ತಮಿಳುನಾಡಿನ ಸಲೂನ್‌ಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯ!
ಚೆನ್ನೈ, ಮೇ 3: ಕೋವಿಡ್19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಸೋಂಕು ಪತ್ತೆ ಹಚ್ಚುವ ಸಂಬಂಧ ತಮಿಳುನಾಡಿನ ಸಲೂನ್, ಬ್ಯೂಟಿ ಪಾರ್ಲರ್‌ಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.
ಸಲೂನ್‌ಗಳು, ಬ್ಯೂಟಿ ಪಾರ್ಲರ್ಗಳಲ್ಲಿ ಕೆಲಸ ಮಾಡುವವರು, ಗ್ರಾಹಕರ ದೂರವಾಣಿ ಸಂಖ್ಯೆ, ವಿಳಾಸ, ಆಧಾರ್ ಸಂಖ್ಯೆಯನ್ನು ಇನ್ಮುಂದೆ ಕಡ್ಡಾಯವಾಗಿ ನಮೂದಿಸಿಕೊಳ್ಳಬೇಕಾಗುತ್ತದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ತಿಳಿಸಿದ್ದಾರೆ.
ಆಧಾರ್ ಕಾರ್ಡ್ ಸಂಖ್ಯೆಯನ್ನು ಸಲೂನ್‌ಗಳಲ್ಲಿ ನಮೂದಿಸುವುದರಿಂದ ಕೋವಿಡ್ ಸೋಂಕಿಗೆ ತುತ್ತಾಗುವವರನ್ನು ಹಾಗೂ ಅವರ ಸಂಪರ್ಕಕ್ಕೆ ಬರುವವರನ್ನು ಬಹುಬೇಗ ಪತ್ತೆ ಹಚ್ಚಬಹುದಾಗಿರುವ ಉದ್ದೇಶವನ್ನು ಇದು ಹೊಂದಿದೆ.

ಮೇ 24 ರಿಂದ ತಮಿಳುನಾಡಿನಲ್ಲಿ ಸಲೂನ್, ಬ್ಯೂಟಿ ಪಾರ್ಲರ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ತಮಿಳುನಾಡಿನಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಇದುವರೆಗೆ ಆ ರಾಜ್ಯದಲ್ಲಿ 23,495 ಜನರಿಗೆ ಕೊರೊನಾವೈರಸ್ ಸೊಂಕು ತಗುಲಿದೆ. ಸೋಂಕಿನಿಂದ 184 ಜನ ಮೃತಪಟ್ಟಿದ್ದಾರೆ.


Click it and Unblock the Notifications