For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯ ಅಸ್ಥಿರತೆಗೆ ನಂಬಿಕೆ ಕೊರತೆಯೋ ಅಥವಾ ಲಾಭ ಗಳಿಕೆಯ ಸಂತೃಪ್ತಿಯೋ

ಇಂಡಿಯನ್ ಬ್ಯಾಂಕ್ 23 ರಂದು ತನ್ನ ಫಲಿತಾಂಶ ಪ್ರಕಟಿಸಿದ್ದು, ಅತ್ಯುತ್ತಮ ಅಂಕಿ ಅಂಶಗಳೆಂದು ಪೇಟೆ ಸ್ವಾಗತಿಸಿ ರೂ.148 ರವರೆಗೂ ಏರಿಕೆ ಕಾಣುವಂತೆ ಮಾಡಿತಾದರೂ ಈ ಸಂಭ್ರಮ ಮಾತ್ರ ಅಂದಿಗೆ ಸೀಮಿತವಾಗಿತ್ತು.

|

ಇತ್ತೀಚಿನ ದಿನಗಳಲ್ಲಿ ವಿತ್ತೀಯ ವಲಯದ ಚಟುವಟಿಕೆಗಳು ಅಯೋಮಯವಾದ ರೀತಿಯಲ್ಲಿ ನಡೆಯುತ್ತಿವೆ. ಪೂರ್ವಕಲ್ಪಿತ, ಪೂರ್ವಾಪೇಕ್ಷಿತ ರೀತಿಯಲ್ಲಿ ಸಾಗುತ್ತಿಲ್ಲ. ವಿಶೇಷವಾಗಿ ಷೇರುಪೇಟೆಯ ಚಟುವಟಿಕೆಯಲ್ಲಿ ರಭಸದ ಏರಿಳಿತಗಳು ಪ್ರದರ್ಶಿತವಾಗಿ ಯಾವುದೇ ಒಂದು ಸಕಾರಾತ್ಮಕ ಅಂಶಗಳಿಂದ ಏರಿಕೆಯನ್ನು ಷೇರಿನ ಬೆಲೆಗಳಲ್ಲಿ ಕಂಡರೂ ಅದು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅಸಮರ್ಥವಾಗಿರುತ್ತದೆ. ಷೇರಿನ ಬೆಲೆಗಳಲ್ಲಿ ಆಗುತ್ತಿರುವ ಬದಲಾವಣೆಗೆ ಮುಖ್ಯ ಕಾರಣ ವಹಿವಾಟುದಾರರು ನಡೆಸುವ ತಿರುಚಾಟದ ರೀತಿಯ ಚಟುವಟಿಕೆಯಾಗಿದೆ.

ಷೇರುಪೇಟೆಯ ಅಸ್ಥಿರತೆಗೆ  ನಂಬಿಕೆ ಕೊರತೆಯೋ ಅಥವಾ ಲಾಭ ಗಳಿಕೆ

ಹಿಂದಿನ ವಾರವಷ್ಟೇ ವಾರ್ಷಿಕ ಕನಿಷ್ಟಕ್ಕೆ ಕುಸಿದು ನಂತರದ ದಿನ ಚೇತರಿಕೆಯಿಂದ ಮುನ್ನುಗ್ಗಿದ ಪಿ ಎನ್ ಬಿ ಹೌಸಿಂಗ್ ಫೈನಾನ್ಸ್ ಕಂಪನಿ ಪ್ರಕಟಿಸಿದ ಉತ್ತಮ ಫಲಿತಾಂಶದ ಕಾರಣ ಶುಕ್ರವಾರದಂದು ಹಿಂದಿನ ದಿನದ ಅಂತ್ಯದ ಬೆಲೆಯಾದ ರೂ.446.70 ರಿಂದ ರೂ.460 ರಲ್ಲಿ ಆರಂಭವಾಗಿ ರೂ.558 ರವರೆಗೂ ಏರಿಕೆ ಕಂಡು ರೂ.491ರ ಸಮೀಪ ಕೊನೆಗೊಂಡಿತು. ಅಂದರೆ ರೂ.165 ರಷ್ಟು ಏರಿಳಿತಗಳ ವ್ಯತ್ಯಾಸವಿದ್ದರೆ ಅದು ಶೇ.35 ರಷ್ಟಾಗುತ್ತದೆ. ಒಂದು ದಿನ ಈ ಪ್ರಮಾಣದ ಬದಲಾವಣೆ ಪ್ರದರ್ಶಿಸಿದಲ್ಲಿ ದೀರ್ಘಕಾಲೀನ ಹೂಡಿಕೆ ಏಕೆ ಬೇಕು?
ಇನ್ಫೋಸಿಸ್ ಷೇರಿನ ಬೆಲೆ ರೂ.615 ರವರೆಗೂ ಕುಸಿದು ಚೇತರಿಕೆ ಕಂಡು ರೂ.655 ರವರೆಗೂ ತಲುಪಿ ನಂತರ ರೂ.637 ರ ಸಮೀಪ ಕೊನೆಗೊಂಡಿದೆ. ಒಂದು ಕಂಪನಿಯ ಷೇರಿನ ಬೆಲೆ ವಾರ್ಷಿಕ ಗರಿಷ್ಟಕ್ಕೆ ತಲುಪಿದಾಗ ಉಂಟಾಗಬಹುದಾದ ಸಹಜ ಪ್ರಕ್ರಿಯೆ ಇದಾಗಿದೆ. ಕಾರಣಗಳು ವಿಭಿನ್ನ ಆದರೆ ಫಲಿತಾಂಶ ಮಾತ್ರ ಒಂದೇ. ಈ ಕಂಪನಿಯ ಷೇರಿನ ಬೆಲೆ ಕಳೆದ ವರ್ಷದ ನವೆಂಬರ್ 26 ರಂದು ರೂ.600 ರ ಸಮೀಪವಿದ್ದು ಈಗ ಮತ್ತೊಮ್ಮೆ ಆ ಸಂಖ್ಯೆಯನ್ನು ತಲುಪುವುದೇ ಕಾದುನೋಡಬೇಕು.
ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಷೇರಿನ ಬೆಲೆ ರೂ.250 ರವರೆಗೂ ಏರಿಕೆ ಕಂಡ ನಂತರ ವಾರಾಂತ್ಯದ ಶುಕ್ರವಾರ ಮತ್ತೊಮ್ಮೆ ರೂ.181 ರವರೆಗೂ ಕುಸಿದಿದೆ. ಕಾರಣಗಳು ವಿಭಿನ್ನವಾಗಿದ್ದರು ಹೂಡಿಕೆದಾರರ ಗಮನ ಮಾತ್ರ ಲಾಭಗಳಿಕೆಯತ್ತ ಮಾತ್ರ ಸೀಮಿತವಾಗಿದ್ದಲ್ಲಿ, ಅವಕಾಶಗಳು ಹಿತವಾಗಿರುತ್ತವೆ. ನವೆಂಬರ್ 6 ರಂದು ತನ್ನ ತ್ರೈಮಾಸಿಕ ಫಲಿತಾಂಶ ಮತ್ತು ಪ್ರಕಟಿಸಬಹುದಾದ ಲಾಭಾಂಶವನ್ನಾಧರಿಸಿ ಈ ಷೇರಿನ ಬೆಲೆ ಚಾಲನೆ ಪಡೆಯಬಹುದು.
ಶುಕ್ರವಾರದಂದು ಯಸ್ ಬ್ಯಾಂಕ್ ಷೇರಿನ ಬೆಲೆ ದಿನದ ಮಧ್ಯಂತರದಲ್ಲಿ ರೂ.45.75 ರವರೆಗೂ ಇಳಿಕೆ ಕಂಡು ನಂತರದಲ್ಲಿ ಚೇತರಿಕೆ ಕಂಡು ಮಧ್ಯಾಹ್ನ 3 ಗಂಟೆಯ ನಂತರದಲ್ಲಿ ರೂ.54.35 ರವರೆಗೂ ಏರಿಕೆ ಕಂಡಿದೆ. ಅಂದರೆ ಸುಮಾರು 13 ರೂಪಾಯಿಗಳ ಏರಿಳಿತ ಶೇ.30 ರಷ್ಟು ಅಂತರದಲ್ಲಿದ್ದರೆ ಅದು ಡೇ ಟ್ರೇಡಿಂಗ್ ವಹಿವಾಟುದಾರರಿಗೆ ವರದಾನವಾಗಿದೆ.
ಗುರುವಾರದಂದು ಭಾರತಿ ಏರ್ ಟೆಲ್ ಷೇರಿನ ಬೆಲೆ ರೂ.೩೫೫ ರಲ್ಲಿ ಆರಂಭವಾಗಿ ಚಟುವಟಿಕೆಯಲ್ಲಿತ್ತು, ದಿನದ ಮಧ್ಯಂತರದಲ್ಲಿ ಬಂದ ಸುಪ್ರೀಂ ಕೋರ್ಟ್ ತೀರ್ಪು ವಲಯದ ಕಂಪನಿಗಳ ಮೇಲೆ ಆರ್ಥಿಕ ಒತ್ತಡ ಉಂಟುಮಾಡುವುದೆಂಬ ಕಾರಣದಿಂದ ರೂ.325.60 ರವರೆಗೂ ಕುಸಿದು ನಂತರ ಕೆಲವೇ ಕ್ಷಣಗಳಲ್ಲಿ ಪುಟಿದೆದ್ದು, ಅಂತಿಮ ಕ್ಷಣಗಳಲ್ಲಿ ರೂ.376 ರವರೆಗೂ ಏರಿಕೆ ಕಂಡು ರೂ.372 ರ ಸಮೀಪ ಕೊನೆಗೊಂಡಿದೆ.
ಇಂಡಿಯನ್ ಬ್ಯಾಂಕ್ 23 ರಂದು ತನ್ನ ಫಲಿತಾಂಶ ಪ್ರಕಟಿಸಿದ್ದು, ಅತ್ಯುತ್ತಮ ಅಂಕಿ ಅಂಶಗಳೆಂದು ಪೇಟೆ ಸ್ವಾಗತಿಸಿ ರೂ.148 ರವರೆಗೂ ಏರಿಕೆ ಕಾಣುವಂತೆ ಮಾಡಿತಾದರೂ ಈ ಸಂಭ್ರಮ ಮಾತ್ರ ಅಂದಿಗೆ ಸೀಮಿತವಾಗಿತ್ತು. ನಂತರದ ದಿನ ಷೇರಿನ ಬೆಲೆ ಮಾತ್ರ ಹಿಂದಿನ ಬೆಲೆಗೆ ಹಿಂದಿರುಗಿ ರೂ.125 ರ ಸಮೀಪದಲ್ಲಿ ವಾರಾಂತ್ಯ ಕಂಡಿತು.
ಕೋಟಕ್ ಮಹಿಂದ್ರಾ ಬ್ಯಾಂಕ್ ಪ್ರಕಟಿಸಿದ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿಲ್ಲದೆ ಕಂಪನಿಯ ಎನ್ ಪಿ ಎ ಹೆಚ್ಚಾಗಿದೆ ಎಂಬ ಅಂಶವನ್ನು ಪೇಟೆಯು ಪರಿಗಣಿಸದೆ ಷೇರಿನ ಬೆಲೆಯಲ್ಲಿ ಸ್ಥಿರತೆ ಪ್ರದರ್ಶಿಸಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಶುಕ್ರವಾರ ಪ್ರಕಟಿಸಿದ ಫಲಿತಾಂಶವು ಉತ್ತಮವಾಗಿದೆ ಎಂಬ ಸುದ್ಧಿಯು ಎಷ್ಟರ ಮಟ್ಟಿಗೆ ಷೇರಿನ ಬೆಲೆಯಲ್ಲಿ ಏರಿಕೆ ಮೂಡಿಸಬಹುದು ಎಂಬುದು ಕಾದು ನೋಡಬೇಕಾಗಿದೆ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳ ಸಧ್ಯದ ಷೇರಿನ ಬೆಲೆಗಳನ್ನು ನೋಡಿದರೆ, ಪ್ರಮುಖ ಖಾಸಗಿ ಬ್ಯಾಂಕ್ ಷೇರುಗಳನ್ನು, ಭಾಗಶಃವಾಗಿಯಾದರು ಮಾರಾಟಮಾಡಿ ಉತ್ತಮ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಪರಿವರ್ತಿಸಿಕೊಳ್ಳುವುದಕ್ಕೆ ಇದು ಸೂಕ್ತ ಸಮಯವಾಗಿದೆ ಎಂದೆನಿಸುತ್ತದೆ.

Read more about: stock market sensex money
English summary

Reason for unstability of stocks may be lack of Confidence or satisfactory level of profit

Markets are exhibitting high volatailty. Performance is not supporting to maintain stability in prices. Excessive speculative nature is yielding more return than the traditional way. This causes more volatility. Looking at PSU lead Banks performance, this may be right time to convert high priced Banking shares to low priced PSU Banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X