For Quick Alerts
ALLOW NOTIFICATIONS  
For Daily Alerts

ಚೀನಾದ 59 ಮೊಬೈಲ್ ಅಪ್ಲಿಕೇಷನ್ ನಿಷೇಧಿಸಿದ ಮೇಲೆ ಏನಾಯ್ತು?

|

ಭಾರತ- ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಏರ್ಪಟ್ಟ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸೋಮವಾರ ಮಹತ್ವದ ಘೋಷಣೆ ಮಾಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 69A ಅಡಿಯಲ್ಲಿ 59 ಅಪ್ಲಿಕೇಷನ್ ಗಳನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿಷೇಧಿಸಿದೆ. ಭಾರತದ ಸಾರ್ವಭೌಮತೆ ಹಾಗೂ ವಿಶ್ವಾಸಾರ್ಹತೆಗೆ ವಿರುದ್ಧವಾಗಿ ಕೆಲಸ ಮಾಡುತ್ತಿವೆ ಎಂಬ ಕಾರಣ ನೀಡಲಾಗಿದೆ.

ಭಾರತದ ರಕ್ಷಣೆ, ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯನ್ನು ಗಮನದಲ್ಲಿ ಇಟ್ಟುಕೊಂಡು ಟಿಕ್ ಟಾಕ್, ಮೊಬೈಲ್ ಲೆಜೆಂಡ್ಸ್, ಯು.ಸಿ. ಬ್ರೌಸರ್ ಹಾಗೂ ಶೇರ್ ಇಟ್ ಸೇರಿ 59 ಅಪ್ಲಿಕೇಷನ್ ಗಳನ್ನು ನಿಷೇಧಿಸಲಾಗಿದೆ. 130 ಕೋಟಿ ಭಾರತೀಯರ ದತ್ತಾಂಶ ಭದ್ರತೆ (ಡೇಟಾ ಸೆಕ್ಯೂರಿಟಿ) ಮತ್ತು ಖಾಸಗಿತನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ತೀರ್ಮಾನ ಮಾಡಲಾಗಿದೆ.

 

ಚೀನಾದ 'ಟಿಕ್‌ಟ್ಯಾಕ್‌'ಗೆ ಟಕ್ಕರ್ ಕೊಡುತ್ತಿದೆ ಸ್ವದೇಶಿ 'ಮಿಟ್ರಾನ್' ಆ್ಯಪ್

ಭಾರತದ ಹೊರಗಿನ ಸ್ಥಳದಲ್ಲಿ ಕಾನೂನುಬಾಹಿರ ರೀತಿಯಲ್ಲಿ ಸರ್ವರ್ ಇಟ್ಟುಕೊಳ್ಳಲಾಗಿದೆ. ಭಾರತೀಯರ ಮೊಬೈಲ್ ಫೋನ್ ಗಳಿಂದ ಮಾಹಿತಿಯೂ ರವಾನೆ ಆಗುತ್ತಿದೆ ಎಂದು ಹಲವು ದೂರುಗಳು ಬಂದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರವು ತಿಳಿಸಿದೆ.

ಚೀನಾದ  59 ಮೊಬೈಲ್ ಅಪ್ಲಿಕೇಷನ್ ನಿಷೇಧಿಸಿದ ಮೇಲೆ ಏನಾಯ್ತು?

ನಿಷೇಧಿಸಲಾದ ಚೀನಾದ ಮೊಬೈಲ್ ಅಪ್ಲಿಕೇಷನ್ ಗಳ ಪಟ್ಟಿ ಹೀಗಿವೆ:

1.TikTok

2.Shareit

3.Kwai

4.UC Browser

5.Baidu map

6.Shein

7.Clash of Kings

8.DU battery saver

9.Helo

10. Likee

11. YouCam makeup

12. Mi Community

13. CM Browers

14. Virus Cleaner

15. APUS Browser

16. ROMWE

17. Club Factory

18. Newsdog

19. Beutry Plus

20. WeChat

21. UC News

22. QQ Mail

23. Weibo

24. Xender

25. QQ Music

26. QQ Newsfeed

27. Bigo Live

28. SelfieCity

29. Mail Master

30. Parallel Space

31. Mi Video Call - Xiaomi

32. WeSync

33. ES File Explorer

34. Viva Video - QU Video Inc

35. Meitu

36. Vigo Video

37. New Video Status

38. DU Recorder

39. Vault- Hide

40. Cache Cleaner DU App studio

41. DU Cleaner

42. DU Browser

43. Hago Play With New Friends

44. Cam Scanner

45. Clean Master - Cheetah Mobile

46. Wonder Camera

47. Photo Wonder

48. QQ Player

49. We Meet

50. Sweet Selfie

51. Baidu Translate

52. Vmate

53. QQ International

54. QQ Security Center

55. QQ Launcher

56. U Video

57. V fly Status Video

58. Mobile Legends

59. DU Privacy

ಭಾರತ ಸರ್ಕಾರದ ಕ್ರಮಕ್ಕೆ ಪ್ರತಿಕ್ರಿಯಿಸಿ, ಹೇಳಿಕೆ ನೀಡಿದೆ ಟಿಕ್ ಟಾಕ್. ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ, ಸ್ಪಷ್ಟನೆ ದಾಖಲಿಸಲು ಅವಕಾಶ ನೀಡಲಾಗಿದೆ. ಭಾರತದ ಕಾನೂನಿನ ಅಡಿಯಲ್ಲಿ ಇರುವಂತೆಯೇ ಎಲ್ಲ ಡೇಟಾ ಖಾಸಗಿತನ ಮತ್ತು ಭದ್ರತೆ ಕಾಯ್ದುಕೊಳ್ಳಲು ಬದ್ಧವಾಗಿದ್ದೇವೆ. ಭಾರತದ ಬಳಕೆದಾರರ ಯಾವುದೇ ಡೇಟಾವನ್ನು ಚಿನಾದ ಸರ್ಕಾರವೂ ಸೇರಿದಂತೆ ಯಾವುದೇ ವಿದೇಶಿ ಸರ್ಕಾರದ ಜತೆ ಹಂಚಿಕೊಂಡಿಲ್ಲ. ಭವಿಷ್ಯದಲ್ಲೂ ಹಾಗೆ ಮಾಡಲ್ಲ ಎಂದು ತಿಳಿಸಿದೆ.

 

ಈ ಮಧ್ಯೆ ಚೀನಾ ಕಡೆಯಿಂದಲೂ ಪ್ರತಿಕ್ರಿಯೆ ಬಂದಿದೆ. ಚೀನಾದ ಮೊಬೈಲ್ ಅಪ್ಲಿಕೇಷನ್ ಗಳಾದ ಬೈಟ್ ಡ್ಯಾನ್ಸ್ ನ ಟಿಕ್ ಟಾಕ್, ಟೆನ್ಸೆಂಟ್ ನ WeChat ಸೇರಿದಂತೆ ಇತರ ಅಪ್ಲಿಕೇಷನ್ ಗಳನ್ನು ಭಾರತ ನಿಷೇಧಿಸಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಸನ್ನಿವೇಶವನ್ನು ಪರಾಮರ್ಶೆ ಮಾಡುವುದಾಗಿ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

English summary

59 Chinese Mobile Apps Ban By Indian Government; what will be the impact?

BJP led central government ban 59 Chinese mobile application on Monday. Here is the after effect.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more