For Quick Alerts
ALLOW NOTIFICATIONS  
For Daily Alerts

ಆಫ್ರಿಕಾದ ಮಹಿಳೆಯರ ಒಟ್ಟು ಸಂಪತ್ತಿಗಿಂತ ಹೆಚ್ಚು ಆಸ್ತಿ 22 ಶ್ರೀಮಂತರ ಬಳಿ ಜಮೆ

|

ಜಗತ್ತಿನ ಶತಕೋಟ್ಯಧಿಪತಿಗಳ ಸಂಖ್ಯೆಯು ಕಳೆದ ಒಂದು ದಶಕದಲ್ಲಿ ದ್ವಿಗುಣವಾಗಿದೆ. ಜಾಗತಿಕ ಜನಸಂಖ್ಯೆಗಿಂತ ಅರವತ್ತು ಪರ್ಸೆಂಟ್ ಹೆಚ್ಚು ಶ್ರೀಮಂತರಾಗಿದ್ದಾರೆ ಎಂದು ಚಾರಿಟಿ ಆಕ್ಸ್ ಫಾಮ್ ಸೋಮವಾರ ತಿಳಿಸಿದೆ. ಅದರ ಪ್ರಕಾರ, ಬಡ ಮಹಿಳೆಯರು ಹಾಗೂ ಯುವತಿಯರು ಈ ಮಾನದಂಡದ ಕೆಳ ಭಾಗದಲ್ಲಿ ಇದ್ದಾರೆ.

ಪ್ರತಿ ನಿತ್ಯ ಸಾವಿರದ ಇನ್ನೂರೈವತ್ತು ಕೋಟಿ ಗಂಟೆಯ ಅವರ ದುಡಿಮೆಗೆ ಯಾವುದೇ ಹಣ ಪಾವತಿ ಆಗುತ್ತಿಲ್ಲ. ಈ ಮೊತ್ತವನ್ನೆಲ್ಲ ಸೇರಿಸಿ ಹೇಳುವುದಾದರೆ, ವರ್ಷಕ್ಕೆ ಹತ್ತು ಲಕ್ಷದ ಎಂಬತ್ತು ಸಾವಿರ ಕೋಟಿ ರುಪಾಯಿ ಆಗುತ್ತದೆ. ನಮ್ಮ ಹರಕು ಮುರುಕು ಆರ್ಥಿಕತೆಯಲ್ಲಿ ಸಾಮಾನ್ಯ ಜನರ ಶ್ರಮದಲ್ಲಿ ಶತಕೋಟ್ಯಧಿಪತಿಗಳ ಹಾಗೂ ದೊಡ್ಡ ವ್ಯಾಪಾರ ಸಾಮ್ರಾಜ್ಯಗಳ ತಿಜೋರಿ ತುಂಬುತ್ತಿದೆ ಎನ್ನಲಾಗಿದೆ.

ವ್ಯಾಪಾರ- ಉದ್ಯಮಕ್ಕೆ ನಿರ್ದಿಷ್ಟ ನಿಯಮಾವಳಿ

ವ್ಯಾಪಾರ- ಉದ್ಯಮಕ್ಕೆ ನಿರ್ದಿಷ್ಟ ನಿಯಮಾವಳಿ

ವ್ಯಾಪಾರ- ಉದ್ಯಮಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಾವಳಿಗಳನ್ನು ರೂಪಿಸದಿದ್ದಲ್ಲಿ ಶ್ರೀಮಂತರು- ಬಡವರ ಮಧ್ಯೆ ಇರುವ ಕಂದಕವನ್ನು ನಿವಾರಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ದಾವೋಸ್ ನಲ್ಲಿ ಆರಂಭವಾಗಲಿರುವ ವಿಶ್ವ ಆರ್ಥಿಕ ಸಮಾವೇಶಕ್ಕೆ ಮುಂಚಿತವಾಗಿ ಈ ವರದಿ ಬಿಡುಗಡೆ ಮಾಡಲಾಗಿದೆ. ಸಾಮಾನ್ಯವಾಗಿ ಆಕ್ಸ್ ಫಾಮ್ ನಿಂದ ಜಾಗತಿಕ ಅಸಮಾನತೆ ಕುರಿತ ವರದಿ ಬಿಡುಗಡೆಯಾಗುವುದು ಈ ಸಮಾವೇಶಕ್ಕೆ ಮುಂಚಿತವಾಗಿ, ಅದೇ ರೀತಿ ಸಮಾವೇಶಕ್ಕೆ ಒಂದು ದಿನ ಮುಂಚೆ ಬಿಡುಗಡೆಯಾಗಿದೆ.

ಆಸ್ತಿಯ ಅರ್ಧ ಪರ್ಸೆಂಟ್ ತೆರಿಗೆ ಪಾವತಿ

ಆಸ್ತಿಯ ಅರ್ಧ ಪರ್ಸೆಂಟ್ ತೆರಿಗೆ ಪಾವತಿ

"ಆಫ್ರಿಕಾದಲ್ಲಿ ಇರುವ ಎಲ್ಲ ಮಹಿಳೆಯರ ಬಳಿಯ ಸಂಪತ್ತಿಗಿಂತ ಹೆಚ್ಚು ಸಂಪತ್ತು ವಿಶ್ವದ ಇಪ್ಪತ್ತೆರಡು ಶ್ರೀಮಂತ ಪುರುಷರ ಬಳಿ ಇದೆ" ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಗತ್ತಿನ ಒಂದು ಪರ್ಸೆಂಟ್ ನಷ್ಟು ಶ್ರೀಮಂತರು ಕಳೆದ ಹತ್ತು ವರ್ಷದಲ್ಲಿ ತಮ್ಮ ಆಸ್ತಿಯ ಅರ್ಧ ಪರ್ಸೆಂಟ್ ನಷ್ಟು ತೆರಿಗೆಯಾಗಿ ಪಾವತಿಸಿದ್ದಾರೆ.

ಆರ್ಥಿಕ ತಜ್ಞರಿಂದ ಆಕ್ಷೇಪ

ಆರ್ಥಿಕ ತಜ್ಞರಿಂದ ಆಕ್ಷೇಪ

ಹಿರಿಯರು ಮತ್ತು ಮಕ್ಕಳ ಸುರಕ್ಷೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹನ್ನೊಂದು ಕೋಟಿ ಎಪ್ಪತ್ತು ಲಕ್ಷ ಉದ್ಯೋಗವನ್ನು ಸೃಷ್ಟಿಸಲು ಆ ಮೊತ್ತವು ಸಮವಾಗುತ್ತದೆ ಎಂದು ತಿಳಿಸಲಾಗಿದೆ. ಆಕ್ಸ್ ಫಾಮ್ ನ ಈ ದತ್ತಾಂಶವು ಫೋರ್ಬ್ಸ್ ನಿಯತಕಾಲಿಕೆ, ಸ್ವಿಸ್ ಬ್ಯಾಂಕ್ ಸಾಲದ ಮಾಹಿತಿಯನ್ನು ಆಧರಿಸಿದೆ. ಆದರೆ ಈ ಅಂಕಿ- ಅಂಶದ ಬಗ್ಗೆ ಕೆಲವು ಆರ್ಥಿಕ ತಜ್ಞರು ತಕರಾರು ಎತ್ತಿದ್ದಾರೆ.

2153 ಜನರ ಬಳಿಯೇ ಅಷ್ಟೊಂದು ಸಂಪತ್ತು

2153 ಜನರ ಬಳಿಯೇ ಅಷ್ಟೊಂದು ಸಂಪತ್ತು

ಈ ಭೂಮಿ ಮೇಲೆ ಇರುವ ನಾನೂರ ಅರವತ್ತು ಕೋಟಿ ಜನರ ಬಳಿಗಿಂತ ಹೆಚ್ಚು ಸಂಪತ್ತು ಎರಡು ಸಾವಿರದ ನೂರಾ ಐವತ್ಮೂರು ಜನರ ಬಳಿ ಇದೆ ಎಂಬುದು ಈಗಿನ ದತ್ತಾಂಶದಿಂದ ಗೊತ್ತಾಗುತ್ತದೆ. ಮತ್ತೊಬ್ಬರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ಶೇಕಡಾ ನಲವತ್ತೈದರಷ್ಟು ಮಹಿಳೆಯರಿಗೆ ಉದ್ಯೋಗ ದೊರೆಯುವುದಿಲ್ಲ ಅಥವಾ ಮಾಡುವುದಿಲ್ಲ. ಇದೇ ಕಾರಣಕ್ಕೆ ಶೇಕಡಾ ಆರರಷ್ಟು ಪುರುಷರಿಗೆ ಉದ್ಯೋಗ ಮಾಡುವುದಿಲ್ಲ ಎಂಬುದು ತಿಳಿದುಬಂದಿದೆ.

English summary

22 Richest In The World Have More Wealth Than Women in Africa

The 22 richest men in the world have more wealth than all the women in Africa, data revealed by Oxfam.
Story first published: Monday, January 20, 2020, 16:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X