For Quick Alerts
ALLOW NOTIFICATIONS  
For Daily Alerts

ಅಮೆರಿಕಾ ಸೇನಾ ನೆಲೆ ಮೇಲೆ ಇರಾನ್ ದಾಳಿ: ತೈಲ ದರ ಮತ್ತೆ ಏರಿಕೆ

|

ಅಮೆರಿಕಾ ಮೇಲೆ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿರುವ ಇರಾನ್, ಇರಾಕ್‌ನಲ್ಲಿರುವ ಅಮೆರಿಕಾ ಸೇನಾ ನೆಲೆಗಳನ್ನು ಗುರಿಯಾಗಿಸಿಗೊಂಡು ದಾಳಿ ನಡೆಸಿದೆ. ಪರಿಣಾಮ ಮಂಗಳವಾರ ಇಳಿಕೆಯಾಗಿದ್ದ ತೈಲ ಬೆಲೆಯು ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

 

ಇರಾಕಿನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ 12ಕ್ಕೂ ಅಧಿಕ ಖಂಡಾಂತರ ಕ್ಷಿಪಣಿ ದಾಳಿ ನಡೆಸಲಾಗಿದೆ. ಈ ರಾಕೆಟ್ ದಾಳಿಯನ್ನು ಪೆಂಟಗಾನ್ ಖಚಿತಪಡಿಸಿದೆ. ಇರಾಕ್‌ನಲ್ಲಿ ಅತ್ಯಾಧುನಿಕ ಮತ್ತು ಅತಿ ದುಬಾರಿ ವಾಯುನೆಲೆಯನ್ನು ಅಮೆರಿಕ ನಿರ್ಮಾಣ ಮಾಡಿದೆ. ಇರಾನ್ ಈ ನೆಲೆಗಳನ್ನು ಗುರಿಯಾಗಿಸಿಕೊಂಡು ರಾಕೆಟ್ ದಾಳಿ ನಡೆಸಿದೆ.

 
ಅಮೆರಿಕಾ ಸೇನಾ ನೆಲೆ ಮೇಲೆ ಇರಾನ್ ದಾಳಿ: ತೈಲ ದರ ಮತ್ತೆ ಏರಿಕೆ

ಇರಾನ್‌ -ಅಮೆರಿಕ ಮೇಲೆ ದಾಳಿ ನಡೆದ ಒಂದೇ ದಿನ ಕಚ್ಚಾತೈಲ ಬೆಲೆ 4 ಪರ್ಸೆಂಟ್ ಏರಿಕೆ ಕಂಡಿತ್ತು. ಅಂದಿನಿಂದ ಪೆಟ್ರೋಲ್ ಬೆಲೆ ಏರುಮುಖವಾಗಿಯೇ ಸಾಗಿತ್ತು. ಆದರೆ ಮಂಗಳವಾರ (ಜನವರಿ 7) ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರವು ಬ್ಯಾರೆಲ್‌ 54 ಸೆಂಟ್ಸ್ ಇಳಿಕೆಯಾಗಿದ್ದು ಪ್ರತಿ ಬ್ಯಾರೆಲ್‌ಗೆ 68.37 ಅಮೆರಿಕನ್ ಡಾಲರ್‌ಗೆ ತಲುಪಿತ್ತು. ಆದರೆ ಬುಧವಾರ ಇರಾನ್ ಅಮೆರಿಕಾ ಸೇನಾ ನೆಲೆ ಮೇಲೆ ದಾಳಿ ಬಳಿಕ ಕಚ್ಛಾ ತೈಲ ಬೆಲೆಯು 4.5 ಪರ್ಸೆಂಟ್‌ವರೆಗೂ ಏರಿಕೆಯಾಗುವ ಸಾಧ್ಯತೆ ಇದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯು ಏರಿಕೆಗೊಂಡರೆ ಇದರ ಪರಿಣಾಮ ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 78.28 ರುಪಾಯಿ ಇದ್ದು, ಡೀಸೆಲ್ ದರ ಲೀಟರ್‌ಗೆ 71.08 ರುಪಾಯಿಗೆ ಮುಟ್ಟಿದೆ.

English summary

After Iran attack Oil prices Spike over 4.5 percent

Oil prices spiked Wednesday after iran attacked irak airbase used by US
Story first published: Wednesday, January 8, 2020, 10:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X