For Quick Alerts
ALLOW NOTIFICATIONS  
For Daily Alerts

ವಿದೇಶದಿಂದ ಭಾರತಕ್ಕೆ ಬಂದವರಲ್ಲಿ ಕೆಲಸ ಕಳೆದುಕೊಂಡವರು ಎಷ್ಟು ಗೊತ್ತಾ?

|

ನವದೆಹಲಿ, ಮೇ 13: ಕೊರೊನಾವೈರಸ್ ಮಹಾಮಾರಿ ಹಿಂದೆಂದೂ ಕಂಡೂ ಕೇಳರಿಯದಂತೆ ವಿನಾಶವನ್ನು ಸೃಷ್ಠಿಸಿದೆ. ಜಗತ್ತಿನ ಎಲ್ಲ ದೇಶಗಳಿಗೂ ಇದರ ಬಿಸಿ ತಟ್ಟಿದೆ. ತಮ್ಮ ತವರನ್ನು ತೊರೆದು ಬೇರೆ ದೇಶಗಳಿಗೆ ಉದ್ಯೋಗ ಅರಸಿ ಹೋಗಿದ್ದವರು ಈಗ ಉದ್ಯೋಗ ಕಳೆದುಕೊಂಡು ವಾಪಸ್ ತಮ್ಮ ತಮ್ಮ ತವರೂರುಗಳಿಗೆ ಮರಳುತ್ತಿದ್ದಾರೆ.

 

ನಗರ ಪ್ರದೇಶಗಳಲ್ಲಿ 10 ರಲ್ಲಿ 8 ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ: ಎಪಿಯು ಸಮೀಕ್ಷೆನಗರ ಪ್ರದೇಶಗಳಲ್ಲಿ 10 ರಲ್ಲಿ 8 ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ: ಎಪಿಯು ಸಮೀಕ್ಷೆ

ಹೀಗೆ ತವರಿಗೆ ಮರಳುತ್ತಿರುವವರು ತಮ್ಮ ಉದ್ಯೋಗಳನ್ನು ಕಳೆದುಕೊಂಡು ಮತ್ತೊಂದು ರೀತಿಯ ಸಂಕಷ್ಟಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ನಿಂದ ವಿದೇಶದಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಕರೆ ತರಲು ಭಾರತ ಸರ್ಕಾರ ವಂದೇ ಭಾರತ್ ಮಿಷನ್ ನಡೆಸಿದೆ.

ಹೀಗೆ ಇಲ್ಲಿವರೆಗೆ ಭಾರತಕ್ಕೆ ಬಂದವರಲ್ಲಿ ಶೇ 59 ರಷ್ಟು ಭಾರತೀಯರು ತಮ್ಮ ಮೂಲ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವೆಬ್‌ಸೈಟ್ ವರದಿ ಮಾಡಿದೆ.

SWADES ಮೂಲಕ ಮಾಹಿತಿ ಕಲೆ

SWADES ಮೂಲಕ ಮಾಹಿತಿ ಕಲೆ

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು (ಎಂಎಸ್‌ಡಿಇ) ಇತ್ತೀಚೆಗೆ ಪ್ರಾರಂಭಿಸಿದ 'ಸ್ವದೇಶ' (SWADES) ಕಾರ್ಯಕ್ರಮದಿಂದ ವಿದೇಶದಿಂದ ಬಂದ ಶೇ 59 ರಷ್ಟು ಜನ ನಿರುದ್ಯೋಗಿಳಾಗಿದ್ದಾರೆ ಎಂಬ ಮಾಹಿತಿ ಬಯಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಸಹಯೋಗದೊಂದಿಗೆ ಎಂಎಸ್‌ಡಿಇ ಮಾಹಿತಿ ಕಲೆ ಹಾಕಿದೆ.

ಕೌಶಲ್ಯ ಫಾರ್ಮ್ ಭರ್ತಿ

ಕೌಶಲ್ಯ ಫಾರ್ಮ್ ಭರ್ತಿ

ವಿದೇಶಗಳಿಂದ ಜೂನ್ ಆರಂಭದಿಂದಲೂ, ಹಿಂದಿರುಗಿದ ವಲಸೆ ಉದ್ಯೋಗಿಗಳಿಗೆ ತಮ್ಮ ಕೆಲಸದ ವಲಯ, ಉದ್ಯೋಗದ ಶೀರ್ಷಿಕೆ, ಉದ್ಯೋಗ ಮತ್ತು ವರ್ಷಗಳ ಅನುಭವದ ಬಗ್ಗೆ ವಿವರಗಳನ್ನು ದಾಖಲಿಸಲು ವಿಮಾನ ನಿಲ್ದಾಣಗಳಲ್ಲಿನ SWADES (ಉದ್ಯೋಗದ ಬೆಂಬಲಕ್ಕಾಗಿ ನುರಿತ ಕೆಲಸಗಾರರ ಆಗಮನ ಡೇಟಾಬೇಸ್) ಕೌಶಲ್ಯ ಫಾರ್ಮ್ ಅನ್ನು ಭರ್ತಿ ಮಾಡಲು ಕೇಳಲಾಗುತ್ತಿದೆ.

ಶೇ 41 ಜನ ಮಾತ್ರ ಇನ್ನೂ ಕೆಲಸದಲ್ಲಿ
 

ಶೇ 41 ಜನ ಮಾತ್ರ ಇನ್ನೂ ಕೆಲಸದಲ್ಲಿ

ಜೂನ್ 7 ರ ಹೊತ್ತಿಗೆ, SWADES ಕೌಶಲ್ಯ ಫಾರ್ಮ್ ಅನ್ನು ಭರ್ತಿ ಮಾಡಿದದವರಲ್ಲಿ 15,634 ಜನ ಇದ್ದಾರೆ. ಇದರಲ್ಲಿ ಶೇಕಡಾ 59 ಅಥವಾ 9,222 ಜನರು ತಾವು ನಿರುದ್ಯೋಗಿಗಳಾಗಿದ್ದಾರೆಂದು ವರದಿ ಮಾಡಿದರೆ, ಶೇಕಡಾ 41 ಅಥವಾ 6,412 ಜನರು ಇನ್ನೂ ತಮ್ಮ ಉದ್ಯೋಗವನ್ನು ಹೊಂದಿದ್ದಾರೆಂದು ತಿಳಿಸಿದ್ದಾರೆ.

47 ರಷ್ಟು ಉದ್ಯೋಗಿಗಳು ಹತ್ತು ವರ್ಷ ಕೆಲಸದ ಅನುಭವ

47 ರಷ್ಟು ಉದ್ಯೋಗಿಗಳು ಹತ್ತು ವರ್ಷ ಕೆಲಸದ ಅನುಭವ

ಭಾರತಕ್ಕೆ ಮರಳಿದ ಶೇಕಡಾ 47 ರಷ್ಟು ಉದ್ಯೋಗಿಗಳು ಹತ್ತು ವರ್ಷಕ್ಕೂ ಮೇಲ್ಪಟ್ಟು ಕೆಲಸದ ಅನುಭವ ಹೊಂದಿದ್ದಾರೆ. ಉಳಿದವರಲ್ಲಿ, 27 ಪ್ರತಿಶತದಷ್ಟು ಜನರು 5-10 ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದರೆ, 18 ಪ್ರತಿಶತದಷ್ಟು ಜನರು 2-5 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಮತ್ತು 8 ಪ್ರತಿಶತದವರು 2 ವರ್ಷಗಳಿಗಿಂತ ಕಡಿಮೆ ಕೆಲಸದ ಅನುಭವವನ್ನು ಹೊಂದಿದ್ದಾರೆ ಎಂಬುದು ಗೊತ್ತಾಗಿದೆ.

7,341 ವ್ಯಕ್ತಿಗಳು ಪದವೀಧರರು

7,341 ವ್ಯಕ್ತಿಗಳು ಪದವೀಧರರು

ಲಾಕ್‌ಡೌನ್ ನಿಂದ ಭಾರತಕ್ಕೆ ಬಂದವರಲ್ಲಿ 7,341 ವ್ಯಕ್ತಿಗಳು ಪದವೀಧರರಾಗಿದ್ದು, ನಂತರದ ಸ್ಥಾನದಲ್ಲಿ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು (2,937 ವ್ಯಕ್ತಿಗಳು), ಸ್ನಾತಕೋತ್ತರ ಪದವೀಧರರು (2,638 ವ್ಯಕ್ತಿಗಳು) ಮತ್ತು 10 ನೇ ಉತ್ತೀರ್ಣರಾಗಿದ್ದಾರೆ (2,111 ವ್ಯಕ್ತಿಗಳು). ಹೀಗೆ ಬಂದರವಲ್ಲಿ ಗಲ್ಪ ದೇಶಗಳಿಂದ ಬಂದವರ ಸಂಖ್ಯೆಯೇ ಜಾಸ್ತಿ ಇದೆ ಎಂದು ವರದಿ ಹೇಳುತ್ತದೆ.

English summary

59% People Jobless Who Came To India In Vande Bharat Mission

59 Per Cent People Jobless Who Came To India In Vande Bharath Mission. India Today Reports Says Through SWADES Datas.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X