For Quick Alerts
ALLOW NOTIFICATIONS  
For Daily Alerts

ಷೇರು ಮಾರಾಟದಲ್ಲಿ ಭಾರೀ ನಷ್ಟ: ದುರ್ಬಲಗೊಳ್ಳಲಿವೆಯೇ ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್‌?

ಹೋಲ್ಸಿಮ್ ಲಿಮಿಟೆಡ್‌ನಿಂದ ಕಳೆದ ವರ್ಷ ಅದಾನಿ ಖರೀದಿಸಿದ ಅಂಬುಜಾ ಸಿಮೆಂಟ್ಸ್ ಶೇ 9.7 ನಷ್ಟು ನಷ್ಟದೊಂದಿಗೆ ಹೆಚ್ಚು ಕುಸಿದಿದೆ. ಇದೇ ವೇಳೆ, ಅದಾನಿ ಪೋರ್ಟ್ಸ್ ಮತ್ತು ಎಸಿಸಿ ಲಿಮಿಟೆಡ್ ಎರಡೂ ಶೇ 7.3 ನಷ್ಟು ಕಳೆದುಕೊಂಡಿವೆ. ಮುಂದೆ ಏನಾಗಬಹುದು? ಈ ವರದಿ ಓದಿ

|

ಮುಂಬೈ, ಜನವರಿ 25: ಅದಾನಿ ಗ್ರೂಪ್, ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ ಮತ್ತು ಅಂಬುಜಾ ಸಿಮೆಂಟ್ಸ್ ಲಿಮಿಟೆಡ್‌ನಿಂದ ನಿಯಂತ್ರಿಸಲ್ಪಡುವ ಹೆಚ್ಚು-ಲಿಕ್ವಿಡ್ ಸ್ಟಾಕ್‌ಗಳು ಸಂಘಟಿತ ಷೇರುಗಳಲ್ಲಿ ಭಾರೀ ನಷ್ಟ ಅನುಭವಿಸಿವೆ. ಇವುಗಳು ವಿಸ್ತೃತ ಮಾರಾಟದ ಸಂದರ್ಭದಲ್ಲಿ ಹೆಚ್ಚು ದುರ್ಬಲಗೊಳ್ಳಲಿವೆ ಎಂದು 'ಮಿಂಟ್‌' ವರದಿ ಮಾಡಿದೆ.

ಇದು ಬ್ಲೂಮ್‌ಬರ್ಗ್ ಇಂಟೆಲಿಜೆನ್ಸ್ ವಿಶ್ಲೇಷಕ ನಿತಿನ್ ಚಂದುಕಾ ಅವರ ಅಭಿಪ್ರಾಯವಾಗಿದೆ.

ಭಾರೀ ವಂಚನೆಗೆ ಕೈಹಾಕಿತೇ ಅದಾನಿ ಗ್ರೂಪ್‌: ಏನಿದು ವರದಿ? ಒಂದೇ ದಿನದಲ್ಲಿ ₹ 46,000 ಕೋಟಿ ಕಳೆದುಕೊಂಡಿದ್ದೇಕೆ?ಭಾರೀ ವಂಚನೆಗೆ ಕೈಹಾಕಿತೇ ಅದಾನಿ ಗ್ರೂಪ್‌: ಏನಿದು ವರದಿ? ಒಂದೇ ದಿನದಲ್ಲಿ ₹ 46,000 ಕೋಟಿ ಕಳೆದುಕೊಂಡಿದ್ದೇಕೆ?

'ಅದಾನಿ ಅವರ ಪೋರ್ಟ್‌ಗಳಿಗೆ ಸಂಬಂಧಿಸಿದ ದೊಡ್ಡ ಪ್ರಮಾಣದ ಷೇರುಗಳು ಸ್ಟಾಕ್‌ ಮಾರ್ಕೆಟ್‌ನಲ್ಲಿವೆ. ಈಗ ಅದಾನಿ ಗ್ರೂಪ್‌ನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸಾರ್ವಜನಿಕರು ಅದಾನಿ ಷೇರುಗಳನ್ನು ಖರೀದಿಸಲು ಮುಂದು ಬರುವುದಿಲ್ಲ. ಇದರ ಪರಿಣಾಮ ಪೋರ್ಟ್‌ಗಳ ಮೇಲೆ ಬೀಳುತ್ತದೆ' ಎಂದು ಚಂದುಕಾ ಹೇಳಿದ್ದಾರೆ.

ಷೇರು ಮಾರಾಟದಲ್ಲಿ ನಷ್ಟ: ದುರ್ಬಲಗೊಳ್ಳಲಿವೆಯೇ ಅದಾನಿ ಪೋರ್ಟ್ಸ್?

ವಿದ್ಯುತ್‌, ಮೂಲಸೌಕರ್ಯ ಮತ್ತು ಮಾಧ್ಯಮಗಳಲ್ಲಿ ಅಹಮದಾಬಾದ್ ಮೂಲದ ಅದಾನಿ ಗ್ರೂಪ್‌ ಹೂಡಿಕೆ ಮಾಡಿದೆ. ಇದಕ್ಕೆ ಸಂಬಂಧಿಸಿದ 10 ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ. ಯುಎಸ್ ಹೂಡಿಕೆದಾರ ಹಿಂಡೆನ್‌ಬರ್ಗ್ ರಿಸರ್ಚ್ ಕಂಪನಿಯು ಅದಾನಿ ಗ್ರೂಪ್‌ನ ವಿರುದ್ಧ ಗಂಭೀರ ಆರೋಪ ಮಾಡಿದೆ. ಆ ನಂತರ ಅದಾನಿ ಗ್ರೂಪ್‌ ಭಾರೀ ನಷ್ಟದತ್ತ ಸಾಗುತ್ತಿದೆ ಎಂದು ವರದಿ ಆಗಿದೆ.

ಹೋಲ್ಸಿಮ್ ಲಿಮಿಟೆಡ್‌ನಿಂದ ಕಳೆದ ವರ್ಷ ಅದಾನಿ ಖರೀದಿಸಿದ ಅಂಬುಜಾ ಸಿಮೆಂಟ್ಸ್, ಶೇ 9.7ಕ್ಕೂ ಹೆಚ್ಚು ಕುಸಿದರೆ, ಅದಾನಿ ಪೋರ್ಟ್ಸ್ ಮತ್ತು ಎಸಿಸಿ ಲಿಮಿಟೆಡ್ ಎರಡೂ ಶೇ 7.3ರಷ್ಟು ಕಳೆದುಕೊಂಡಿವೆ. ಅದಾನಿ ಗ್ರೂಪ್ ಎಂಎಸ್‌ಸಿಐ ಇಂಡಿಯಾ ಇಂಡೆಕ್ಸ್‌ನಲ್ಲಿ ಎಂಟು ಷೇರುಗಳನ್ನು ಹೊಂದಿದೆ. ಅವುಗಳಲ್ಲಿ ಎರಡು ಭಾರತದ ಪ್ರಮುಖ ಎನ್‌ಎಸ್‌ಇ ನಿಫ್ಟಿ 50 ಇಂಡೆಕ್ಸ್‌ನ ಭಾಗವಾಗಿದೆ.

ಹಿಂಡೆನ್‌ಬರ್ಗ್ ವರದಿ ಏನು?

'ನಮ್ಮ ತನಿಖೆಯ ಸಂಶೋಧನೆಗಳನ್ನು ನೀವು ನಿರ್ಲಕ್ಷಿಸಿದರೂ ಮತ್ತು ಅದಾನಿ ಗ್ರೂಪ್‌ನ ಹಣಕಾಸುಗಳನ್ನು ಮುಖಬೆಲೆಗೆ ತೆಗೆದುಕೊಂಡರೂ ಸಹ, ಅದರ 7 ಪ್ರಮುಖ ಪಟ್ಟಿಮಾಡಿದ ಕಂಪನಿಗಳು ಶೇ 85 ನಷ್ಟವನ್ನು ಹೊಂದಿವೆ. ಪ್ರಮುಖ ಪಟ್ಟಿಯಲ್ಲಿರುವ ಅದಾನಿ ಕಂಪನಿಗಳು ತಮ್ಮ ಸ್ಟಾಕ್‌ನ ಷೇರುಗಳನ್ನು ಸಾಲಕ್ಕಾಗಿ ವಾಗ್ದಾನ ಮಾಡುವುದು ಸೇರಿದಂತೆ ಗಣನೀಯ ಸಾಲವನ್ನು ತೆಗೆದುಕೊಂಡಿವೆ. ಇಡೀ ಗುಂಪನ್ನು ಅನಿಶ್ಚಿತ ಆರ್ಥಿಕ ತಳಹದಿಯಲ್ಲಿ ಇರಿಸಿದೆ' ಎಂದು ಹಿಂಡೆನ್‌ಬರ್ಗ್ ವರದಿ ಹೇಳಿದೆ.

ಷೇರು ಮಾರಾಟದಲ್ಲಿ ನಷ್ಟ: ದುರ್ಬಲಗೊಳ್ಳಲಿವೆಯೇ ಅದಾನಿ ಪೋರ್ಟ್ಸ್?

ಇದು ಹೀಗೆ ಮುಂದುವರಿದರೆ, ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗೌತಮ್‌ ಅದಾನಿ ಭಾರೀ ಕುಸಿತ ಕಾಣಲಿದ್ದಾರೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

English summary

Adani Ports, Ambuja most vulnerable if Adani Group rout extends

Highly-liquid stocks controlled by Adani Group, Adani Ports and Special Economic Zone Ltd and Ambuja Cements Ltd were among the heavy losers in the conglomerate
Story first published: Wednesday, January 25, 2023, 16:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X