For Quick Alerts
ALLOW NOTIFICATIONS  
For Daily Alerts

ಆಟೋ ವಲಯ ಹಿಂಜರಿತ -ರೆಪೋ ದರ ಕಡಿತ

|

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಕ್ರೆಡಿಟ್ ಪಾಲಿಸಿಯಲ್ಲಿ ಬುಧವಾರದಂದು 35 ಬೇಸಿಸ್ ಪಾಯಿಂಟುಗಳಷ್ಟು ರೆಪೋ ದರವನ್ನು ಇಳಿಸುವ ಮೂಲಕ ಸತತವಾಗಿ ನಾಲ್ಕನೇ ಬಾರಿ ರೆಪೋ ದರವನ್ನು ಇಳಿಸಿದೆ. ಈ ಮೂಲಕ ವ್ಯಾವಹಾರಿಕ ಚಟುವಟಿಕೆಯಲ್ಲಿ ಚೇತರಿಕೆ ಮೂಡಿಸುವ ಪ್ರಯತ್ನವನ್ನು ಮಾಡಿದೆ. ಸಧ್ಯದ ರೆಪೋ ದರವು 5.4% ಕ್ಕೆ ತಲುಪಿದೆ. ಆರ್ ಬಿ ಐ ಗೌರ್ನರ್ ರವರು ತಮ್ಮ ವಿಶ್ಲೇಷಣೆಯಲ್ಲಿ ದೇಶದ ಆರ್ಥಿಕ ಬೆಳವಣಿಗೆಯು ಶೇ.6.9 ಕ್ಕೆ ಇಳಿಸಿದ್ದಾರೆ. ಗ್ರಾಹಕ ಬಳಕೆಯ ಬೇಡಿಕೆಯನ್ನು ಹೆಚ್ಚಿಸುವ , ಆರ್ಥಿಕ ಹಿಂಜರಿತವನ್ನು ನಿಯಂತ್ರಿಸುವ ಕ್ರಮವಾಗಿ ಈ ಕಡಿತವನ್ನು ಮಾಡಲಾಗಿದೆ. ಇದುವರೆಗೂ ನಾಲ್ಕು ಕಡಿತಗಳ ಮೂಲಕ ರೆಪೋ ದರವು ಒಟ್ಟು 110 ಬೇಸಿಸ್ ಪಾಯಿಂಟುಗಳಷ್ಟು ಇಳಿಸಲಾಗಿದೆ. ಆರ್ ಬಿ ಐ ರೆಪೋ ದರವನ್ನು ಕಡಿತಗೊಳಿಸಿದರು ಸಹ ಅದರ ಲಾಭವನ್ನು ಬ್ಯಾಂಕ್ ಗಳು ಗ್ರಾಹಕರಿಗೆ ಪೂರ್ಣವಾಗಿ ತಲುಪಿಸುತ್ತಿಲ್ಲ. ಹಿಂದಿನ ಮೂರು ಕಡಿತಗಳ ಮೂಲಕ ಮಾಡಿದ 75 ಬೇಸಿಸ್ ಪಾಯಿಂಟುಗಳಲ್ಲಿ ಕೇವಲ 29 ಬೇಸಿಸ್ ಪಾಯಿಂಟುಗಳಷ್ಟು ಮಾತ್ರ ಗ್ರಾಹಕರಿಗೆ ರಿಯಾಯಿತಿ ಮೂಲಕ ನೀಡಿದ್ದು, ಉಳಿದ ಭಾಗವನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಂತಿದೆ. ರೆಪೋ ದರದ ಕಡಿತದಲ್ಲಾದ ಹೆಚ್ಚಿನ ಪ್ರಮಾಣವನ್ನು ಬ್ಯಾಂಕ್ ಗಳು ಗ್ರಾಹಕರಿಗೆ ನೀಡಬೇಕು ಎಂದು ಆರ್ ಬಿ ಐ ತಿಳಿಸಿದೆ.

ವಾಹನ ಮಾರಾಟ ಕುಸಿತ
 

ವಾಹನ ಮಾರಾಟ ಕುಸಿತ

ಈಗಾಗಲೇ ವಿವಿಧ ವಲಯಗಳಾದ ರಿಯಲ್ ಎಸ್ಟೇಟ್, ಆಟೋ, ನಾನ್ ಬ್ಯಾಂಕಿಂಗ್, ಇನ್ಫ್ರಾ, ಇಂಜಿನಿಯರಿಂಗ್ ವಲಯಗಳು ಹೆಚ್ಚಿನ ಅಪಾಯವನ್ನು ಎದುರಿಸುತ್ತಿವೆ. ಕುಸಿಯುತ್ತಿರುವ ಬೇಡಿಕೆಯೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಕೇವಲ ಬಡ್ಡಿ ದರವನ್ನು ಕಡಿಮೆ ಮಾಡುವುದು ಉತ್ತೇಜನಕಾರಿಯಾಗದು. ಅದಕ್ಕೆ ಅಗತ್ಯವಿರುವ ಪೂರಕವಾದ ಕ್ರಮಗಳು ಸಹ ಅಗತ್ಯವಾಗಿದೆ. ಮೂಲತಃ ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸದೆ ಆರೋಗ್ಯಕರವಾದ ಆರ್ಥಿಕ ಬೆಳವಣಿಗೆ ಅಸಾಧ್ಯ. ಆಟೋ ವಲಯದಲ್ಲಿ ವಾಹನ ಮಾರಾಟದ ಪ್ರಮಾಣ ಹೆಚ್ಚಿನ ಕುಸಿತ ಕಂಡ ಕಾರಣ ಮಧ್ಯೆ ಮಧ್ಯೆ ಕೆಲವು ದಿನಗಳು ಉತ್ಪಾದನೆಯನ್ನು ಈ ಕಂಪನಿಗಳು ಸ್ಥಗಿತಗೊಳಿಸುವ ಹಂತಕ್ಕೆ ತಲುಪಿವೆ. ಬ್ಯಾಂಕ್ ಗಳು ವಾಹನ ಖರೀದಿಗೆ ಸಾಲ ಒದಗಿಸುತ್ತವೆ ಆದರೆ ಆ ಸಾಲಕ್ಕೆ ಕಟ್ಟಬೇಕಾದ ಕಂತುಗಳಿಗೆ ದುಡಿಯುವ ಸಾಮರ್ಥ್ಯವನ್ನು ಗ್ರಾಹಕ ಹೆಚ್ಚಿಸಿಕೊಳ್ಳುವುದು ಅನಿವಾರ್ಯ.

ನಕಾರಾತ್ಮಕ ಪ್ರಭಾವ

ನಕಾರಾತ್ಮಕ ಪ್ರಭಾವ

ಈಗಿನ ವಾತಾವರಣದಲ್ಲಿ ಅಸಾಧ್ಯವಾದ ಕಾರಣ ಬ್ಯಾಂಕ್ ಎನ್ಪಿಎ ಪ್ರಮಾಣ, ನುಣುಚಿಕೊಳ್ಳುವ ಅಂಶಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆಟೋ ವಲಯದಲ್ಲಿ ವಾಹನ ಮಾರಾಟದ ಪ್ರಮಾಣ ಹೆಚ್ಚಿದರೂ ಅದಕ್ಕನುಗುಣವಾಗಿ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಬೆಳೆಯದ ಕಾರಣ ಟ್ರಾಫಿಕ್ ಜಾಮ್ ಗಳು ವಾಹನ ಖರೀದಿಗೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಆಟೋ ವಲಯದಲ್ಲಿನ ಕಂಪನಿಗಳು ಲಕ್ಷಗಟ್ಟಲೆ ನೌಕರಿಗಳ ಕಡಿತ ಮಾಡುವ ಮುನ್ಸೂಚನೆಯನ್ನು ಸಹ ನೀಡಿವೆ.

ವಾಹನ ಬೇಡಿಕೆಗೆ ಹಿನ್ನಡೆ ಷೇರುಪೇಟೆಯಲ್ಲಿ ಕುಸಿತ

ವಾಹನ ಬೇಡಿಕೆಗೆ ಹಿನ್ನಡೆ ಷೇರುಪೇಟೆಯಲ್ಲಿ ಕುಸಿತ

ವಾಹನ ವಲಯದ ಬೆಳವಣಿಗೆ ಎಷ್ಟು ಕ್ಷಿಪ್ರವಾಗಿತ್ತೆಂಬುದಕ್ಕೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನ ಆಟೋ ಇಂಡೆಕ್ಸ್ ಡಿಸೇಂಬರ್ 2008 ರಲ್ಲಿ 2,127 ರ ಸಮೀಪವಿದ್ದು ಹಿಂದಿನ ವರ್ಷದ ಆಗಸ್ಟ್ ತಿಂಗಳಲ್ಲಿ 24,958 ಪಾಯಿಂಟುಗಳಿಗೆ ತಲುಪಿ ಈಗ 15,750 ಕ್ಕೆ ಕುಸಿದಿದೆ. ಅಂದರೆ ಹತ್ತು ವರ್ಷಗಳಲ್ಲಿ ಆಟೋ ಇಂಡೆಕ್ಸ್ ಹನ್ನೊಂದು ಪಟ್ಟು ಏರಿಕೆಯಾಗಿರುವುದು ಈ ವಲಯದ ಬೆಳವಣಿಗೆಗೆ ಹಿಡಿದ ಕನ್ನಡಿಯಾಗಿದೆ. ಒಂದೇ ವರ್ಷದ ಅವಧಿಯಲ್ಲಿ ಸುಮಾರು ಒಂಬತ್ತು ಸಾವಿರ ಪಾಯಿಂಟುಗಳ ಕುಸಿತವುಂಟಾಗಿದೆ. ಅದು ಬೆಳೆದ ವೇಗಕ್ಕೆ ಅನುಗುಣವಾಗಿ ಮೂಲಸೌಕರ್ಯಗಳು ಬೆಳೆಯದೆ ಇರುವ ಕಾರಣ ವಾಹನ ಬೇಡಿಕೆಗೆ ಹಿನ್ನಡೆಯುಂಟಾಗಿದೆ. ಅಲ್ಲದೆ ಈ ಹಿನ್ನಡೆಗೆ ಪೂರಕವಾಗಿ ನಗರ ಪ್ರದೇಶಗಳಲ್ಲಿ ಒದಗಿಸಲಾದ ಸಾರ್ವಜನಿಕ ಸಂಪರ್ಕ ವಿಧಗಳಾದ ಮೆಟ್ರೋ ರೇಲು ಸೇವೆ, ನಗರ ಸಾರಿಗೆ ವ್ಯವಸ್ಥೆಗಳು ಕೆಲಸ ಮಾಡಿವೆ. ಷೇರುಪೇಟೆಯಲ್ಲಿನ ಏರಿಳಿತಗಳು ಹೆಚ್ಚಾಗಿ ವಿದೇಶಿ ವಿತ್ತೀಯ ಸಂಸ್ಥೆಗಳ ವಹಿವಾಟನ್ನವಲಂಭಿಸಿರುವುದರಿಂದ ಅವರ ಚಟುವಟಿಕೆಯ ರೀತಿಯಲ್ಲಿ ಷೇರಿನ ದರಗಳು ಏರಿಳಿತ ಪ್ರದರ್ಶಿಸುತ್ತವೆ. ಹಾಗಾಗಿ ರೆಪೋ ದರದಲ್ಲಾಗುವ ಬದಲಾವಣೆಗಳು ತಾತ್ಕಾಲಿಕ ಪ್ರಭಾವಿಯಾಗಿರುತ್ತದೆ.

Read more about: money economy stock market
English summary

Auto sector Regression -Repo rate reduction

The Reserve Bank of India on Wednesday reduced repo rates by 35 basis points in its credit policy for the fourth time in a row.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more