For Quick Alerts
ALLOW NOTIFICATIONS  
For Daily Alerts

ಜಿಯೋ ಪೋಸ್ಟ್‌ಪೇಡ್ ಪ್ಲಸ್ ಸೇವೆ ಆರಂಭ, ಏನೆಲ್ಲಾ ಪ್ರಯೋಜನ ಸಿಗಲಿದೆ ಗೊತ್ತಾ?

ರಿಲಯನ್ಸ್ ಜಿಯೋ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಗಿಗಾಫೈಬರ್ ಮೂಲಕ ಒದಗಿಸಲಾಗುವ ಸೇವೆಗಳ ಮೇಲೆ ಹೆಚ್ಚು ಕೇಂದ್ರಿಕೃತವಾಗಿತ್ತು.

|

ರಿಲಯನ್ಸ್ ಜಿಯೋ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಗಿಗಾಫೈಬರ್ ಮೂಲಕ ಒದಗಿಸಲಾಗುವ ಸೇವೆಗಳ ಮೇಲೆ ಹೆಚ್ಚು ಕೇಂದ್ರಿಕೃತವಾಗಿತ್ತು. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಜಿಯೋ ಗಿಗಾಫೈಬರ್, ಲ್ಯಾಂಡ್ಲೈನ್, ಸೆಟ್ ಅಪ್ ಬಾಕ್ಸ್ ಇತ್ಯಾದಿ ಸೇವೆಗಳ ಬಗ್ಗೆ ಹೆಚ್ಚಿನ ವಿವರಣೆ ನೀಡಿದರು. ಜಿಯೋ ಫೈಬರ್ ನ ಎಲ್ಲ ಗಮನಗಳ ನಡುವೆ ರಿಲಯನ್ಸ್ಪೋಸ್ಟ್ ಪೇಯ್ಡ್ ಚಂದಾದಾರರನ್ನು ಆಕರ್ಷಿಸಲು ಜಿಯೋ ಪೋಸ್ಟ್‌ಪೇಡ್ ಪ್ಲಸ್ ಸೇವೆ ಸಕ್ರಿಯಗೊಳಿಸಲು ಮುಂದಾಗಿದೆ.

ಜಿಯೋ ಪೋಸ್ಟ್‌ಪೇಡ್ ಪ್ಲಸ್ ಏಕೆ, ಈಗಿರುವ ಪೋಸ್ಟ್‌ಪೇಡ್ ಸೇವೆಗಿಂತ ಹೇಗೆ ಭಿನ್ನ?

ಜಿಯೋ ಪೋಸ್ಟ್‌ಪೇಡ್ ಪ್ಲಸ್ ಏಕೆ, ಈಗಿರುವ ಪೋಸ್ಟ್‌ಪೇಡ್ ಸೇವೆಗಿಂತ ಹೇಗೆ ಭಿನ್ನ?

ಈಗಾಗಲೇ ಜಿಯೋ ಒಂದೇ ಯೋಜನೆಯೊಂದಿಗೆ ಪೋಸ್ಟ್‌ಪೇಯ್ಡ್ ಸೇವೆಗಳನ್ನು ಹೊಂದಿದೆ. ಹಾಗಿದ್ದರೆ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಏಕೆ? ಅದು ಈಗಿರುವ ಈಗಿರುವ ಪೋಸ್ಟ್‌ಪೇಯ್ಡ್ ಸೇವೆಗಿಂತ ಹೇಗೆ ಭಿನ್ನವಾಗಿದೆ? ಮುಕೇಶ್ ಅಂಬಾನಿ ಯೋಜನೆ ಶುಲ್ಕಗಳ ಬಗ್ಗೆ ನಿಖರವಾದ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸದಿದ್ದರೂ, ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಈಗಾಗಲೇ ಅಸ್ತಿತ್ವದಲ್ಲಿರುವುದಕ್ಕಿಂತ ಭಿನ್ನವಾಗಿರಲಿದೆ ಎಂದಿದ್ದಾರೆ.

ಜಿಯೋ ಪೋಸ್ಟ್‌ಪೇಡ್ ಪ್ಲಸ್‌ಗೆ ಯಾರು ಅರ್ಹರು?

ಜಿಯೋ ಪೋಸ್ಟ್‌ಪೇಡ್ ಪ್ಲಸ್‌ಗೆ ಯಾರು ಅರ್ಹರು?

ಪ್ಲಾಟಿನಂ ದರ್ಜೆಯ ಸೇವೆ ಮತ್ತು ಉನ್ನತ ಅನುಭವವನ್ನು ಬಯಸುವ ಜಿಯೋ ಫೈಬರ್ ಬಳಕೆದಾರರಿಗೆ ಜಿಯೋ ಪೋಸ್ಟ್‌ಪೇಡ್ ಪ್ಲಸ್ ಲಭ್ಯವಿದೆ ಎಂದು ಎಜಿಎಂ ಕಾರ್ಯಕ್ರಮದಲ್ಲಿ ಅಂಬಾನಿ ಹೇಳಿದರು. ಇದರರ್ಥ ಜಿಯೋ ಫೈಬರ್ ಸೇವೆಗಳನ್ನು ಬಳಸುವ ಚಂದಾದಾರರು ಜಿಯೋ ಪೋಸ್ಟ್‌ಪೇಡ್ ಪ್ಲಸ್ ಸೇವೆಗೆ ಅರ್ಹರಾಗಿರುತ್ತಾರೆ.

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯಾವ ಪ್ರಯೋಜನಗಳನ್ನು ನೀಡುತ್ತದೆ?

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯಾವ ಪ್ರಯೋಜನಗಳನ್ನು ನೀಡುತ್ತದೆ?

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಮೂಲಭೂತವಾಗಿ ವೈಯಕ್ತಿಕ ಅನುಭವವನ್ನು ಬಯಸುವ ಜಿಯೋ ಗ್ರಾಹಕರಿಗೆ ಪ್ರೀಮಿಯಂ ಸೇವೆಯಾಗಿದೆ. 'ಪ್ಲಸ್' ಎಂಬುದು ಮೌಲ್ಯವರ್ಧಿತ ಪ್ರಯೋಜನಗಳನ್ನು ಸೂಚಕವಾಗಿದೆ. ಅದರ ಅಡಿಯಲ್ಲಿ ಚಂದಾದಾರರು ಹೆಚ್ಚಿನ ಮೌಲ್ಯ ಪಡೆಯಲು ಸಾಧ್ಯವಾಗುತ್ತದೆ. ಈ ಪ್ರಯೋಜನಗಳು ಸೇರಿವೆ:
- ಪೋಸ್ಟ್‌ಪೇಯ್ಡ್ ಪ್ಲಸ್‌ನೊಂದಿಗೆ, ಅಸ್ತಿತ್ವದಲ್ಲಿರುವ ಸೇವೆಯನ್ನು ಜಿಯೋ ಪೋಸ್ಟ್‌ಪೇಯ್ಡ್ ಸೇವೆಗೆ ಪೋರ್ಟ್ ಮಾಡಲು ಜಿಯೋ ಸಿಬ್ಬಂದಿ ನಿಮ್ಮ ಮನೆಗೆ ಭೇಟಿ ನೀಡುತ್ತಾರೆ.
- ಸಿಮ್-ಸೆಟಪ್ ಸೇವೆಯನ್ನು ಚಂದಾದಾರರ ಮನೆಯಲ್ಲಿ ಮಾಡಲಾಗುತ್ತದೆ. ಅಂದರೆ ಅಂಗಡಿ ಮತ್ತು ಏಜೆಂಟರ ಮೂಲಕ ಹೆಚ್ಚು ಚಾಲನೆಯಲ್ಲಿ ಇರಲ್ಲ.
-ಜಿಯೋ ಪೋಸ್ಟ್‌ಪೇಡ್ ಪ್ಲಸ್ ಎಲ್ಲಾ ಸಾಧನಗಳ ನಡುವೆ ತಡೆರಹಿತ ಸಂಪರ್ಕವನ್ನು ಸಹ ಸಕ್ರಿಯಗೊಳಿಸುತ್ತದೆ. ಇದರರ್ಥ ನೀವು ನಿಮ್ಮ ಫೋನ್‌ನಲ್ಲಿ ಜಿಯೋ ಸೇವೆಯನ್ನು ಬಳಸುತ್ತಿರಲಿ ಅಥವಾ ನಿಮ್ಮ ಮನೆಯಲ್ಲಿ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಬಳಸುತ್ತಿರಲಿ, ಸಂಪರ್ಕ ಪ್ರಕ್ರಿಯೆಯು ತಡೆರಹಿತವಾಗಿರುತ್ತದೆ ಎಂದು ಭರವಸೆ ನೀಡಲಾಗಿದೆ.
- ಹೆಚ್ಚಿನ ನಿರ್ವಾಹಕರು ಕುಟುಂಬ ಹಂಚಿಕೆ ಪೋಸ್ಟ್‌ಪೇಡ್ ಯೋಜನೆಗಳನ್ನು ನೀಡುತ್ತಾರೆ. ಪೋಸ್ಟ್‌ಪೇಡ್ ಪ್ಲಸ್‌ನೊಂದಿಗೆ ಜಿಯೋ ಚಂದಾದಾರರು ಡೇಟಾ ಬಳಕೆಯ ಮೇಲೆ ಉತ್ತಮ ನಿಯಂತ್ರಣ ಸಾಧಿಸಲು ಅನುವು ಮಾಡಿಕೊಡುತ್ತದೆ.
- ಪೋಸ್ಟ್‌ಪೇಯ್ಡ್ ಪ್ಲಸ್ ಚಂದಾದಾರರು ಸಬ್ಸಿಡಿ ದರದಲ್ಲಿ ಅಂತರರಾಷ್ಟ್ರೀಯ ರೋಮಿಂಗ್ ಅನ್ನು ಆನಂದಿಸಲು ಸಾಧ್ಯವಾಗುತ್ತದೆ. ಜೊತೆಗೆ ಸೇವೆಯು ಸಹ ಉತ್ತಮವಾಗಿರುತ್ತದೆ ಎನ್ನಲಾಗಿದೆ.
- ಪೋಸ್ಟ್‌ಪೇಯ್ಡ್ ಪ್ಲಸ್ ಚಂದಾದಾರರು ಫೋನ್‌ಗಳನ್ನು ಅಪ್‌ಗ್ರೇಡ್ ಮಾಡುವಾಗ ಆದ್ಯತೆಯ ದರವನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ, ಒಪ್ಪಂದದಡಿಯಲ್ಲಿ ನೀವು ಹೊಸ ಐಫೋನ್ ಅಥವಾ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಅನ್ನು ಕೈಗೆಟುಕುವ ದರದಲ್ಲಿ ಪಡೆಯಲು ಸಾಧ್ಯವಿದೆ.
- ಕೊನೆಯದಾಗಿ, ಪೋಸ್ಟ್‌ಪೇಯ್ಡ್ ಪ್ಲಸ್ ಎಲ್ಲಾ ಬಿಲ್‌ಗಳನ್ನು ಒಂದೇ ಅಡಿಯಲ್ಲಿ ಏಕೀಕರಿಸಬಹುದು. ಇದು ನಿಮ್ಮ ಮೊಬೈಲ್ ಬಿಲ್, ಟಿವಿ ಬಿಲ್ ಮತ್ತು ಬ್ರಾಡ್‌ಬ್ಯಾಂಡ್ ಬಿಲ್ ಪ್ಯಾಕೇಜ್‌ನಂತೆ ಒಂದೇ ಬಿಲ್ ಅಡಿಯಲ್ಲಿ ಬರುತ್ತದೆ.

ಜಿಯೋ ಪೋಸ್ಟ್‌ಪೇಡ್ ಪ್ಲಸ್ ಯಾವಾಗ ಲಭ್ಯ?

ಜಿಯೋ ಪೋಸ್ಟ್‌ಪೇಡ್ ಪ್ಲಸ್ ಯಾವಾಗ ಲಭ್ಯ?

ಸೆಪ್ಟೆಂಬರ್ 5 ರಿಂದ ಪೋಸ್ಟ್‌ಪೇಯ್ಡ್ ಪ್ಲಸ್ ಸೇವೆ ಲಭ್ಯವಾಗಲಿದೆ ಎಂದು ಜಿಯೋ ಹೇಳಿದೆ. ಜಿಯೋ ವೆಬ್‌ಸೈಟ್ ಮತ್ತು ಮೈಜಿಯೊ ಅಪ್ಲಿಕೇಶನ್‌ ಮೂಲಕ ಈ ಯೋಜನೆಗಳ ಸಂಪೂರ್ಣ ವಿವರ ಮತ್ತು ದರಪಟ್ಟಿ ಲಭ್ಯವಿದೆ.

ಜಿಯೋ ಧಮಾಕಾ! ಮುಕೇಶ್ ಅಂಬಾನಿ ಘೋಷಿಸಿರುವ ಪ್ಲಾನ್ ಗಳ ವಿವರ ಇಲ್ಲಿದೆ ನೋಡಿ.. ಜಿಯೋ ಧಮಾಕಾ! ಮುಕೇಶ್ ಅಂಬಾನಿ ಘೋಷಿಸಿರುವ ಪ್ಲಾನ್ ಗಳ ವಿವರ ಇಲ್ಲಿದೆ ನೋಡಿ..

English summary

Jio Postpaid Plus announced: What benefits are available?

Jio Postpaid Plus is available for JioFiber users who want a platinum-grade service and product experience.
Story first published: Tuesday, August 13, 2019, 13:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X