For Quick Alerts
ALLOW NOTIFICATIONS  
For Daily Alerts

ಎಲ್ಐಸಿ 8,000 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ..

ಭಾರತದ ಜೀವ ವಿಮಾ ನಿಗಮ (ಎಲ್‌ಐಸಿ) 8,000 ಖಾಲಿ ಇರುವ ಸಹಾಯಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

|

ಭಾರತದ ಜೀವ ವಿಮಾ ನಿಗಮ (ಎಲ್‌ಐಸಿ) 8,000 ಖಾಲಿ ಇರುವ ಸಹಾಯಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಎಲ್‌ಐಸಿ ಸಹಾಯಕ ನೇಮಕಾತಿ 2019 ರ ಅಧಿಸೂಚನೆಯನ್ನು ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ licindia.in ನಲ್ಲಿ ಮಾಹಿತಿ ನೀಡಿದೆ.

ಎಲ್ಐಸಿ 8,000 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ತಿಳಿದುಕೊಳ್ಳಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಧಿಕೃತ ಅಧಿಸೂಚನೆಯ ಪ್ರಕಾರ, ಎಲ್ಐಸಿ ಸಹಾಯಕ ಅಧಿಸೂಚನೆ 2019 ಸೆಪ್ಟೆಂಬರ್ 17 ರಿಂದ ಆನ್ಲೈನ್ ನೋಂದಣಿ ಪ್ರಾರಂಭವಾಗಿದೆ. ಸಹಾಯಕ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 1 ಆಗಿರುತ್ತದೆ.

ಎಲ್ಐಸಿ ಸಹಾಯಕ ನೇಮಕಾತಿ 2019: ಪ್ರಮುಖ ದಿನಾಂಕಗಳು
ಅರ್ಜಿಯ ಆನ್ಲೈನ್ ನೋಂದಣಿ ಪ್ರಾರಂಭ: ಸೆಪ್ಟೆಂಬರ್ 17
ಅರ್ಜಿಯ ನೋಂದಣಿ ಕೊನೆ ದಿನ: ಅಕ್ಟೋಬರ್ 01
ಅಪ್ಲಿಕೇಶನ್ ವಿವರಗಳನ್ನು ಎಡಿಟ್ ಮಾಡಲು: ಅಕ್ಟೋಬರ್ 01
ನಿಮ್ಮ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ: ಅಕ್ಟೋಬರ್ 22
ಆನ್ಲೈನ್ ಶುಲ್ಕ ಪಾವತಿ: ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 01 ರವರೆಗೆ

ಅಧಿಸೂಚನೆಯ ಪ್ರಕಾರ, ಸೆಂಟ್ರಲ್, ಪೂರ್ವ, ಪೂರ್ವ-ಮಧ್ಯ, ಉತ್ತರ, ಉತ್ತರ ಮಧ್ಯ, ದಕ್ಷಿಣ, ದಕ್ಷಿಣ ಮಧ್ಯ ಮತ್ತು ಪಶ್ಚಿಮ ವಲಯಗಳ ಅಡಿಯಲ್ಲಿ ಎಲ್ಐಸಿಯ ವಿವಿಧ ವಿಭಾಗೀಯ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಎಲ್ಐಸಿ ಸಹಾಯಕ ನೇಮಕಾತಿಯನ್ನು ಆಯೋಜಿಸಲಾಗುತ್ತಿದೆ.

ಎಲ್ಐಸಿ ಸಹಾಯಕ ನೇಮಕಾತಿ 2019: ನೋಂದಣಿ ಪ್ರಕ್ರಿಯೆಯ ಹಂತಗಳನ್ನು ತಿಳಿದುಕೊಳ್ಳಿ

ಹಂತ 1: licindia.in ಅಧಿಕೃತ ವೆಬ್‌ಸೈಟ್‌ಗೆ ಹೋಗಿ
ಹಂತ 2: ಕೆರಿಯರ್ ವಿಭಾಗಕ್ಕೆ ಹೋಗಿ ಮತ್ತು ಎಲ್ಐಸಿ ಸಹಾಯಕ ನೇಮಕಾತಿ 2019 ನೋಡಿ
ಹಂತ 3: ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ
ಹಂತ 4: ಫಾರ್ಮ್ ಅನ್ನು ಎಚ್ಚರಿಕೆಯಿಂದ ಓದಿ ಮತ್ತು ಎಲ್ಲಾ ವಿವರಗಳನ್ನು ಪರಿಶೀಲಿಸಿ.
ಹಂತ 5: ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
ಹಂತ 6: ಶುಲ್ಕ ಪಾವತಿ ಮಾಡಿ ಮತ್ತು ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಭವಿಷ್ಯದ ಬಳಕೆಗಾಗಿ ಜೋಪಾನವಾಗಿ ಇರಿಸಿ.

Read more about: lic jobs money employment
English summary

LIC Recruitment 2019: Apply for 8,000 Posts at licindia.in

The Life Insurance Corporation (LIC) of India has invited applications from aspirants for over 8,000 vacancies for the posts of Assistant.
Story first published: Wednesday, September 18, 2019, 15:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X