For Quick Alerts
ALLOW NOTIFICATIONS  
For Daily Alerts

ಸ್ಮಾರ್ಟ್ ಫೋನ್ ಖರೀದಿಗೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 5,000 ರುಪಾಯಿ ನೆರವು

|

ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಖರೀದಿ ಮಾಡುವುದಕ್ಕೆ ಹಣಕಾಸಿನ ನೆರವು ಒದಗಿಸುವುದಕ್ಕೆ ತ್ರಿಪುರಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ನಿರ್ಧಾರ ಮಾಡಿದೆ ಎಂದು ಶಿಕ್ಷಣ ಮತ್ತು ಕಾನೂನು ಸಚಿವ ರತನ್ ಲಾಲ್ ನಾಥ್ ಬುಧವಾರ ಹೇಳಿಕೆ ನೀಡಿದ್ದಾರೆ.

ಚುನಾವಣೆಗೆ ಪೂರ್ವದಲ್ಲಿ, ಅಂದರೆ 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲು ಸರ್ಕಾರ ಮುಂದಾಗಿದೆ. ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಿದ್ದು, ಸ್ಮಾರ್ಟ್ ಫೋನ್ ಖರೀದಿಗೆ 5,000 ರುಪಾಯಿಯನ್ನು 14,608 ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಖರೀದಿಗಾಗಿ ನೀಡಲಾಗುತ್ತದೆ.

ಸರ್ಕಾರದಿಂದ ನಡೆಸುವ 38 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೆಡಿಕಲ್, ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ವಿಜ್ಞಾನ, ಕಲೆ, ವಾಣಿಜ್ಯ, ಕಾನೂನು, ಚಿತ್ರಕಲೆ, ಸಂಗೀತ ಮತ್ತು ನರ್ಸಿಂಗ್ ಪದವಿ ವ್ಯಾಸಂಗ ಮಾಡುತ್ತಿರುವ 14,608 ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಖರೀದಿಗೆ ಒಂದು ಸಲ ಹಣಕಾಸಿನ ನೆರವು ನೀಡಲಾಗುತ್ತದೆ.

ಸ್ಮಾರ್ಟ್ ಫೋನ್ ಖರೀದಿಗೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 5,000 ರು.

ಇದಕ್ಕೆ ಮುಖ್ಯಮಂತ್ರಿ ಯುಬ ಜೋಗಾಜೋಗ್ ಯೋಜನಾ ಎಂದು ಹೆಸರಿಡಲಾಗಿದೆ. 2020-21ರ ಶೈಕ್ಷಣಿಕ ವರ್ಷದಿಂದ ಸ್ಮಾರ್ಟ್ ಫೋನ್ ಖರೀದಿಗೆ ಹಣದ ನೆರವು ನೀಡಲಾಗುತ್ತದೆ. ಈ ಯೋಜನೆಗಾಗಿ ಒಂದು ವರ್ಷಕ್ಕೆ ಸರ್ಕಾರದ ಬೊಕ್ಕಸಕ್ಕೆ 7.31 ಕೋಟಿ ರುಪಾಯಿ ಹೊರೆಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.

English summary

5 Thousand Rupee Financial Aid To Students To Purchase Smartphone By Govt

Tripura government announced 5,000 Rupees aid to degree students to purchase smartphone.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X