For Quick Alerts
ALLOW NOTIFICATIONS  
For Daily Alerts

7ನೇ ವೇತನ ಆಯೋಗ:ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ(HRA) ಪರಿಷ್ಕರಣೆ, ನಿಯಮ ತಿಳಿಯಿರಿ

|

ಬೆಂಗಳೂರು, ಜನವರಿ 15: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಸಲಿರುವ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಏನೆಂದರೆ ಹಣಕಾಸು ಸಚಿವಾಲಯದ ವೆಚ್ಚಗಳ ಇಲಾಖೆಯು 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA) ನಿಯಮಗಳನ್ನು ಪರಿಷ್ಕರಿಸಿದೆ. ಜೊತೆಗೆ ಪರಿಷ್ಕರಿಸಿದ ನಿಯಮ ಯಾರಿಗೆ ಅನ್ವಯವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಮನೆ ಬಾಡಿಗೆ ಭತ್ಯೆ ನಿಯಮಾವಳಿಗಳ ಪ್ರಕಾರ, ಉದ್ಯೋಗಿಯ ವಾಸಸ್ಥಳ ಮತ್ತು ಕರ್ತವ್ಯದ ಸ್ಥಳ ಆಧಾರದಲ್ಲಿ ಆತನಿಗೆ ಮನೆ ಬಾಡಿಗೆ ಭತ್ಯೆ ಅನುಮತಿ ನೀಡಲಾಗಿದೆ. ಕೆಲವು ಸಂದರ್ಭಗಳಲ್ಲಿ ನೌಕರರು ಎಚ್‌ಆರ್‌ಗೆ ಅರ್ಹರಾಗಿರುವುದಿಲ್ಲ ಎಂದು ಸಹ ಹೇಳಿದೆ.

ಯಾವ ಸರ್ಕಾರಿ ನೌಕರನಿಗೆ ಅನ್ವಯ ಆಗಲ್ಲ?

ಅಪಾರ್ಟ್‌ಮೆಂಟ್‌ಗಳಲ್ಲಿ ತಮ್ಮ ಇನ್ನೊಬ್ಬ ಸರ್ಕಾರಿ ಉದ್ಯೋಗಿಯೊಂದಿಗೆ ವಾಸಿಸುತ್ತಿದ್ದಾರೋ ಅಂತಹ ನೌಕರನಿಗೆ ಈ ಎಚ್‌ಆರ್‌ಎ ಪರಿಷ್ಕರಣೆ ನಿಯಮ ಅನ್ವಯ ಆಗುವುದಿಲ್ಲ. ಯಾವ ನೌಕರರು ಕೇಂದ್ರ, ರಾಜ್ಯ, ಸ್ವಾಯತ್ತ ಸಾರ್ವಜನಿಕ ಸಂಸ್ಥೆ ಅಥವಾ ಪುರಸಭೆ, ಪೋರ್ಟ್ ಟ್ರಸ್ಟ್, ರಾಷ್ಟ್ರೀಕೃತ ಬ್ಯಾಂಕ್‌ಗಳು, ಭಾರತೀಯ ಜೀವ ವಿಮಾ ನಿಗಮ, ಇತ್ಯಾದಿಗಳಂತಹ ಅರೆ-ಸರ್ಕಾರಿ ಸಂಸ್ಥೆಯಿಂದ ಒದಗಿಸಲಾದ ವಸತಿಗಳಲ್ಲಿ ವಾಸಿಸುತ್ತಿದ್ದಾರೋ ಅಂತವರಿಗೆ ಇದು ಅನ್ವಯವಾಗುತ್ತದೆ.

7ನೇ ವೇತನ ಆಯೋಗ:ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ(HRA) ಪರಿಷ್ಕರಣೆ

ಸರ್ಕಾರಿ ನೌಕರನ ಹೊರತಾಗಿ ಸರ್ಕಾರದ ಒಡೆತನದ ಮನೆಯಲ್ಲಿ ವಾಸಿಸುವ ಸರ್ಕಾರಿ ಉದ್ಯೋಗಿಗಳು ಇನ್ನಿತರ ಸರ್ಕಾರಿ ನೌಕರರಿಗೆ ಮಂಜೂರು ಮಾಡಿದ ವಸತಿಗಳನ್ನು ಹಂಚಿ ಕೊಂಡರೂ ಸಹ ಅಲ್ಲಿರವವರು ಷರತ್ತಿಗೆ ಒಳಪಟ್ಟು ಎಚ್‌ಆರ್‌ಎಗೆ ಅರ್ಹರಾಗಿರುತ್ತಾರೆ.

ಮನೆ ಬಾಡಿಗೆ ಭತ್ಯ ವಿಂಗಡನೆ ಹೇಗಿದೆ

ಮನೆ ಬಾಡಿಗೆ ಭತ್ಯ ಬಾಡಿಗೆ ಮನೆಗಳಲ್ಲಿ ವಾಸಿಸುವ ಸಂಬಳದ ಜನರಿಗೆ ವಸತಿ ವೆಚ್ಚ ಸರಿದೂಗಿಸಲು/ ನಿರ್ವಹಣೆಗೆ ಈ ಎಚ್‌ಆರ್‌ಎ ಪಡೆಯುತ್ತಾರೆ. ಇದನ್ನು ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ.

7ನೇ ವೇತನ ಆಯೋಗ:ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ(HRA) ಪರಿಷ್ಕರಣೆ

ಕನಿಷ್ಠ 50 ಜನಸಂಖ್ಯೆಯ ಕೊರತೆಯಿರುವ ಸ್ಥಳಗಳಿಗೆ, X ಎಂದು ಪರಿಗಣಿಸಿದರೆ, 7ನೇ ವೇತನ ಆಯೋಗದ ಶಿಫಾರಸಿನಂತೆ ಶೇ. 24 ದರದಲ್ಲಿ ಎಚ್‌ಆರ್‌ಎ ನೀಡಲಾಗುತ್ತದೆ. 5,000 ಮತ್ತು 50,000 ನಡುವಿನ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳನ್ನು Y ಎಂದು ಗುರುತಿಸಲಾಗಿದ್ದು, ಇವರಿಗೆ ಶೇ.6ರಷ್ಟು ದರದಲ್ಲಿ ಹಾಗೂ ಐದಕ್ಕಿಂತ ಕ್ಕಿಂತ ಕಡಿಮೆ ಇರುವ ಜನಸಂಖ್ಯೆಯನ್ನು Z ಎಂದು ವಿಂಗಡಿಸಲಾಗಿತ್ತು, ಅಂತವರಿಗೆ ಶೇ. 8 ರಷ್ಟು ಮನೆ ಬಾಡಿಗೆ ಭತ್ಯೆ ಒದಗಿಸಲಾಗುವುದು ಎಂದು ತಿಳಿಸಿದೆ.

English summary

7th Pay Commission: Government Employees House Rent Allowance (HRA) Has Been Revised.

7th Pay Commission: Government Employees' House Rent Allowance (HRA) has been revised.
Story first published: Sunday, January 15, 2023, 17:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X