For Quick Alerts
ALLOW NOTIFICATIONS  
For Daily Alerts

ಬಂದಿದೆ ಲಾಕ್ ಡೌನ್ ಪರೀಕ್ಷೆಯ ಸಮೀಕ್ಷೆ; ಇನ್ನೊಂದು ವಾರ ಹೀಗೇ ಆದರೆ...

|

ಕೊರೊನಾ ಕಾರಣಕ್ಕೆ ಲಾಕ್ ಡೌನ್ ಇನ್ನೊಂದು ವಾರಕ್ಕೆ ಮುಂದುವರಿದರೆ ಭಾರತದಲ್ಲಿ ಶೇಕಡಾ 33ರಷ್ಟು ಕುಟುಂಬಗಳ ಬಳಿ ಇರುವಂಥ ಸಂಪನ್ಮೂಲಗಳು ಬರಿದಾಗಿ, ಸಂಕಷ್ಟಕ್ಕೆ ಸಿಲುಕಲಿವೆ. ಆ ನಂತರ ಸಹಾಯ ಬೇಕಾಗುತ್ತದೆ ಎಂಬುದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಕುಟುಂಬಗಳ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಲಾಕ್ ಡೌನ್ ನಿಂದ ಕುಟುಂಬಗಳ ಆದಾಯದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅಧ್ಯಯನವೊಂದು ಮಂಗಳವಾರ ಬಿಡುಗಡೆ ಆಗಿದೆ. ಆ ಸಮೀಕ್ಷೆಯಲ್ಲಿ ತಿಳಿಸಿರುವ ಪ್ರಮುಖಾಂಶಗಳು ಹೀಗಿವೆ:

* ಶೇಕಡಾ 84ರಷ್ಟು ಕುಟುಂಬಗಳ ಆದಾಯದಲ್ಲಿ ಇಳಿಕೆ ಆಗಿದೆ.

* ದೇಶದಲ್ಲಿ ಇರುವ ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿ ಶೇಕಡಾ 25ಕ್ಕಿಂತ ಹೆಚ್ಚು ಮಂದಿ ನಿರುದ್ಯೋಗಿಗಳಾಗಿದ್ದಾರೆ.

* ದೇಶದಾದ್ಯಂತ ಮಾಡಿರುವ ಸಮೀಕ್ಷೆ ವರದಿ ಪ್ರಕಾರ, ಹೆಚ್ಚುವರಿ ನೆರವು ಸಿಗದಿದ್ದಲ್ಲಿ ಶೇಕಡಾ 34ರಷ್ಟು ಕುಟುಂಬಗಳಿಗೆ ಒಂದು ವಾರಕ್ಕಿಂತ ಹೆಚ್ಚು ಸಮಯ ದಿನ ದೂಡುವುದು ಕಷ್ಟವಾಗಲಿದೆ.

ಬಂದಿದೆ ಲಾಕ್ ಡೌನ್ ಪರೀಕ್ಷೆಯ ಸಮೀಕ್ಷೆ; ಇನ್ನೊಂದು ವಾರ ಹೀಗೇ ಆದರೆ...

* 65 ಪರ್ಸೆಂಟ್ ನಷ್ಟು ನಗರ ಪ್ರದೇಶದ ಕುಟುಂಬಗಳು ಹಾಗೂ 54 ಪರ್ಸೆಂಟ್ ನಷ್ಟು ಗ್ರಾಮೀಣ ಭಾಗದ ಕುಟುಂಬಗಳು ಒಂದು ವಾರಕ್ಕೆ ಆಗುವಷ್ಟು ದಿನಸಿ ಇದೆ ಎಂದು ಹೇಳಿವೆ.

* ದೆಹಲಿ, ಪಂಜಾಬ್ ಹಾಗೂ ಕರ್ನಾಟಕ ರಾಜ್ಯದ ಮೇಲೆ ಲಾಕ್ ಡೌನ್ ನಿಂದ ಹೆಚ್ಚಿನ ಪರಿಣಾಮ ಆಗಿಲ್ಲ.

ರಿಸರ್ವ್ ಬ್ಯಾಂಕ್ ನಿಂದ ನೋಟು ಮುದ್ರಣವೋ ಅಥವಾ ಐಎಂಎಫ್ ಸಾಲವೋ?ರಿಸರ್ವ್ ಬ್ಯಾಂಕ್ ನಿಂದ ನೋಟು ಮುದ್ರಣವೋ ಅಥವಾ ಐಎಂಎಫ್ ಸಾಲವೋ?

* ಬಿಹಾರ, ಹರ್ಯಾಣ, ಜಾರ್ಖಂಡ್ ರಾಜ್ಯಗಳ ಮೇಲೆ ಪರಿಣಾಮ ಬೀಕರವಾಗಿದೆ.

* ಆದಾಯದಲ್ಲಿನ ಇಳಿಕೆ, ಲಾಕ್ ಡೌನ್ ಗೂ ಮುಂಚಿನ ತಲಾದಾಯ, ಅನುದಾನದ ಪರಿಣಾಮಕಾರಿ ನೀಡಿಕೆ ಇವೆಲ್ಲವೂ ಲಾಕ್ ಡೌನ್ ಗಿಂತ ಹೆಚ್ಚು ಪರಿಣಾಮಕಾರಿ ಆಗಿದೆ.

ಈ ಅಧ್ಯಯನವನ್ನು ಮಾಡಿರುವವರು ಸಿಎಂಐಇಯ ಕೃಷ್ಣನ್ ಹಾಗೂ ಹೀಥರ್ ಶೋಫೀಲ್ಡ್.

English summary

84 Percent Families Income Decreased During Corona Lock Down

Here is an interesting survey revealed that, 84 percent of families income decreased during lock down.
Story first published: Wednesday, May 13, 2020, 12:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X