For Quick Alerts
ALLOW NOTIFICATIONS  
For Daily Alerts

ಮುಂಬೈ ವಿಮಾನ ನಿಲ್ದಾಣದ ಶೇ.74ರಷ್ಟು ಪಾಲು ಅದಾನಿ ತೆಕ್ಕೆಗೆ

|

ಮುಂಬೈ, ಆಗಸ್ಟ್‌ 31: ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ತನ್ನ ವಿಮಾನ ನಿಲ್ದಾಣಗಳ ವ್ಯವಹಾರಕ್ಕಾಗಿ ಅದಾನಿ ಏರ್‌ಪೋರ್ಟ್‌ ಹೋಲ್ಡಿಂಗ್ಸ್ (ಎಎಹೆಚ್ಎಲ್) ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (MIAL) ಶೇ.74ರಷ್ಟು ನಿಯಂತ್ರಣ ಪಾಲನ್ನು ಪಡೆದುಕೊಳ್ಳುತ್ತಿದೆ.

ಇದು "ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡ ಸಾಲವನ್ನು ಪರಸ್ಪರ ಒಪ್ಪಿದ ನಿಯಮಗಳ ಮೇಲೆ ಜಿವಿಕೆಎಡಿಎಲ್‌ನ ಇಕ್ವಿಟಿಗೆ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಇದು ಅಗತ್ಯ ನಿಯಂತ್ರಕ ಅನುಮೋದನೆಗಳನ್ನು ಪಡೆಯುತ್ತದೆ."

ಜಿವಿಕೆ ಎಡಿಎಲ್ ಹೋಲ್ಡಿಂಗ್ ಕಂಪನಿಯಾಗಿದ್ದು, ಅದಾನಿ ಸಮೂಹವು ಜಿವಿಕೆ ಸಮೂಹದ ಶೇ 50.5ರಷ್ಟು ಶೇರುಗಳನ್ನು ಪಡೆದುಕೊಳ್ಳಲಿದೆ. ಜೊತೆಗೆ ಅಲ್ಪ ಪ್ರಮಾಣದ ಪಾಲುದಾರರಾಗಿರುವ ದಕ್ಷಿಣಾ ಆಫ್ರಿಕಾ ಏರ್ ಪೋರ್ಟ್ ಕಂಪೆನಿ (ಎಸಿಎಸ್‌ಎ) ಮತ್ತು ಬಿಡ್ವೆಸ್ಟ್‌ಗಳಿಂದ ಶೇ 23.5ರಷ್ಟು ಶೇರುಗಳನ್ನು ಖರೀದಿ ಮಾಡಲಿದೆ. ದೇಶದ ಎರಡನೆಯ ಅತಿದೊಡ್ಡ ವಿಮಾನ ನಿಲ್ದಾಣ ಎಂಐಎಎಲ್‌ನಲ್ಲಿ ಎಸಿಎಸ್‌ಎ ಶೇ 10 ಮತ್ತು ಬಿಡ್ವೆಸ್ಟ್ ಶೇ. 13.5 ಶೇರುಗಳನ್ನು ಹೊಂದಿದೆ.

ಮುಂಬೈ ವಿಮಾನ ನಿಲ್ದಾಣದ ಶೇ.74ರಷ್ಟು ಪಾಲು ಅದಾನಿ ತೆಕ್ಕೆಗೆ

ಬಿಎಸ್‌ಇಗೆ ನೀಡಿದ ಹೇಳಿಕೆಯಲ್ಲಿ, ಅದಾನಿ ಎಂಟರ್‌ಪ್ರೈಸಸ್ ಹೀಗೆ ಹೇಳಿದೆ. "ಎಸಿಎಸ್‌ಎ ಮತ್ತು MIALನಲ್ಲಿ ಬಿಡ್‌ವೆಸ್ಟ್‌ನಿಂದ ಶೇ. 23.5 ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅದಾನಿ ಗ್ರೂಪ್ ಕ್ರಮ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಸಿಸಿಐ ಅನುಮೋದನೆ ಪಡೆದಿದೆ." ಇದು MIAL ನಲ್ಲಿ ನಿಯಂತ್ರಣ ಆಸಕ್ತಿಯನ್ನು ನೀಡುತ್ತದೆ.

ಮೊದಲ ನಿರಾಕರಣೆಯ ಹಕ್ಕು ತಮಗೆ ಇರುವುದರಿಂದ ಮಾರಾಟದ ಪ್ರಯತ್ನಗಳಿಗೆ ತಡೆ ನೀಡಬೇಕು ಎಂದು ಜಿವಿಕೆ ಈ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಕಂಪೆನಿಗೆ ಸಾಕಷ್ಟು ಪ್ರಮಾಣದ ನಿಧಿ ಸಂಗ್ರಹಿಸಲು ಸಾಧ್ಯವಾಗಿರಲಿಲ್ಲ. ಒಟ್ಟು ಆರು ವಿಮಾನ ನಿಲ್ದಾಣಗಳಲ್ಲಿ ಪ್ರಮುಖ ಪಾಲುದಾರಿಕೆ ಹೊಂದುವ ಮೂಲಕ ಅದಾನಿ ಸಮೂಹವು ಎರಡನೆಯ ಅತಿ ದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕ ಎನಿಸಿಕೊಂಡಿದೆ.

English summary

Adani Group Subsidiary To Take Control Of Mumbai Airport

Adani Airport Holdings (AAHL), the Adani Group’s holding company for its airports business, is acquiring a controlling stake in Mumbai International Airport (MIAL).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X