For Quick Alerts
ALLOW NOTIFICATIONS  
For Daily Alerts

ಗೂಳಿ ಅಬ್ಬರ! 800 ಪಾಯಿಂಟ್‌ ದಾಟಿದ ಸೆನ್ಸೆಕ್ಸ್, ಇಲ್ಲಿವೆ ಪ್ರಮುಖ ಅಂಶಗಳು

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು, ಮಂದಗತಿಯ ಆರ್ಥಿಕತೆಯನ್ನು ಉತ್ತೇಜಿಸುವ ಕ್ರಮಗಳನ್ನು ಘೋಷಿಸಿದ ನಂತರ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಸೂಚ್ಯಂಕಗಳು ಸೋಮವಾರ ತೀವ್ರ ಲಾಭ ಗಳಿಸಿವೆ.

|

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು, ಮಂದಗತಿಯ ಆರ್ಥಿಕತೆಯನ್ನು ಉತ್ತೇಜಿಸುವ ಕ್ರಮಗಳನ್ನು ಘೋಷಿಸಿದ ನಂತರ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಸೂಚ್ಯಂಕಗಳು ಸೋಮವಾರ ತೀವ್ರ ಲಾಭ ಗಳಿಸಿವೆ.
ಸೆನ್ಸೆಕ್ಸ್ ಸೂಚ್ಯಂಕವು 800 ಪಾಯಿಂಟ್‌ಗಳನ್ನು ಮೀರಿದರೆ, ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 11,050ರ ಗಡಿ ದಾಟಿದೆ. ವಿದೇಶಿ ಮತ್ತು ದೇಶೀ ಹೂಡಿಕೆದಾರರ ಮೇಲಿನ ತೆರಿಗೆ ಮತ್ತು ಅಲ್ಪ ಮತ್ತು ದೀರ್ಘಾವಧಿಯ ಬಂಡವಾಳ ಲಾಭಗಳ ಮೇಲಿನ ವರ್ಧಿತ ಶುಲ್ಕ ಸೇರಿದಂತೆ ಸಕಾ್ರ ಕೈಗೊಂಡ ಕ್ರಮಗಳ ಹಿನ್ನೆಲೆಯಲ್ಲಿ ಭಾರೀ ಲಾಭ ಗಳಿಸಿತು.
ಆರ್ಥಿಕತೆ ಉತ್ತೇಜನ ಮತ್ತು ಎಫ್‌ಪಿಐ ಹೆಚ್ಚುವರಿ ಶುಲ್ಕ ಕಡಿತದಂತಹ ಹಲವಾರು ಕ್ರಮಗಳನ್ನು ಘೋಷಿಸಿದ ನಂತರ ಬೆಂಚ್‌ಮಾರ್ಕ್ ಸೂಚ್ಯಂಕಗಳು ದಿನದ ಗರಿಷ್ಠ ಮಟ್ಟಕ್ಕೆ ತಲುಪಿದವು.

ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದ ಪ್ರಮುಖ ಅಂಶಗಳು ಇಲ್ಲಿವೆ:

ಸರ್ಕಾರದ ಉತ್ತೇಜನ

ಸರ್ಕಾರದ ಉತ್ತೇಜನ

ಶುಕ್ರವಾರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಆರ್ಥಿಕತೆಗೆ ವೇಗೆ ನೀಡುವ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚುವರಿ ಶುಲ್ಕವನ್ನು ಹಿಂತೆಗೆದುಕೊಳ್ಳುವುದರಿಂದ ಹಿಡಿದು ವಾಹನ ವಲಯದ ನಿಯಮಗಳ ಪರಿಷ್ಕರಣೆಯವರೆಗೆ ಸಡಿಲಿಕೆ ಮಾಡಲಾಯಿತು. ಹೂಡಿಕೆದಾರರಿಗೆ ಉತ್ತೇಜನ ನೀಡುವ ಮತ್ತು ಆರ್ಥಿಕತೆಯನ್ನು ಹೆಚ್ಚಿಸುವ ಕ್ರಮಗಳನ್ನು ಸರ್ಕಾರ ಘೋಷಿಸಿತು.
ಸರ್ಕಾರವು ಪಿಎಫ್ಐ ಸರ್ಚಾರ್ಜ್ ರದ್ದು, ಹೊಸ ವಾಹನ ನೋಂದಣಿ ಶುಲ್ಕ, ಅಗ್ಗದ ಗೃಹ ಮತ್ತು ವಾಹನ ಸಾಲದಂತಹ ಕ್ರಮಗಳನ್ನು ಘೋಷಿಸಿದ್ದು, ಷೇರುಪೇಟೆಯ ಮೇಲೆ ಧನಾತ್ಮಕ ಪ್ರಭಾವ ಬೀರಿತು.

ಬ್ಯಾಂಕ್, ಎನ್‌ಬಿಎಫ್ಸಿ ಷೇರು ಬೆಂಬಲ

ಬ್ಯಾಂಕ್, ಎನ್‌ಬಿಎಫ್ಸಿ ಷೇರು ಬೆಂಬಲ

ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್, ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿ ಹೆವಿವೇಯ್ಟ್‌ಗಳು ಉತ್ತಮ ಆದಾಯ ಗಳಿಸಿವೆ. ಬ್ಯಾಂಕುಗಳ ಉತ್ತೇಜನಕ್ಕಾಗಿ ರೂ .70,000 ಕೋಟಿ ಘೋಷಿಸಿದ ನಂತರ ಹಣಕಾಸು ಷೇರುಗಳು ಏರಿಕೆಯಾಗಿವೆ.

ಯುಎಸ್, ಚೀನಾ
 

ಯುಎಸ್, ಚೀನಾ

ಆರ್ಥಿಕತೆ ಉತ್ತೇಜನ ಮತ್ತು ಎಫ್‌ಪಿಐ ಹೆಚ್ಚುವರಿ ಶುಲ್ಕದ ತೆಗೆದ ನಂತರ ಹಾಗು ವ್ಯಾಪಾರ ಒಪ್ಪಂದದ ಕುರಿತು ಯುಎಸ್ ಮತ್ತು ಚೀನಾ ನಡುವಿನ ಮಾತುಕತೆ ಹೂಡಿಕೆದಾರರ ಮೇಲೆ ಧನಾತ್ಮಕ ಭಾವನೆಯನ್ನು ಹೆಚ್ಚಿಸಿದೆ. ಯುಎಸ್ ಚೀನಾ ವಾಣಿಜ್ಯ ಸಮರ ಶಾಂತತೆಯ ವಾತಾವರಣ ಮಾರುಕಟ್ಟೆಯಲ್ಲಿ ಗೂಳಿ ಅಬ್ಬರಕ್ಕೆ ಸಾಕ್ಷಿಯಾಗಿದೆ!

ಲಾಭ ಹಾಗು ನಷ್ಟ

ಲಾಭ ಹಾಗು ನಷ್ಟ

ಇಂದಿನ ಷೇರುಪೇಟೆಯ ವಹಿವಾಟಿನಲ್ಲಿ ಪ್ರಮುಖ ಲಾಭ ಹಾಗು ನಷ್ಟ ಗಳಿಸಿದ ಸಂಸ್ಥೆಗಳ ವಿವರ ಇಲ್ಲಿದೆ.

English summary

Sensex climbs 800 points on relief measures, here are top 5 factors

ಸೆನ್ಸೆಕ್ಸ್ ಸೂಚ್ಯಂಕವು 800 ಪಾಯಿಂಟ್‌ಗಳನ್ನು ಮೀರಿದರೆ, ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 11,050ರ ಗಡಿ ದಾಟಿದೆ.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X