For Quick Alerts
ALLOW NOTIFICATIONS  
For Daily Alerts

ಚೀನಾದ ಐದು ವಸ್ತುಗಳ ಮೇಲೆ ನಿಷೇಧ ಹೇರಿದ ಯುಎಸ್: ಬಲವಂತಕ್ಕೆ ಭರ್ತಿ ಪೆಟ್ಟು

|

ಚೀನಾದಿಂದ ಐದು ಉತ್ಪನ್ನಗಳ ಆಮದನ್ನು ಯು.ಎಸ್. ನಿಷೇಧಿಸಿದೆ. ಕಂಪ್ಯೂಟರ್ ಭಾಗಗಳು, ಹತ್ತಿ, ಕೂದಲಿನ ಉತ್ಪನ್ನಗಳನ್ನು ಒಳಗೊಂಡಂತೆ ಐದು ವಸ್ತುಗಳ ಆಮಧು ನಿಷೇಧಿಸಿದೆ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಬಲವಂತದ ಕಾರ್ಮಿಕರ ಶಿಬಿರಗಳನ್ನು ನಿರ್ಮಿಸಿ, ಅವರ ಮೂಲಕ ಈ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಭಾರತದಲ್ಲಿ ಆಯಿತು: ಇದೀಗ ಅಮೆರಿಕದಲ್ಲೂ TikTok ನಿಷೇಧ?

ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ನಂತರ ಯುಎಸ್- ಚೀನಾ ಮಧ್ಯೆ ಸಂಬಂಧ ಹಳಸಿದೆ. ವಿಶ್ವದಾದ್ಯಂತ ಕೊರೊನಾ ಹರಡುವುದಕ್ಕೆ ಚೀನಾ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪ ಮಾಡಿದ್ದಾರೆ. ಕ್ಸಿನ್ ಜಿಯಾಂಗ್ ಪ್ರಾಂತ್ಯ, ಹಾಂಕಾಂಗ್ ಹಾಗೂ ಟಿಬೆಟ್ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ತಂತ್ರಜ್ಞಾನ ಕಳುವು ಆರೋಪದ ಮಾತುಗಳು ಕೇಳಿಬಂದ ಮೇಲಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಚೀನಾದ ಯಾವ ಉತ್ಪನ್ನಗಳಿಗೆ ನಿಷೇಧ
 

ಚೀನಾದ ಯಾವ ಉತ್ಪನ್ನಗಳಿಗೆ ನಿಷೇಧ

ಸೋಮವಾರದಂದು ಈ ಬಗ್ಗೆ ಹೇಳಿಕೆ ನೀಡಿದ್ದು, ಹತ್ತು, ಬಟ್ಟೆಗಳು, ಕಂಪ್ಯೂಟರ್ ಭಾಗಗಳು, ಕೂದಲು ಉತ್ಪನ್ನಗಳು ಹಾಗೂ ಕ್ಸಿನ್ ಜಿಯಾಂಗ್ ನಲ್ಲಿನ ಕೌಶಲ ಹಾಗೂ ತರಬೇತಿ ಕೇಂದ್ರಗಳಲ್ಲಿ ತಯಾರಿಸಿದ ಎಲ್ಲ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ ಎಂದು ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ (ಡಿಎಚ್ ಎಸ್) ತಿಳಿಸಿದೆ. ಈ ಉತ್ಪನ್ನಗಳನ್ನು ತಯಾರು ಮಾಡುತ್ತಿರುವುದು ಉಯ್ಘರ್ ಸ್ವಾಯತ್ತ ಪ್ರದೇಶದಲ್ಲಿ. ಅಲ್ಲಿ ಸರ್ಕಾರಿ ಪ್ರಾಯೋಜಿತ ಬಲವಂತದ ಕಾರ್ಮಿಕ ಪದ್ಧತಿ ಇದೆ. ಚೀನಾ ಸರ್ಕಾರವೇ ಉಯ್ಘರ್ ಜನರು ಹಾಗೂ ಅಲ್ಲಿನ ಅಲ್ಪಸಂಖ್ಯಾತ ಜನಾಂಗದ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಡಿಎಚ್ ಎಸ್ ಹೇಳಿಕೆ ತಿಳಿಸಿದೆ. ಯುಎಸ್ ಕಸ್ಟಮ್ಸ್ ಅಂಡ್ ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಈ ಹಿಂದೆ ಐದು ವಿಥ್ ಹೋಲ್ಡ್ ರಿಲೀಸ್ ಆರ್ಡರ್ಸ್ (ಡಬ್ಲ್ಯುಆರ್ ಒ) ನಿಷೇಧ ಎತ್ತಿ ಹಿಡಿದಿತ್ತು. ಎಲ್ಲೆಲ್ಲ ಬಲವಂತದ ಕಾರ್ಮಿಕ ಪದ್ಧತಿ ಕೇಳಿಬರುತ್ತದೋ ಅಂಥಲ್ಲಿಂದ ಯುಎಸ್ ಗೆ ವಸ್ತುಗಳು ಆಮದು ಆಗುವುದನ್ನು ಡಬ್ಲ್ಯುಆರ್ ಒ ತಡೆಯುತ್ತದೆ.

ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ

ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ

"ಈ ಕ್ರಮವು ಪೀಪಲ್ ರಿಪಬ್ಲಿಕ್ ಆಫ್ ಚೀನಾಗೆ ಸ್ಪಷ್ಟ ಸಂದೇಶ ಕಳುಹಿಸುತ್ತದೆ. ಸರ್ಕಾರಿ ಪ್ರಾಯೋಜಿತ ಬಲವಂತ ಕಾರ್ಮಿಕ ಪದ್ಧತಿಗೆ ಕೊನೆ ಹೇಳುವ ಸಮಯ ಇದು. ಎಲ್ಲ ಜನರ ಮಾನವ ಹಕ್ಕುಗಳನ್ನು ಗೌರವಿಸಬೇಕು" ಎಂದು ಯುಎಸ್ ಕಾರ್ಯದರ್ಶಿ ಮೈಕ್ ಪೊಂಪೆ ಹೇಳಿದ್ದಾರೆ. ಡಬ್ಲ್ಯುಆರ್ ಒ ಈ ತಡೆಯ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಂಡ್ ಬಾರ್ಡರ್ ಪ್ರೊಟೆಕ್ಷನ್ ನಿಂದ ಈ ಉತ್ಪನ್ನಗಳ ಶಿಪ್ ಮೆಂಟ್ ವಶಕ್ಕೆ ಪಡೆಯಲಾಗುತ್ತದೆ. "ಈ ಆದೇಶವು ಏನು ತೋರಿಸುತ್ತದೆ ಅಂದರೆ, ಚೀನಾದಿಂದ ಉಯ್ಘರ್ಸ್ ಮತ್ತು ಕ್ಸಿನ್ ಜಿಯಾಂಗ್ ನಲ್ಲಿರುವ ಇತರ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಈ ವಿಶ್ವವು ಬೆಂಬಲಿಸುವುದಿಲ್ಲ. ಬಲವಂತ ಕಾರ್ಮಿಕ ಪದ್ಧತಿ ಹಾಗೂ ಸ್ವಾತಂತ್ರ್ಯ ಹರಣ ಮತ್ತು ಅವರು ಹೇಗೆ ಮತ್ತು ಎಲ್ಲಿ ಕೆಲಸ ಮಾಡಬೇಕು ಎಂಬುದಕ್ಕೆ ಸಂಸ್ಥೆಗಳನ್ನು ನೇಮಿಸುವುದನ್ನು ಸಹಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

ಅಮೆರಿಕನ್ ಕಾರ್ಮಿಕರು ಮೊದಲು
 

ಅಮೆರಿಕನ್ ಕಾರ್ಮಿಕರು ಮೊದಲು

ಬಲವಂತವಾಗಿ ಕಾರ್ಮಿಕರನ್ನು ದುಡಿಸಿಕೊಂಡು, ಉತ್ಪನ್ನಗಳನ್ನು ರಫ್ತು ಮಾಡುವುದರಿಂದ ಅಮೆರಿಕದ ಕಾರ್ಮಿಕರಿಗೆ ಹಾಗೂ ಉದ್ಯಮಕ್ಕೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನಲಾಗಿದೆ. "ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಈ ಇಲಾಖೆಯು ಅಮೆರಿಕನ್ ಕಾರ್ಮಿಕರು ಮತ್ತು ಉದ್ಯಮವನ್ನು ಮೊದಲ ಸ್ಥಾನದಲ್ಲಿ ಇಡುತ್ತದೆ. ಈ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಅಮೆರಿಕನ್ ನಾಗರಿಕರು ಭಾಗವಹಿಸಬಾರದು" ಎಂದು ಹೇಳಿದ್ದಾರೆ. 2020ರ ಆರ್ಥಿಕ ವರ್ಷದಲ್ಲಿ ಸಿಬಿಪಿಯಿಂದ ಹನ್ನೆರಡು ಡಬ್ಲ್ಯುಆರ್ ಒ ವಿತರಿಸಿದೆ. ಅದರಲ್ಲಿ ಎಂಟು ಉತ್ಪನ್ನಗಳು ಚೀನಾಗೆ ಸೇರಿವೆ. ಜುಲೈನಲ್ಲಿ ಯುಎಸ್ ನಿಂದ ಸಿಪಿಸಿ ಮೂವರು ಸದಸ್ಯರಿಗೆ ನಿರ್ಬಂಧ ಹೇರಿದೆ. ನ್ಯಾಯಸಮ್ಮತವಲ್ಲದ ಬಗೆಯಲ್ಲಿ ಉಯ್ಘರ್ಸ್, ಕಝಕ್ ಜನಾಂಗದವರು ಮತ್ತು ಕ್ಸಿನ್ ಜಿಯಾಂಗ್ ಪ್ರಾಂತ್ಯದ ಇತರ ಅಲ್ಪಸಂಖ್ಯಾತರನ್ನು ವಶಕ್ಕೆ ಪಡೆದಿದ್ದ ಕಾರಣಕ್ಕೆ ನಿರ್ಬಂಧ ಹೇರಿದೆ. ಚೀನಾದ ವಾಯವ್ಯ ಪ್ರಾಂತ್ಯದಲ್ಲಿ ಸಾಮೂಹಿಕವಾಗಿ ವಶಕ್ಕೆ ಪಡೆದಿರುವುದು ಹಾಗೂ ಧರ್ಮದ ಆಧಾರಿತವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂಬ ಆರೋಪ ಇದೆ.

English summary

US bans import of 5 Chinese goods produced using forced labour

The United States Of America has banned the import of five goods from China, including computer-parts, cotton and hair products, alleging that they are produced in forced labour camps in Xinjiang province.
Company Search
COVID-19