For Quick Alerts
ALLOW NOTIFICATIONS  
For Daily Alerts

ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ Q1: ಆದಾಯ 225% ಏರಿಕೆ!

|

ಮುಂಬೈ, ಆಗಸ್ಟ್ 04: ಅದಾನಿ ಗ್ರೂಪ್‌ನ ಭಾಗವಾಗಿರುವ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಗುರುವಾರದಂದು ಮೊದಲ ತ್ರೈಮಾಸಿಕ ವರದಿ ಪ್ರಕಟಿಸಿದೆ. ಜೂನ್ 30, 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ತನ್ನ ಏಕೀಕೃತ ಆದಾಯವು ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಂತೆ ಶೇ 223ರಷ್ಟು ಏರಿಕೆಯಾಗಿ 41,066 ಕೋಟಿ ರು ಗೆ ಏರಿದೆ ಎಂದು ಹೇಳಿದೆ.

ವಿಮಾನ ನಿಲ್ದಾಣಗಳ ವ್ಯವಹಾರದ ಸಂಪೂರ್ಣ ಬಲವರ್ಧನೆ ಮತ್ತು IRM ವ್ಯವಹಾರದಲ್ಲಿನ ಸುಧಾರಣೆಯಿಂದಾಗಿ ಕಂಪನಿಯ EBIDTA ಶೇಕಡಾ 107 ರಷ್ಟು ಏರಿಕೆಯಾಗಿ 1,965 ಕೋಟಿ ರು ಗೆ ಜಿಗಿದಿದೆ.

ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಮೊದಲ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಹೆಚ್ಚಿನ ಆದಾಯದ ಹಿನ್ನೆಲೆಯಲ್ಲಿ ಏಕೀಕೃತ ಲಾಭದಲ್ಲಿ ಶೇಕಡಾ 76.48 ಏರಿಕೆಯಾಗಿ 468.74 ಕೋಟಿ ರೂ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 265.60 ಕೋಟಿ ರೂ.ಗಳ ಕ್ರೋಢೀಕೃತ ನಿವ್ವಳ ಲಾಭವನ್ನು ದಾಖಲಿಸಿತ್ತು.

Adani Enterprises Ltd. ಕಂಪನಿ ಪ್ರೊಫೈಲ್ ತಿಳಿಯಲು ಕ್ಲಿಕ್ ಮಾಡಿ

ಆದರೆ, ಕಳೆದ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ಶೇ 8.89ಗೆ ಹೋಲಿಸಿದರೆ, ಕಾರ್ಯಾಚರಣೆಯ ಮಾರ್ಜಿನ್ Q1 ನಲ್ಲಿ ಶೇಕಡಾ 2.76 ಕ್ಕೆ ಕುಸಿದಿದೆ. ನಿವ್ವಳ ಲಾಭದ ಪ್ರಮಾಣವೂ ಶೇ.2.16ಕ್ಕೆ ಕುಸಿದಿದೆ.

ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ Q1: ಆದಾಯ 225% ಏರಿಕೆ!

ಈ ತ್ರೈಮಾಸಿಕದಲ್ಲಿ, ಅದಾನಿ ನ್ಯೂ ಇಂಡಸ್ಟ್ರೀಸ್ ಸಪ್ಲೈ ಚೈನ್ ಇಕೋಸಿಸ್ಟಮ್ 264 MW ನ ಮಾರಾಟ ಪ್ರಮಾಣವನ್ನು ಸಾಧಿಸಿದೆ. ಕಂಪನಿಯ ಏಳು ವಿಮಾನ ನಿಲ್ದಾಣಗಳಲ್ಲಿ, ಪ್ರಯಾಣಿಕರ ಚಲನೆಯು ಶೇಕಡಾ 35 ರಷ್ಟು 16.6 ಮಿಲಿಯನ್‌ಗೆ ಏರಿದೆ. ಪ್ರಾಥಮಿಕ ಕೈಗಾರಿಕೆಗಳ ಗಣಿಗಾರಿಕೆ ಸೇವೆಗಳು ಉತ್ಪಾದನೆಯ ಪ್ರಮಾಣದಲ್ಲಿ ಶೇಕಡಾ 71 ರಷ್ಟು ಜಿಗಿತವನ್ನು 8.1 MMT ಗೆ ದಾಖಲಿಸಿದೆ ಎಂದು ಕಂಪನಿಯು BSE ಫೈಲಿಂಗ್‌ನಲ್ಲಿ ತಿಳಿಸಿದೆ.

ಎಸ್‌ಬಿಐನಿಂದ ಅದಾನಿ ಗ್ರೂಪ್ 14,000 ಕೋಟಿ ರೂ. ಸಾಲ ಕೇಳಿದ್ದು ಯಾಕೆ?ಎಸ್‌ಬಿಐನಿಂದ ಅದಾನಿ ಗ್ರೂಪ್ 14,000 ಕೋಟಿ ರೂ. ಸಾಲ ಕೇಳಿದ್ದು ಯಾಕೆ?

ಅದಾನಿ ರೋಡ್ ಟ್ರಾನ್ಸ್‌ಪೋರ್ಟ್ ಲಿಮಿಟೆಡ್ ಅಜಿಯುರ್ ವೆಂಗಲಂ, ಕೊಡದ್ ಖಮ್ಮಂ, ಬಡಾಕುಮಾರಿ ಕರ್ಕಿ ಮತ್ತು ಪನಾಗಢ್ ಪಾಲ್ಸಿಟ್ ರಸ್ತೆ ಯೋಜನೆಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಿದೆ. AEL ಅದಾನಿ ಸಮೂಹದ ಪ್ರಮುಖ ಕಂಪನಿಯಾಗಿದೆ.

"ನಮ್ಮ ವೈವಿಧ್ಯಮಯ ಬೆಳವಣಿಗೆಯು ನಮ್ಮ ವ್ಯಾಪ್ತಿಯ ವ್ಯವಹಾರಗಳಲ್ಲಿ ಪ್ರತಿಫಲಿಸುತ್ತದೆ, ಅದಾನಿ ಎಂಟರ್‌ಪ್ರೈಸಸ್ ವಿಶ್ವದ ಅತ್ಯಂತ ಯಶಸ್ವಿ ಬಹು-ಉದ್ಯಮ ಇನ್‌ಕ್ಯುಬೇಟರ್‌ಗಳಲ್ಲಿ ಒಂದಾಗಿದೆ" ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಕಂಪನಿಯು ಅಬುಧಾಬಿ ಮೂಲದ ಇಂಟರ್ನ್ಯಾಷನಲ್ ಹೋಲ್ಡಿಂಗ್ ಕಂಪನಿ (IHC) ನೊಂದಿಗೆ 3.5 ಶೇಕಡಾ ಪಾಲನ್ನು 7,700 ಕೋಟಿ ರು ಪ್ರಾಥಮಿಕ ಷೇರು ವ್ಯವಹಾರವನ್ನು ಪೂರ್ಣಗೊಳಿಸಿದೆ ಎಂದು ತಿಳಿಸಿದೆ.

ಅದಾನಿ ಗ್ರೂಪ್ಸ್‌ ಭವಿಷ್ಯದಲ್ಲಿ ಎನರ್ಜಿ ಉದ್ಯಮದಲ್ಲಿ ಸುಮಾರು 70 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ. ಇದರಿಂದಾಗಿ ಭಾರತವು ಅತೀ ಅಧಿಕ ತೈಲ ಆಮದಿನ ಬದಲಾಗಿ ಅತೀ ಅಧಿಕ ಗ್ರೀನ್ ಹೈಡ್ರೋಜನ್ ರಫ್ತು ಮಾಡುವ ದೇಶವಾಗಿ ಬದಲಾವಣೆ ಆಗಲಿದೆ ಎಂದು ನುಡಿದಿದ್ದಾರೆ.

ಭವಿಷ್ಯದ ಹೂಡಿಕೆ ಬಗ್ಗೆ ಗೌತಮ್ ಅದಾನಿ ಹೇಳುವುದು ಹೀಗೆಭವಿಷ್ಯದ ಹೂಡಿಕೆ ಬಗ್ಗೆ ಗೌತಮ್ ಅದಾನಿ ಹೇಳುವುದು ಹೀಗೆ

ಭಾರತದಲ್ಲಿ ಅದಾನಿ ಗ್ರೂಪ್ ಅತೀ ದೊಡ್ಡ ಏರ್‌ಪೋರ್ಟ್ ನಿರ್ವಾಹಕ ಸಂಸ್ಥೆಯಾಗಿದೆ. ಹಾಗೆಯೇ ಸಿಮೆಂಟ್ ಉದ್ಯಮಕ್ಕೂ ಅದಾನಿ ಸಂಸ್ಥೆ ಕಾಲಿರಿಸಿದೆ. ಇತ್ತೀಚೆಗೆ 5ಜಿ ತರಂಗಗುಚ್ಛ ಹರಾಜಿನಲ್ಲಿ ಅಗತ್ಯ ಸ್ಪೆಕ್ಟ್ರಮ್ ಖರೀದಿಸಿದೆ.

ಈ ವರ್ಷ ನನಗೆ 60 ವರ್ಷ ವಯಸ್ಸಾಗುತ್ತದೆ. ಹಾಗೆಯೇ ನನ್ನ ತಂದೆ ಶಾಂತಿಲಾಲ್ ಅದಾನಿಯವರ ನೂರು ವರ್ಷದ ಹುಟ್ಟು ಹಬ್ಬವೂ ಈ ವರ್ಷವೇ ಆಗಿದೆ. ಈ ಮೈಲಿಗಲ್ಲನ್ನು ನಾವು ನೆನಪಿಸುವ ನಿಟ್ಟಿನಲ್ಲಿ ನಮ್ಮ ಅದಾನಿ ಕುಟುಂಬ ಜೊತೆಯಾಗಿ 60,000 ಕೋಟಿ ರೂಪಾಯಿಯನ್ನು ಆರೋಗ್ಯ ಕ್ಷೇತ್ರ, ಶಿಕ್ಷಣ, ಅಭಿವೃದ್ಧಿಗಾಗಿ ದಾನ ಮಾಡಲಿದ್ದೇವೆ ಎಂದು ಇತ್ತೀಚೆಗೆ ವಾರ್ಷಿಕ ಸಭೆಯಲ್ಲಿ ಗೌತಮ್ ಅದಾನಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

English summary

Adani Enterprises Q1 Results: Revenue increases 225% to Rs 41,066 Crore

Adani Enterprises Ltd (AEL), part of Adani Group, on Thursday said its consolidated revenue surged by 223 per cent year-on-year to ₹ 41,066 crore for the quarter ended June 30, 2022.
Story first published: Thursday, August 4, 2022, 23:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X