For Quick Alerts
ALLOW NOTIFICATIONS  
For Daily Alerts

ಟಾಟಾ ಸ್ಟಿಲ್ ಷೇರಿನಲ್ಲಿ ಹಣಮಾಡಲು ಹೀಗೊಂದು ಅವಕಾಶ

ಷೇರುಪೇಟೆಯ ವಿಸ್ಮಯಕಾರಿ ಗುಣವೆಂದರೆ ಕೆಲವು ಬಾರಿ ಅರ್ಥೈಸಿಕೊಳ್ಳುವುದೇ ಕಷ್ಟವೆನ್ನಬಹುದು. ಸಾಮಾನ್ಯವಾಗಿ ನಾವುಗಳು ಖರೀದಿಸಬೇಕಾದರೆ ವಿವಿಧ ರೀತಿಯ ತುಲನಾತ್ಮಕ ಚಿಂತನೆಗಳಿಂದ ನಿರ್ಧರಿಸುತ್ತೇವೆ.

|

ಷೇರುಪೇಟೆಯ ವಿಸ್ಮಯಕಾರಿ ಗುಣವೆಂದರೆ ಕೆಲವು ಬಾರಿ ಅರ್ಥೈಸಿಕೊಳ್ಳುವುದೇ ಕಷ್ಟವೆನ್ನಬಹುದು. ಸಾಮಾನ್ಯವಾಗಿ ನಾವುಗಳು ಖರೀದಿಸಬೇಕಾದರೆ ವಿವಿಧ ರೀತಿಯ ತುಲನಾತ್ಮಕ ಚಿಂತನೆಗಳಿಂದ ನಿರ್ಧರಿಸುತ್ತೇವೆ. ಖರೀದಿ ಮಾಡಬೇಕಾದ ವಸ್ತು, ಸಾಮಾಗ್ರಿ, ಪದಾರ್ಥವು ಗುಣಮಟ್ಟದಲ್ಲಿ, ಬೆಲೆಯಲ್ಲಿ, ಬಾಳಿಕೆಯಲ್ಲಿ ಯೋಗ್ಯವೇ ಎಂಬುದನ್ನು ಮಾಪನಮಾಡಿ ನಂತರ ನಿರ್ಧರಿಸುತ್ತೇವೆ. ಅದೇ ರೀತಿ ಯಾವುದಾದರೂ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ಅದರಿಂದ ಲಭ್ಯವಾಗುವ ಲಾಭದ ಪ್ರಮಾಣ, ಪರಿಣಾಮ ಮುಂತಾದವುಗಳನ್ನಾಧರಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಒಂದು ಕಂಪನಿಯ ಷೇರನ್ನು ಕೊಳ್ಳುವಾಗಲು ಸಹ ನಮಗೆ ಅನುಕೂಲಕರವಾಗಿರುವ ಅಂಶಗಳನ್ನು ಮನದಟ್ಟು ಮಾಡಿಕೊಂಡು ಹೂಡುತ್ತೇವೆ. ಹೀಗಿದ್ದರೂ ಸಹ ಷೇರುಪೇಟೆಯಲ್ಲಿ ಕೆಲವು ಚಿಂತನೆಗಳಿಗೆ ವಿನಾಯಿತಿ ನೀಡಲಾಗಿದೆ.

ಟಾಟಾ ಸ್ಟೀಲ್ ಷೇರು

ಟಾಟಾ ಸ್ಟೀಲ್ ಷೇರು

ಟಾಟಾ ಸ್ಟೀಲ್ ಕಂಪನಿಯ ಷೇರಿನ ಬೆಲೆ ಸದ್ಯ ರೂ.360 ರ ಸಮೀಪವಿದೆ. ಈ ಕಂಪನಿಯು ಸೆನ್ಸೆಕ್ಸ್ ಮತ್ತು ನಿಫ್ಟಿ ಗಳ ಭಾಗವಾಗಿದ್ದು, ಪ್ರತಿಷ್ಠಿತ ಕಂಪನಿಯಾಗಿದೆ. ಈ ಕಂಪನಿಯ ಷೇರಿನ ಬೆಲೆ 2013 ರಲ್ಲಿ ರೂ.190 ರೊಳಗೆ ಕುಸಿದು, 2010 ರ ಎಫ್ ಪಿ ಓ ಮೂಲಕ ಪ್ರತಿ ಷೇರಿಗೆ ರೂ.610 ರಂತೆ ಷೇರುಪಡೆದವರಿಗೇ ಅಪಾರವಾದ ಹಾನಿಗೊಳಪಡಿಸಿತು. ಆದರೆ ಅಲ್ಲಿಂದ ಪುಟಿದೆದ್ದು ಜನವರಿ 2018 ರಲ್ಲಿ ರೂ.792 ರವರೆಗೂ ಏರಿಕೆ ಕಂಡಿತ್ತು. ಫೆಬ್ರವರಿ 2018 ರಲ್ಲಿ ಕಂಪನಿಯು ಮತ್ತೊಮ್ಮೆ ಹಕ್ಕಿನ ಷೇರನ್ನು ವಿತರಿಸಲು ನಿಗದಿತ ದಿನ ಗೊತ್ತುಪಡಿಸಿತು. ಪ್ರತಿ ಷೇರಿಗೆ ರೂ.510 ರಂತೆ ಪೂರ್ಣವಾಗಿ ಪಾವತಿಸಿದ ಷೇರುಗಳನ್ನು ವಿತರಿಸಿತು. ಅಂದರೆ ಈ ಒಂದು ವರ್ಷ ಒಂಬತ್ತು ತಿಂಗಳಲ್ಲಿ ಷೇರಿನ ಬೆಲೆಯೂ ಕುಸಿದು ಹಕ್ಕಿನ ಷೇರಿನ ವಿತರಣಾ ಬೆಲೆಗಿಂತ ಕಡಿಮೆ ದರದಲ್ಲಿ ವಹಿವಾಟಾಗುತ್ತಿದೆ. ಫೆಬ್ರವರಿ 2018 ರ ಸಂದರ್ಭದಲ್ಲಿ ಕಂಪನಿಯು ಭಾಗಷಃ ಪಾವತಿಸಿದ ಷೇರುಗಳನ್ನು ಪ್ರತಿ ಷೇರಿಗೆ ರೂ.615 ರ ಬೆಲೆಯಲ್ಲಿ ವಿತರಿಸಿ, ಮೊದಲನೇ ಕಂತು ರೂ.೧೫೪ ನ್ನು ಪಾವತಿಸಲಾಗಿದೆ. ಈ ಭಾಗಶಃ ಪಾವತಿಸಿದ ಷೇರುಗಳು ರೂ.35 ರಿಂದ 4೦ ರಲ್ಲಿ ವಹಿವಾಟಾಗುತ್ತಿದ್ದು, ಈ ಷೇರು ಖರೀದಿಸಿದವರು ಉಳಿದ ಹಣ ರೂ.461 ನ್ನು ಕಂಪನಿಯ ಕರೆ ಬಂದಾಗ ಪಾವತಿಸಬೇಕಾಗಿದೆ. ಅಂದರೆ ಈಗ ರೂ.360 ರ ಸಮೀಪ ವಹಿವಾಟಾಗುತ್ತಿರುವ ಷೇರಿಗೆ ಮುಂದೆ ರೂ.461 ರಂತೆ ಕೊಳ್ಳಲು ಈಗ ರೂ.40 ನ್ನು ಪ್ರೀಮಿಯಂ ನೀಡಿದಂತಾಗಿದೆ. ಅಂದರೆ ಈಗಿನ ರೂ.360 ರ ಬೆಲೆಯ ಷೇರನ್ನು ರೂ.500 ರಲ್ಲಿ ಖರೀದಿಸಿದಂತಾಗುತ್ತದೆ. ಆದರೆ ಮೊದಲ ಕಂತಾಗಿ ರೂ.40 ನ್ನು ನೀಡಿ ಬಾಕಿ ರೂ.461 ನ್ನು ಮುಂದೆ ಕಂಪನಿ ಕರೆ ನೀಡಿದಾಗ ಪಾವತಿಸಬೇಕು.
ಸಾಮಾನ್ಯವಾಗಿ ಹಕ್ಕಿನ ಷೇರಿನ ಬಾಕಿ ಹಣವನ್ನು ಒಂದು ವರ್ಷದೊಳಗೆ ಕರೆ ನೀಡಬೇಕೆಂಬ ನಿಯಮವಿದೆ. ಆದರೆ ಕಂಪನಿಯ ಗಾತ್ರವು ರೂ. 500 ಕೋಟಿಗಳಿಗಿಂತ ಹೆಚ್ಚಿದ್ದು ಇತರೆ ಎಲ್ಲಾ ನಿಯಮಾವಳಿಗಳನ್ನು ಪಾಲಿಸುತ್ತಿದ್ದಲ್ಲಿ ಅಂತಹ ಕಂಪನಿಗಳಿಗೆ ಹೆಚ್ಚಿನ ಸಮಯವನ್ನು ನೀಡಲು ಅವಕಾಶವಿದೆ. ಹಾಗಾಗಿ ಈ ಕಂಪನಿ ಬಾಕಿ ಹಣಕ್ಕೆ ಕರೆ ನೀಡಿಲ್ಲ.

ವಿಸ್ಮಯಕಾರಿ

ವಿಸ್ಮಯಕಾರಿ

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪೇಟೆಯಲ್ಲಿ ಹೂಡಿಕೆದಾರರಿಗೆ ಈ ಕಂಪನಿಯ ಮೇಲೆ ಅತೀವ ನಂಬಿಕೆ ಇದೆ ಎಂಬುದು. ಕಾರಣ ಸಧ್ಯ ರೂ.360 ರಲ್ಲಿರುವ ಷೇರಿಗೆ ರೂ. 500 ರಂತೆ ಖರೀದಿಸಲು ಮುಂದಾಗಿ ಅದಕ್ಕೆ ಭಾಗಶ ಹಣವನ್ನು ಈಗಲೇ ಕೊಟ್ಟು ಕಾದಿರಿಸುವರು. ನಾವು ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿ ಉತ್ತಮ ಗುಣಮಟ್ಟದ್ದಾಗಿದ್ದಲ್ಲಿ, ಹೂಡಿಕೆದಾರರ ಸ್ನೇಹಿ ಎಂದಾದಲ್ಲಿ ಪೇಟೆಯ ಪರಿಸ್ಥಿತಿಗಿಂತ ವಿಭಿನ್ನ ರೀತಿಯಲ್ಲಿ ಹೂಡಿಕೆದಾರರು ಬೆಂಬಲಿಸುತ್ತಾರೆ. ಇದು ನಿಜಕ್ಕೂ ವಿಸ್ಮಯಕಾರಿಯಲ್ಲವೇ?

ಅನಿಶ್ಚತೆತೆ ವಾಸ್ತವ

ಅನಿಶ್ಚತೆತೆ ವಾಸ್ತವ

ಈ ರೀತಿಯ ಅನಿಶ್ಚತೆಯ ನಿರ್ಧಾರಕ್ಕಿಂತ ಸಧ್ಯ ವಹಿವಾಟಾಗುತ್ತಿರುವ ವಾಸ್ತವ ದರ ಅಂದರೆ ರೂ.360 ರಲ್ಲಿ ಖರೀದಿಸಿ ಮುಂದೆ ಈ ಕಂಪನಿಯ ಪಾರ್ಟ್ಲಿ ಫೇಡ್ (partly paid) ಷೇರಿನ ಬಾಕಿ ಹಣಕ್ಕೆ ಕರೆ ನೀಡಿದಾಗ ಉಂಟಾಗಬಹುದಾದ ಏರಿಕೆಯಲ್ಲಿ ಈಗ ಖರೀದಿಸಿದ ಮಾರಾಟಮಾಡಿ ಹೊರಬರುವುದು ಮತ್ತೊಂದು ರೀತಿಯ ಲಾಭಗಳಿಕೆಗೆ ಅವಕಾಶವಾಗಿದೆ.

 

 

English summary

This is an opportunity to invest in Tata Still shares

Tata Steel shares are trading around Rs.360 where as its partly paid shares are trading around Rs.40 per share, where Rs.461 balance has to paid when Company calls for it.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X