For Quick Alerts
ALLOW NOTIFICATIONS  
For Daily Alerts

ಅಲಿಬಾಬ ಶಾಪಿಂಗ್ ಹಬ್ಬದಲ್ಲಿ 4.20 ಲಕ್ಷ ಕೋಟಿ ರು. ಮೀರಿದ ಆರ್ಡರ್

By ಅನಿಲ್ ಆಚಾರ್
|

ಚೀನೀ ಇ ಕಾಮರ್ಸ್ ದೈತ್ಯ ಅಲಿಬಾಬ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಹೇಳಿರುವ ಪ್ರಕಾರ, ಒಂದು ದಿನದ ಮೆಗಾ ಶಾಪಿಂಗ್ ಹಬ್ಬದಲ್ಲಿ ಬುಧವಾರ ಬೆಳಗ್ಗೆ ಹೊತ್ತಿಗೆ 5600 ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು ಆರ್ಡರ್ ಮಾಡಲಾಗಿದೆ. ಅಂದರೆ ಭಾರತದ ರುಪಾಯಿ ಲೆಕ್ಕದಲ್ಲಿ 4.20 ಲಕ್ಷ ಕೋಟಿಯ ಸಮೀಪ ಆಗುತ್ತದೆ.

ಈ ದೊಡ್ಡ ರಿಯಾಯಿತಿ ಮಾರಾಟದ ಲಾಭ ಪಡೆದುಕೊಳ್ಳಿ ಎಂದು ಗ್ರಾಹಕರಿಗೆ ಕೇಳಿಕೊಂಡಿತ್ತು ಅಲಿಬಾಬ. ಈ ವರ್ಷದ ಶಾಪಿಂಗ್ ಹಬ್ಬ ಬಂದ ಸನ್ನಿವೇಶವೂ ವಿಭಿನ್ನವಾಗಿದೆ. ಏಕೆಂದರೆ, ಅಲಿಬಾಬದ ಶೇಕಡಾ ಮೂವತ್ತಕ್ಕೂ ಹೆಚ್ಚಿನ ಪಾಲು ಹೊಂದಿರುವ ಆಂಟ್ ಗ್ರೂಪ್ ನ 37 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಲಿಸ್ಟಿಂಗ್ ಅನ್ನು ಚೀನಾ ಅಮಾನತು ಮಾಡಿದ ಮೇಲೆ ಅಲಿಬಾಬ ಷೇರಿನ ಮಾರುಕಟ್ಟೆ ಮೌಲ್ಯ 7,600 ಕೋಟಿ ಅಮೆರಿಕನ್ ಡಾಲರ್ ಕಡಿಮೆ ಆಗಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆ ದಾಖಲಿಸಿದ ಚೀನಾಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆ ದಾಖಲಿಸಿದ ಚೀನಾ

ಇನ್ನು ಈಗಿನ ಅಲಿಬಾಬ ಮಾರಾಟ ಪ್ರಮಾಣವನ್ನು ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಚೀನಾದಲ್ಲಿನ ಆರ್ಥಿಕ ಚೇತರಿಕೆ ಅಂತಲೇ ನೋಡಲಾಗುತ್ತಿದೆ. ಅಲಿಬಾಬದಿಂದ ಈ ವರ್ಷದ ಆರಂಭದಲ್ಲೇ ಎರಡು ವಾರ್ಷಿಕ ರಿಯಾಯಿತಿ ಮಾರಾಟದ ಘೋಷಣೆ ಮಾಡಲಾಗಿತ್ತು. ನವೆಂಬರ್ ಒಂದರಿಂದ ಮೂರು ಹಾಗೂ ನವೆಂಬರ್ ಹನ್ನೊಂದು.

ಅಲಿಬಾಬ ಶಾಪಿಂಗ್ ಹಬ್ಬದಲ್ಲಿ 4.20 ಲಕ್ಷ ಕೋಟಿ ರು. ಮೀರಿದ ಆರ್ಡರ್

ಕಂಪೆನಿಯಿಂದ ಹನ್ನೊಂದು ದಿನಗಳ ಅವಧಿಗೆ ಗ್ರಾಸ್ ಮರ್ಚಂಡೈಸ್ ವಾಲ್ಯೂಮ್ (ಜಿಎವಿ) ಲೆಕ್ಕ ಹಾಕಲಾಗುವುದು. ಅದು ಸಾಮಾನ್ಯವಾಗಿ ಇಪ್ಪತ್ನಾಲ್ಕು ಗಂಟೆಗಳ ಅವಧಿಗೆ ಲೆಕ್ಕ ಹಾಕಲಾಗುತ್ತದೆ. ಮಧ್ಯರಾತ್ರಿ 12:30ಕ್ಕೆ ಸ್ಥಳೀಯ ಕಾಲಮಾನ (1630 GMT) ನವೆಂಬರ್ 11, ಈ ಅಭಿಯಾನದಲ್ಲಿ GMV 372.3 ಬಿಲಿಯನ್ ಯುವಾನ್ ($56.3 ಬಿಲಿಯನ್) ದಾಟಿದ್ದು, ಆರ್ಡರ್ ದರವು ಸೆಕೆಂಡ್ ಗೆ ದಾಖಲೆಯ 583,000 ಇತ್ತು ಎಂದು ಅಲಿಬಾಬ ಹೇಳಿದೆ.

ಅಲಿಬಾಬ ಮೊದಲ ಬಾರಿಗೆ ಶಾಪಿಂಗ್ ಹಬ್ಬ ಆರಂಭಿಸಿದ್ದು 2009ರಲ್ಲಿ. ಅದು ವಿಶ್ವದ ಅತಿ ದೊಡ್ಡ ಆನ್ ಲೈನ್ ಮಾರಾಟ ಹಬ್ಬವಾಯಿತು. ಯುಎಸ್ ನಲ್ಲಿ ಸೈಬರ್ ಸೋಮವಾರದಂದು ಕಳೆದ ವರ್ಷ ಆ ದಿನ 38.4 ಬಿಲಿಯನ್ ಅಮೆರಿಕನ್ ಡಾಲರ್ ಜಿಎಂವಿ ಆಗಿತ್ತು.

English summary

56 Billion USD Worth Of Order by Customer In Single Day Shopping Festival Of Alibaba

During one day shopping festival of Chinese e commerce company Alibaba, customers ordered 56 billion USD worth products.
Story first published: Wednesday, November 11, 2020, 12:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X