿಗೊಳಿಸಲಾಯಿತು. ಈಗಿನ ಬದಲಾವಣೆಗಳ ವೇಗ ಗಮನಿಸಿದಾಗ ಮುಂದೆ ಕಂಪನಿಗಳು ತಮ್ಮ ಫಲಿತಾಂಶಗಳನ್ನು ಪ್ರತಿ ತಿಂಗಳಿಗೊಮ್ಮೆ ಜಾರಿಗೊಳಿಸಬೇಕಾಗಬಹುದು. ಅಂದರೆ ಕಂಪನಿಗಳ ಸಾಧನೆಯ ಅಂಶಗಳನ್ನು ಆಗಿಂದ್ದಾಗ್ಗೆ ಪ್ರಕಟಿಸುತ್ತಿದ್ದಲ್ಲಿ ಆ ಅಂಶಗಳು ಸಹಜವಾಗಿ ಪ್ರಭಾವ ಬಿರುವುದರಿಂದ ಹೆಚ್ಚಿನ ಏರಿಳಿತಗಳನ್ನು ಉಂಟುಮಾಡುವುದರಿಂದ ದೀರ್ಘಕಾಲೀನ ಎಂದುದನ್ನು ಅರ್ಥಹೀನವನ್ನಾಗಿಸುತ್ತದೆ.

ಷೇರುಪೇಟೆ ಮತ್ತು ವಿಶ್ಲೇಷಣೆ

ಷೇರುಪೇಟೆ ಮತ್ತು ವಿಶ್ಲೇಷಣೆ

ವಿಶ್ಲೇಷಣೆಗಳು ಯಾವ ರೀತಿ ಇರುತ್ತದೆ ಎಂದರೆ ಸೆಪ್ಟೆಂಬರ್ ಕೊನೆವಾರದಲ್ಲಿ ಸೆನ್ಸೆಕ್ಸ್ ೩೧,೨೦೦ ರಲ್ಲಿದ್ದಾಗ ಮಾರ್ಗನ್ ಸ್ಟಾನ್ಲಿ 'ಮುಂದಿನ ಹತ್ತು ವರ್ಷಗಳಲ್ಲಿ ಸೆನ್ಸೆಕ್ಸ್ ಒಂದು ಲಕ್ಷ ಪಾಯಿಂಟುಗಳನ್ನು ತಲುಪಲಿದೆ' ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ೨೦೧೯ ರ ಜುಲೈ ನಲ್ಲಿ ೪೦ ಸಾವಿರ ಪಾಯಿಂಟುಗಳಿಗೆ ತಲುಪಿ ನೂತನ ದಾಖಲೆ ನಿರ್ಮಿಸಿದ ಮೇಲೆ ಕೇವಲ ಎರಡೇ ತಿಂಗಳಲ್ಲಿ ಕಂಡ ೨,೯೦೦ ಪಾಯಿಂಟುಗಳ ಕುಸಿತ ಕಂಡು ಷೇರುಪೇಟೆಯಲ್ಲಿ ದೀರ್ಘಕಾಲೀನ ಹೂಡಿಕೆ ಮಾಡಿ ೨೦೨೭ ರಲ್ಲಿ ತಲುಪಬಹುದಾದ ಒಂದು ಲಕ್ಷ ಪಾಯಿಂಟುಗಳ ಲಾಭ ಪಡೆಯಲು ಮುಂದಾದವರಿಗೆ ವೈರಾಗ್ಯ ಮೂಡಿಸುವ ಮಟ್ಟಕ್ಕೆ ತಳ್ಳಿದೆ. ಮೇ ತಿಂಗಳ ಮಧ್ಯಂತರದಲ್ಲಿ ೩೭ ಸಾವಿರದ ಗಡಿಯಲ್ಲಿದ್ದ ಸೆನ್ಸೆಕ್ಸ್, ಜೂನ್ ತಿಂಗಳ ೪ ರಂದು ೪೦,೩೧೨ ಪಾಯಿಂಟುಗಳ ಸರ್ವಕಾಲೀನ ದಾಖಲೆ ನಿರ್ಮಿಸಿ ನಂತರದ ಎರಡು ತಿಂಗಳಲ್ಲಿ ೩,೯೦೦ ಪಾಯಿಂಟುಗಳ ಹಾನಿ ಕಂಡುಕೊಂಡಿರುವುದು ಗಮನಿಸಿದಾಗ ಇದು ವ್ಯಾವಹಾರಿಕ ಶೈಲಿಯ ಚಟುವಟಿಕೆಯಷ್ಟೇ ಎಂಬುದು ದೃಢಪಡುತ್ತದೆ. ಸೆನ್ಸೆಕ್ಸ್ ೩೭ ಸಾವಿರ ಪಾಯಿಂಟುಗಳ ಸುತ್ತ ಚಲಿಸುತ್ತಿದ್ದರೆ ಅತಿಯಾದ ಒತ್ತಡಕ್ಕೊಳಗಾದ ಸೂಚ್ಯಂಕ ಎಂದರೆ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಇಂಡೆಕ್ಸ್ ಗಳು. ಮಿಡ್ ಕ್ಯಾಪ್ ಇಂಡೆಕ್ಸ್ ಕೇವಲ ಎರಡು ತಿಂಗಳುಗಳಲ್ಲಿ ಸುಮಾರು ಎರಡು ಸಾವಿರ ಪಾಯಿಂಟುಗಳಷ್ಟು ಕುಸಿತವನ್ನು ಕಂಡಿದೆ. ಸೆಪ್ಟೆಂಬರ್ ನ ವಾರ್ಷಿಕ ಗರಿಷ್ಟ ಮಟ್ಟದಿಂದ ೩,೭೦೦ ಪಾಯಿಂಟುಗಳಷ್ಟು ಕುಸಿದಿದೆ. ಇನ್ನು ಸ್ಮಾಲ್ ಕ್ಯಾಪ್ ಇಂಡೆಕ್ಸ್ ನ್ನು ತುಲನೆ ಮಾಡಿದಾಗ ಇದು ಮೇ ತಿಂಗಳ ಅಂತ್ಯದಲ್ಲಿದ್ದ ಹಂತದಿಂದ ಆಗಸ್ಟ್ ೫ ರವರೆಗೂ ಸುಮಾರು ೨,೮೦೦ ಪಾಯಿಂಟುಗಳ ಕುಸಿತವನ್ನು ಕಂಡಿದೆ. ಸೆಪ್ಟೆಂಬರ್ ನ ವಾರ್ಷಿಕ ಗರಿಷ್ಟ ೧೭,೩೩೪ ರ ಹಂತದಿಂದ ೫,೧೦೦ ಪಾಯಿಂಟುಗಳಷ್ಟು ಕುಸಿದಿದೆ. ಇದು ಸೆನ್ಸೆಕ್ಸ್ ಏತರ ವಲಯದ ಪರಿಸ್ಥಿತಿ.

ಸಹಜವಾಗಿ ಪ್ರಮುಖ ಕಂಪನಿಗಳು ಹೆಚ್ಚಿನ ಕುಸಿತ ಕಂಡಿವೆ. ಕೆಲವು ಉದಾಹರಣೆಗಳು ಇಂತಿವೆ.
 

ಸಹಜವಾಗಿ ಪ್ರಮುಖ ಕಂಪನಿಗಳು ಹೆಚ್ಚಿನ ಕುಸಿತ ಕಂಡಿವೆ. ಕೆಲವು ಉದಾಹರಣೆಗಳು ಇಂತಿವೆ.

ರಿಲಯನ್ಸ್ ಇಂಡಸ್ಟ್ರೀಸ್
ರಿಲಯನ್ಸ್ ಇಂಡಸ್ಟ್ರೀಸ್ ಹಿಂದಿನ ತ್ರೈಮಾಸಿಕ ಫಲಿತಾಂಶದಲ್ಲಿ ಅತಿ ಹೆಚ್ಚಿನ ಲಾಭಗಳಿಸಿದ ಕಂಪನಿ ಎಂಬ ಪ್ರಚಾರ ಪಡೆದು ಮೇ ಮೊದಲವಾರದಲ್ಲಿ ರೂ.೧,೪೧೭ ನ್ನು ತಲುಪಿ ವಾರ್ಷಿಕ ದಾಖಲೆ ನಿರ್ಮಿಸಿತು. ಆದರೆ ಆಗಸ್ಟ್ ಮೊದಲವಾರದಲ್ಲಿ ರೂ.೧,೧೨೯ ಕ್ಕೆ ಇಳಿದಿದೆ. ಈ ಕಂಪನಿಯು ಪ್ರತಿ ಷೇರಿಗೆ ರೂ.೬.೫೦ ಯಂತೆ ನೀಡಿದ ಲಾಭಾಂಶಕ್ಕೆ ಆಗಸ್ಟ್ 5 ನಿಗದಿತ ದಿನವಾಗಿತ್ತು.

ಟಾಟಾ ಸ್ಟಿಲ್

ಟಾಟಾ ಸ್ಟಿಲ್

ಟಾಟಾ ಸ್ಟಿಲ್ ಕಂಪನಿ ಷೇರಿನ ಬೆಲೆ ೨೦೧೮ ರ ಜನವರಿಯಲ್ಲಿ ರೂ.೭೯೨ ರ ಸಮೀಪವಿದ್ದು ಆ ಸಂದರ್ಭದಲ್ಲಿ ಕಂಪನಿಯು ಹಕ್ಕಿನ ಷೇರು ವಿತರಿಸಿತು. ಅದರ ನಂತರದಲ್ಲಿ ಷೇರಿನ ಬೆಲೆಯೂ ಸಹ ನಿರಂತರವಾದ ಇಳಿಕೆಗೊಳಪಟ್ಟಿದೆ. ಆಗಸ್ಟ್ ೫ ರಂದು ಷೇರಿನ ಬೆಲೆ ರೂ. ೩೮೯.೭೫ ರ ವಾರ್ಷಿಕ ಕನಿಷ್ಟಕ್ಕೆ ಕುಸಿದಿದೆ. ಈ ಕಂಪನಿಯು ಜುಲೈ ತಿಂಗಳಲ್ಲಿ ಪ್ರತಿ ಷೇರಿಗೆ ರೂ.೧೩ ರಂತೆ ಲಾಭಾಂಶ ವಿತರಿಸಿದೆ. ೨೦೧೦ ರಲ್ಲಿ ಪ್ರತಿ ಷೇರಿಗೆ ರೂ.೬೧೦ ರಂತೆ ಎಫ್ ಪಿ ಓ ಮೂಲಕ ವಿತರಿಸಿತ್ತು. ನಂತರದ ವರ್ಷಗಳಲ್ಲಿ ಅಂದರೆ ೨೦೧೩ ರಲ್ಲಿ ರೂ.೧೯೦ ರೊಳಗೆ ಕುಸಿದು ಎಫ್ ಪಿ ಓ ಮೂಲಕ ಷೇರುಪಡೆದವರಿಗೇ ಅಪಾರವಾದ ಹಾನಿಗೊಳಪಡಿಸಿತು.

ಮಹಿಂದ್ರಾ ಅಂಡ್ ಮಹಿಂದ್ರಾ

ಮಹಿಂದ್ರಾ ಅಂಡ್ ಮಹಿಂದ್ರಾ

ಈ ಕಂಪನಿ ಷೇರು ೨೦೧೮ ರ ಆಗಸ್ಟ್ ಅಂತ್ಯದಲ್ಲಿ ರೂ.೯೯೨ ರಲ್ಲಿದ್ದು ಅಲ್ಲಿಂದ ನಿರಂತರವಾಗಿ ಕುಸಿದು ರೂ.೫೩೯ ರ ವಾರ್ಷಿಕ ಕನಿಷ್ಟಕ್ಕೆ ಆಗಸ್ಟ್ ೧ ರಂದು ಕುಸಿದಿದೆ. ಆಟೋ ವಲಯದ ಹಿಂಜರಿತವೇ ಇದಕ್ಕೆ ಕಾರಣವಾಗಿದ್ದು, ಪ್ರತಿ ಷೇರಿಗೆ ರೂ.೮.೫೦ ರ ಲಾಭಾಂಶವನ್ನು ಈ ಕಂಪನಿಯು ಜುಲೈ ತಿಂಗಳಲ್ಲಿ ವಿತರಿಸಿದೆ.

ಲಾರ್ಸನ್ ಅಂಡ್ ಟೊಬ್ರೋ

ಲಾರ್ಸನ್ ಅಂಡ್ ಟೊಬ್ರೋ

ಲಾರ್ಸನ್ ಅಂಡ್ ಟೊಬ್ರೋ ಕಂಪನಿ ಮೇ ತಿಂಗಳ ಅಂತ್ಯದಲ್ಲಿ ರೂ.೧,೬೦೬ ರ ವಾರ್ಷಿಕ ಗರಿಷ್ಟ ತಲುಪಿದ್ದು ಪ್ರತಿ ಷೇರಿಗೆ ರೂ.೧೮ ರಂತೆ ಜುಲೈ ತಿಂಗಳಲ್ಲಿ ಲಾಭಾಂಶ ವಿತರಿಸಿದೆ. ಈಗ ಷೇರಿನ ಬೆಲೆಯೂ ರೂ.೧,೩೨೬ ರ ಸಮೀಪದ ಬೆಲೆಗೆ ಇಳಿದಿದೆ. ಇತ್ತೀಚಿಗೆ ಈ ಕಂಪನಿಯ ಸಮೂಹ ಕಂಪನಿ ಎಲ್ ಅಂಡ್ ಟಿ ಇನ್ಫೋಟೆಕ್ ಕಂಪನಿಯು ಮೈಂಡ್ ಟ್ರೀ ಕಂಪನಿಯನ್ನು ಖರೀದಿಸಿರುವುದು ಗಮನಾರ್ಹವಾದ ಅಂಶವಾಗಿದೆ.

ವೇದಾಂತ

ವೇದಾಂತ

ಈ ಹಿಂದೆ ಸ್ಟರ್ಲೈಟ್ ಇಂಡಸ್ಟ್ರೀಸ್ ಎಂದಿದ್ದಂತಹ ಈ ಕಂಪನಿ ಸೆನ್ಸೆಕ್ಸ್ ನ ಅಂಗ ಕಂಪನಿಯಾಗಿದೆ. ಈ ಕಂಪನಿಯು ಹಿಂದಿನ ವರ್ಷ ಪ್ರತಿ ಷೇರಿಗೆ ರೂ.೧೮,.೮೫ ರ ಲಾಭಾಂಶವನ್ನು ವಿತರಿಸಿದೆ. ಜೂನ್ ತಿಂಗಳ ಅಂತ್ಯದ ತ್ರೈಮಾಸಿಕದಲ್ಲಿ ಕಂಪನಿಯು ಹಾನಿಗೊಳಗಾಗಿದ್ದ ಕಾರಣ ಷೇರಿನ ಬೆಲೆ ರೂ.೧೩೫ ರ ವಾರ್ಷಿಕ ಕನಿಷ್ಟದವರೆಗೂ ಕುಸಿದಿದೆ.

ಟೆಕ್ ಮಹಿಂದ್ರಾ

ಟೆಕ್ ಮಹಿಂದ್ರಾ

ತಾಂತ್ರಿಕ ವಲಯದ ಸೆನ್ಸೆಕ್ಸ್ ಕಂಪೆನಿಯಾಗಿದ್ದು, ಜುಲೈ ೩೧ ರಂದು ರೂ.೬೦೭.೯೦ ರ ವಾರ್ಷಿಕ ಕನಿಷ್ಟಕ್ಕೆ ತಲುಪಿ ಸ್ವಲ್ಪ ಚೇತರಿಕೆ ಕಂಡಿದೆ. ಈ ಕಂಪನಿ ಜುಲೈ ನಲ್ಲಿ ಪ್ರತಿ ಷೇರಿಗೆ ರೂ.೧೪ ರಂತೆ ಲಾಭಾಂಶ ವಿತರಿಸಿದೆ. ಇದೆ ವರ್ಷ ಮೇ ೨ ರಂದು ರೂ.೮೪೬ ರ ವಾರ್ಷಿಕ ಗರಿಷ್ಟದಲ್ಲಿದ್ದ ಈ ಷೇರು ಜುಲೈ ಅಂತ್ಯದಲ್ಲಿ ವಾರ್ಷಿಕ ಕನಿಷ್ಟಕ್ಕೆ ಕುಸಿದಿದೆ ಎಂದರೆ ಕುಸಿತದ ತೀವ್ರತೆ ಅರಿವಾಗುವುದು. ಒಟ್ಟಿನಲ್ಲಿ ಷೇರುಪೇಟೆಯ ಯಶಸ್ಸಿಗೆ ವ್ಯಾಲ್ಯೂ ಪಿಕ್ ನೊಂದಿಗೆ ಪ್ರಾಫಿಟ್ ಬುಕ್ ಜೊತೆಯಾದಲ್ಲಿ ಮಾತ್ರ ಸ್ವಲ್ಪಮಟ್ಟಿನ ಸುರಕ್ಷತೆಯ ಬೆಳವಣಿಗೆ ಸಾಧ್ಯ.

English summary

Stock Market analysis: Is this the butter available in the stock market?

Present situation stock market is undergoing heavy ups and downs. Does this indicate good returns in the future? Is this the butter available in the stock market?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X