For Quick Alerts
ALLOW NOTIFICATIONS  
For Daily Alerts

LIC ಪಾಲಿಸಿದಾರರಿಗೆ 5 ಪ್ರಮುಖ ಘೋಷಣೆಗಳು

|

ಕೊರೊನಾ ವ್ಯಾಪಿಸುತ್ತಿರುವುದರಿಂದ ಎದುರಿಸುತ್ತಿರುವ ಸಮಸ್ಯೆ, ಲಾಕ್ ಡೌನ್ ಗಮನದಲ್ಲಿ ಇಟ್ಟುಕೊಂಡು ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮವು (ಎಲ್ ಐಸಿ) 5 ಪ್ರಮುಖ ಘೋಷಣೆಗಳನ್ನು ಮಾಡಿದೆ. ಎಲ್ಲಿ ಸಾಧ್ಯವೋ ಅಲ್ಲಿ ತುಂಬ ಕಡಿಮೆ ಸಂಖ್ಯೆಯ ಉದ್ಯೋಗಿಗಳ ಜತೆ ಎಲ್ ಐಸಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಇತರ ಸಿಬ್ಬಂದಿ ಮನೆಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಹಕರಿಗೆ ಮಾಮೂಲಿ ದಿನಗಳಲ್ಲಿ ಯಾವ ರೀತಿಯ ಸೇವೆ ದೊರೆಯುತ್ತಿತ್ತೋ ಅದೇ ರೀತಿಯಲ್ಲಿ ದೊರೆಯುವುದಕ್ಕೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಪಾಲಿಸಿದಾರರು ಎಲ್ ಐಸಿ ವೆಬ್ ಸೈಟ್ ಗೆ ಭೇಟಿ ನೀಡಿ, ಅಗತ್ಯ ಮಾಹಿತಿ ಪಡೆಯಬಹುದು. ಪ್ರೀಮಿಯಂ ಪಾವತಿ, ಆನ್ ಲೈನ್ ನಲ್ಲಿ ಪಾಲಿಸಿ ಖರೀದಿ ಇತರ ಸೇವೆಗಳನ್ನು ಸಹ ಪಡೆಯಬಹುದು ಎಂದು ತಿಳಿಸಲಾಗಿದೆ.

LIC ಪಾಲಿಸಿದಾರರಿಗೆ 5 ಪ್ರಮುಖ ಘೋಷಣೆಗಳು

ಪಾಲಿಸಿದಾರರ ಅನುಕೂಲಕ್ಕಾಗಿ ಎಲ್ ಐಸಿ ಮಾಡಿರುವ ಐದು ಪ್ರಮುಖ ಘೋಷಣೆಗಳು ಹೀಗಿವೆ:
* ಫೆಬ್ರವರಿ ತಿಂಗಳ ಪ್ರೀಮಿಯಂ ಪಾವತಿಗೆ ಈ ಹಿಂದೆ ಮಾರ್ಚ್ 22ನೇ ತಾರೀಕಿನ ತನಕ ಸಮಯಾವಕಾಶ ಇತ್ತು. ಇದೀಗ ಏಪ್ರಿಲ್ 15ರ ತನಕ ಅವಧಿ ವಿಸ್ತರಣೆ ಮಾಡಲಾಗಿದೆ.

* ಒಂದು ವೇಳೆ ಪಾಲಿಸಿ ರಿವೈವ್ ಮಾಡಬೇಕಿದ್ದಲ್ಲಿ, ಅಂದರೆ ಅವಧಿ ಮೀರಿಯೂ ನವೀಕರಣ ಮಾಡದ ಸಂದರ್ಭದಲ್ಲಿ ಆನ್ ಲೈನ್ ನಲ್ಲೇ ಮಾಡಬಹುದು. ಉತ್ತಮ ಆರೋಗ್ಯ ಸ್ಥಿತಿಯಲ್ಲಿ ಇರುವುದಕ್ಕೆ ಸಾಕ್ಷ್ಯ ಒದಗಿಸಬೇಕಾದ ಅಗತ್ಯ ಕೂಡ ಇಲ್ಲ.

* ಯಾವುದೇ ಸೇವಾ ಶುಲ್ಕ ಇಲ್ಲದೆ ಎಲ್ ಐಸಿ ಪಾಲಿಸಿದಾರರು ಡಿಜಿಟಲ್ ಪಾವತಿ ಮೂಲಕ ಪ್ರೀಮಿಯಂಗಳನ್ನು ಕಟ್ಟಬಹುದು. LIC Pay Direct ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕವೂ ಪಾವತಿಸಬಹುದು. ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯ ಇಲ್ಲದೆ, ಕೆಲವು ಮೂಲ ಮಾಹಿತಿ ನೀಡುವ ಮೂಲಕ ನೇರವಾಗಿ ಪ್ರೀಮಿಯಂ ಪಾವತಿಸಬಹುದು.

* ಐಡಿಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಶಾಖೆಗಳಲ್ಲಿ ಪ್ರೀಮಿಯಂ ಪಾವತಿಸಬಹುದು. ಬ್ಲಾಕ್ ಮಟ್ಟದಲ್ಲಿ ಕಾಮನ್ ಸರ್ವೀಸ್ ಸೆಂಟರ್ ಗಳಲ್ಲಿ (ಸಿಎಸ್ ಸಿ) ನಗದು ಪಾವತಿಸಬಹುದು.

* ಆನ್ ಲೈನ್ ನಲ್ಲಿ ಎಲ್ ಐಸಿಯ ಐದು ಪ್ಲಾನ್ ಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಟೆಕ್ ಟರ್ಮ್, ಜೀವನ್ ಶಾಂತಿ ಆನ್ಯುಟಿ ಪ್ಲಾನ್, ಕ್ಯಾನ್ಸರ್ ಕವರ್, ಎಸ್ ಐಪಿಪಿ ಮತ್ತು ನಿವೇಶ್ ಪ್ಲಸ್ ಪ್ಲ್ಯಾನ್ ಗಳು ಆನ್ ಲೈನ್ ನಲ್ಲಿ ಖರೀದಿಗೆ ಲಭ್ಯವಿವೆ.

ಎಲ್ ಐಸಿ ಪಾಲಿಸಿದಾರರು ಒಂದು ವೇಳೆ ಕೊರೊನಾದಿಂದ ಮೃತಪಟ್ಟಲ್ಲಿ ಇತರ ಬಗೆಯ ಸಾವಿನ ಪ್ರಕರಣಗಳಲ್ಲಿ ಹೇಗೆ ಪ್ರಕ್ರಿಯೆ ನಡೆಯುತ್ತದೋ ಅದೇ ರೀತಿ ಪರಿಗಣಿಸಲಾಗುತ್ತದೆ. ತುರ್ತಾಗಿ ಇನ್ಷೂರೆನ್ಸ್ ಮೊತ್ತ ಪಾವತಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

English summary

5 Major Announcements For LIC Policyholders

Here is the 5 major announcements for LIC policyholders during Corona lock down.
Story first published: Sunday, April 12, 2020, 15:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X