For Quick Alerts
ALLOW NOTIFICATIONS  
For Daily Alerts

ದೇಶದ 8 ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ಏಪ್ರಿಲ್‌ನಲ್ಲಿ 38.1 % ರಷ್ಟು ಕುಸಿತ

|

ಏಪ್ರಿಲ್‌ನಲ್ಲಿ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಸೂಚ್ಯಂಕದ ಬೆಳವಣಿಗೆ ದರ ಏಪ್ರಿಲ್ ನಲ್ಲಿ 38.1 ಪರ್ಸೆಂಟ್‌ರಷ್ಟು ಕುಸಿದಿದೆ ಎಂದು ಶುಕ್ರವಾರ ಬಿಡುಗಡೆ ಮಾಡಲಾದ ಸರ್ಕಾರದ ಅಂಕಿ- ಅಂಶಗಳು ತಿಳಿಸಿವೆ.

 

ಕೊವಿಡ್‍-19 ಸಾಂಕ್ರಾಮಿಕ ರೋಗದಿಂದಾಗಿ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಕಲ್ಲಿದ್ದಲು, ಸಿಮೆಂಟ್, ಉಕ್ಕು, ನೈಸರ್ಗಿಕ ಅನಿಲ, ಸಂಸ್ಕರಣಾಗಾರ, ಕಚ್ಚಾ ತೈಲ ಸೇರಿದಂತೆ ವಿವಿಧ ಕೈಗಾರಿಕಾ ವಲಯಗಳು ಉತ್ಪಾದನೆಯಲ್ಲಿ ಸಾಕಷ್ಟು ಕುಸಿತವನ್ನು ಅನುಭವಿಸಿವೆ ಎಂದು ಕೈಗಾರಿಕಾ ಮತ್ತು ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆಯ ಆರ್ಥಿಕ ಸಲಹೆಗಾರರ ​​ಕಚೇರಿ ತಿಳಿಸಿದೆ.

 

ಜನವರಿ 2020ರಲ್ಲಿ ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕದ ಅಂತಿಮ ಬೆಳವಣಿಗೆ ದರವು 2.2 ಪರ್ಸೆಂಟ್‌ರಲ್ಲಿ ಬದಲಾಗದೆ ಉಳಿದಿದೆ. ಒಟ್ಟು ವಸ್ತುಗಳ ಪ್ರಮಾಣದಲ್ಲಿ ಈ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಪಾಲು 40.27 ಪರ್ಸೆಂಟ್‌ರಷ್ಟಿದೆ.

8 ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ಏಪ್ರಿಲ್‌ನಲ್ಲಿ 38.1 % ಕುಸಿತ

ಕಲ್ಲಿದ್ದಲು ಉತ್ಪಾದನೆಯು 2020 ರ ಏಪ್ರಿಲ್‌ನಲ್ಲಿ 15.5 ಪರ್ಸೆಂಟ್‌ರಷ್ಟು ಇಳಿಕೆಯಾಗಿದೆ. ಅದರ ಸಂಚಿತ ಸೂಚ್ಯಂಕವು 2019-20ರ ಏಪ್ರಿಲ್ ನಿಂದ ಮಾರ್ಚ್ ವರೆಗೆ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 0.4 ಪರ್ಸೆಂಟ್‌ರಷ್ಟು ಕುಸಿದಿದೆ.

ಕಚ್ಚಾ ತೈಲ ಉತ್ಪಾದನೆಯು ಏಪ್ರಿಲ್‌ನಲ್ಲಿ ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ 6.4 ಪರ್ಸೆಂಟ್‌ರಷ್ಟು ಕುಸಿದಿದೆ. ನೈಸರ್ಗಿಕ ಅನಿಲ ಉತ್ಪಾದನೆಯು ಏಪ್ರಿಲ್‌ನಲ್ಲಿ ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ 19.9 ಪರ್ಸೆಂಟ್‌ರಷ್ಟು ಹಾಗೂ ಪೆಟ್ರೋಲಿಯಂ ಶುದ್ದೀಕರಣ ಉತ್ಪಾದನೆ 24.2 ಪರ್ಸೆಂಟ್‌ರಷ್ಟು ಕುಸಿದಿದೆ.

ರಸಗೊಬ್ಬರಗಳ ಉತ್ಪಾದನೆ 4.5 ಪರ್ಸೆಂಟ್‌ರಷ್ಟು ಮತ್ತು ಉಕ್ಕು ಉತ್ಪಾದನೆ ಏಪ್ರಿಲ್‌ನಲ್ಲಿ 83.9 ಪರ್ಸೆಂಟ್‌ರಷ್ಟು ಇಳಿಕೆಯಾಗಿದೆ. ಸಿಮೆಂಟ್ ಉತ್ಪಾದನೆ ಏಪ್ರಿಲ್‌ನಲ್ಲಿ 86.0 ಪರ್ಸೆಂಟ್‌ರಷ್ಟು ಕುಸಿದಿದೆ. ಇನ್ನು ವಿದ್ಯುತ್ ಉತ್ಪಾದನೆ 22.8 ಪರ್ಸೆಂಟ್‌ರಷ್ಟು ಇಳಿಕೆಯಾಗಿದೆ.

English summary

8 Core Industries Output Shrunk -38.12% In April 2020

Production output of eight core industries shrunk by -38.12 in April 2020%, down from -9.0% in the previous month, according to data released by the Office of the Economic Advisor
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X