For Quick Alerts
ALLOW NOTIFICATIONS  
For Daily Alerts

ಆರ್ಬಿಐ ಹಣಕಾಸು ನೀತಿ ಪ್ರಕಟ: ರೆಪೊ ದರ ಕಡಿತ ಸಾಧ್ಯತೆ

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಂದು ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಶಕ್ತಿಕಾಂತ ದಾಸ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಸತತ ನಾಲ್ಕನೇ ಬಾರಿಗೆ ಆರ್‌ಬಿಐ ತನ್ನ ರೆಪೊ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಕಡಿತಗೊಳಿಸುವ ನಿರೀಕ್ಷೆಯಿದೆ.

ಆರ್ಬಿಐ ಹಣಕಾಸು ನೀತಿ ಪ್ರಕಟ: ರೆಪೊ ದರ ಕಡಿತ ಸಾಧ್ಯತೆ

 

ವಿತ್ತೀಯ ನೀತಿ ಸಮಿತಿಯು (ಎಂಪಿಸಿ)ಆರ್ಥಿಕ ಕುಸಿತ, ಕಡಿಮೆ ಹಣದುಬ್ಬರ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟು ನಿರ್ಧಾರವನ್ನು ರೂಪಿಸಲಿದೆ ಎನ್ನಲಾಗಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸ್ಥೂಲವಾಗಿ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿದ್ದು, ದ್ವೈಮಾಸಿಕ ಹಣಕಾಸು ನೀತಿಯನ್ನು ಇಂದು ಪ್ರಕಟಿಸಲಿದೆ.

ಆರ್ಬಿಐ ದ್ವೈಮಸಿಕ ಸಾಲ ನೀತಿ ಕಡಿತಗೊಳಿಸಿದರೆ ಸಾಲದ ಮೇಲಿನ ಬಡ್ಡಿದರವನ್ನು ಶೇ. 0.25ರಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಿಸಿದ್ದಾರೆ. ಇವತ್ತು ರೆಪೊ ದರ ಕಡಿತಗೊಂಡರೆ ಸತತ ನಾಲ್ಕನೇ ಬರಿ ಬಡ್ಡಿದರ ಇಳಿಕೆಯಾಗಲಿದೆ. ದೇಶದ ಆರ್ಥಿಕತೆ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಚೇತರಿಕೆ ನೀಡಲು ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಹಣದುಬ್ಬರ ಶೇ. 4ಕ್ಕಿಂತ ಕಡಿಮೆಯಿರುವುದರಿಂದ ಬಡ್ಡಿದರ ಇಳಿಕೆಗೆ ತೊಡಕಾಗದು ಎನ್ನಲಾಗಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ಹಣದುಬ್ಬರವು ಜೂನ್‌ನಲ್ಲಿ ಶೇ. 3.18ಕ್ಕೆ ಏರಿತು. ಆದರೆ ಇದು ಆರ್‌ಬಿಐನ ಮಧ್ಯಮ ಅವಧಿಯ ಗುರಿ ಶೇ. 4ಕ್ಕಿಂತ ಕಡಿಮೆಯಾಗಿದೆ. ಆದಾಗ್ಯೂ, ಸಿಪಿಐ ಅನ್ನು ಲೆಕ್ಕಾಚಾರ ಮಾಡುವಾಗ ಆಹಾರದ ಬೆಲೆಗಳು ಶೇ. 46ರಷ್ಟು ಮೌಲ್ಯ ಹೊಂದಿರುವುದರಿಂದ ಭಾರತದಲ್ಲಿ ಹಣದುಬ್ಬರದ ಪಥವು ಮಾನ್ಸೂನ್ ಮೇಲೆ ಗಣನೀಯವಾಗಿ ಅವಲಂಬಿತವಾಗಿದೆ.

English summary

RBI Repo rate: Analysts see 25 basis points rate cut

With inflation under control, experts are expecting another 25 basis points rate cut by the RBI for a fourth time in a row to boost economic activities.
Story first published: Wednesday, August 7, 2019, 9:35 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more