For Quick Alerts
ALLOW NOTIFICATIONS  
For Daily Alerts

7ನೇ ವೇತನ ಆಯೋಗ:ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ.4 ಡಿಎ

|

ಬೆಂಗಳೂರು, ಜನವರಿ 06: ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರರು 2023 ಹೋಳಿ ಹಬ್ಬದೊಳಗೆ ನಿರೀಕ್ಷಿತ ಹೆಚ್ಚಳ ಪಡೆಯಲಿದ್ದಾರೆ ಎಂದು ಹೊಸದಾಗಿ ಬಿಡುಗಡೆಯಾದ ಎಐಸಿಪಿಐ ಸೂಚ್ಯಂಕವು ಸಿಹಿ ಸುದ್ದಿ ನೀಡಿದೆ.

 

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ತುಟ್ಟಿಭತ್ಯೆ (ಡಿಎ)ಯನ್ನು ಶೇ.4 ರಷ್ಟು ಹೆಚ್ಚಿಸಲಿದೆ. ಹೆಚ್ಚಳವಾದಲ್ಲಿ ಇದೇ ವರ್ಷ ಮಾರ್ಚ್ 8ರಂದು ಹೋಳಿ ಹಬ್ಬದೊಳಗೆ ಅದು ಕೇಂದ್ರ ಸರ್ಕಾರಿ ನೌಕರರ ಕೈಗೆ ಸಿಗಲಿದೆ.

 

 ಈ ರಾಜ್ಯದಲ್ಲಿ ಶೇ 12ರಷ್ಟು ಡಿಎ ಹೆಚ್ಚಳ, ಇಲ್ಲಿದೆ ವಿವರ ಈ ರಾಜ್ಯದಲ್ಲಿ ಶೇ 12ರಷ್ಟು ಡಿಎ ಹೆಚ್ಚಳ, ಇಲ್ಲಿದೆ ವಿವರ

ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಿಸುತ್ತಿದೆ. ಈ ಡಿಎ ಹೆಚ್ಚಳವನ್ನು ಜನವರಿ ಮತ್ತು ಜುಲೈ ತಿಂಗಳುಗಳಲ್ಲಿ ಘೋಷಿಸಲಾಗುತ್ತದೆ. ಇದೀಗ ಹೊಸ ವರ್ಷ ಆರಂಭವಾಗಿದ್ದು, ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ.

7ನೇ ವೇತನ ಆಯೋಗ:ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ.4 ಡಿಎ

ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಶೇ.4 ಪ್ರತಿಶತ ಅಥವಾ ಶೇ. 3ರಷ್ಟನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಎಐಸಿಪಿಐ ಸೂಚ್ಯಂಕವನ್ನು 0.4 ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ.

ಕೇಂದ್ರ ಸರ್ಕಾರವು 2022ರ ಜುಲೈನಲ್ಲಿ ಶೇ. 4ರಷ್ಟು ಡಿಎಯನ್ನು ಹೆಚ್ಚಿಸಲಿದೆ. ಆಗ ತುಟ್ಟಿಭತ್ಯೆ ಪ್ರಮಾಣ ಶೇ.42 ಆಗಲಿದೆ.

ಡಿಎ ಮತ್ತು ಡಿಆರ್ ಹೆಚ್ಚಳದ ನಂತರ 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಝೀ ನ್ಯೂಸ್ ಹಿಂದಿ ವೆಬ್‌ಸೈಟ್ ವರದಿ ಮಾಡಿದೆ. ಡಿಎಯನ್ನು 42 ಪ್ರತಿಶತಕ್ಕೆ ಹೆಚ್ಚಿಸಿದರೆ, ಅದು 3ನೇ ಹಂತದ ಉದ್ಯೋಗಿಯ ಮಾಸಿಕ ವೇತನದ ಮೇಲೆ ಯಾವ ರೀತಿ ಪರಿಣಾಮ ಭೀರುತ್ತದೆ ಎಂಬುದು ಸಮಗ್ರ ಮಾಹಿತಿ ಹೀಗಿದೆ.

ವೇತನ-ಡಿಎ ವಿವಿರ ಹೀಗಿದೆ

ಉದ್ಯೋಗಿಯ ಮೂಲ ವೇತನ - 56,900 ರೂ.

ಹೊಸ ತುಟ್ಟಿಭತ್ಯೆ (ಶೇ.42) - ಮಾಸಿಕ 23898 ರೂ.

ಇಲ್ಲಿಯವರೆಗೆ ತುಟ್ಟಿಭತ್ಯೆ (ಶೇ.38) - ಮಾಸಿಕ 21622 ರೂ.

ಎಷ್ಟು ತುಟ್ಟಿ ಭತ್ಯೆ ಹೆಚ್ಚಿದೆ - 23898-21622 = ತಿಂಗಳಿಗೆ 2,276ರೂ.

ವಾರ್ಷಿಕ ವೇತನದಲ್ಲಿ ಹೆಚ್ಚಳ - 2276 X 12 = ವಾರ್ಷಿಕ 27,312ರೂ.

English summary

7th Pay Commission: Central Government Employees Will Be Take 4% DA Before 2023 Holi

7 th Pay Commission: Central Government employees will be take 4% dearness allowance (DA) before 2023 holi festival.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X