ನವದೆಹಲಿ, ನ. 3: ಭಾರತೀಯ ವಿಭಾಗದ ಏರ್‌ಏಷ್ಯಾ ಸಂಸ್ಥೆಯ ಸಂಪೂರ್ಣ ಪಾಲನ್ನು ಏರ್ ಇಂಡಿಯಾ ಖರೀದಿಸಿದೆ. ಏರ್‌ಏಷ್ಯಾ (ಇಂಡಿಯಾ) ದಲ್ಲಿ ಏರ್‌ಏಷ್ಯಾ ಏವಿಯೇಶನ್ ಗ್ರೂಪ್ ತಾನು ಹೊಂದಿದ್ದ ಶೇ. 16.33 ಈಕ್ವಿಟಿ ಷೇರುಗಳನ್ನು ನಿನ್ನೆ ಬುಧವಾರ ಏರ್ ಇಂಡಿಯಾಗೆ ಮಾರಿದೆ. ಇದರೊಂದಿಗೆ ಏರ್‌ಏಷ್ಯಾ ಏವಿಯೇಶನ್ ಗ್ರೂಪ್‌ಗೆ 1.56 ಬಿಲಿಯನ್ ಡಾಲರ್ (ಸುಮಾರು 12,900 ಕೋಟಿ ರೂಪಾಯಿ) ಹಣ ಸಿಗಲಿದೆ.
ಏರ್‌ಏಷ್ಯಾ ಏವಿಯೇಶನ್ ಗ್ರೂಪ್ ಮಲೇಷ್ಯಾ ಮೂಲದ ಏರ್‌ಲೈನ್ ಸಂಸ್ಥೆಯಾಗಿದೆ. ಏರ್ ಏಷ್ಯಾ ಸೇರಿದಂತೆ ಹಲವು ವಿಮಾನಯಾನ ಸೇವೆಗಳನ್ನು ಇದು ನೀಡುತ್ತದೆ. ಅದರ ಅಂಗ ಸಂಸ್ಥೆಯಾದ ಏರ್ ಏಷ್ಯಾ ಇನ್ವೆಸ್ಟ್‌ಮೆಂಟ್ ಮತ್ತು ಟಾಟಾ ಸನ್ಸ್ ಜಂಟಿಯಾಗಿ ಏರ್‌ಏಷ್ಯಾ (ಇಂಡಿಯಾ) ಸಂಸ್ಥೆ ಆರಂಭಿಸಿದ್ದವು. ಇದರಲ್ಲಿ ಟಾಟಾ ಸನ್ಸ್ ಪಾಲು ಶೇ. 83.67 ಇದ್ದರೆ ಏರ್ ಏಷ್ಯಾ ಇನ್ವೆಸ್ಟ್‌ಮೆಂಟ್ ಸಂಸ್ಥೆಯದ್ದು ಶೇ. 16.33 ಪಾಲು ಇತ್ತು.
ಇನ್ನೊಂದೆಡೆ ಟಾಟಾ ಗ್ರೂಪ್ ಒಡೆತನದಲ್ಲಿ ಏರ್‌ಇಂಡಿಯಾ, ಏರ್‌ಏಷ್ಯಾ ಮತ್ತು ಟಾಟಾ ಎಸ್‌ಐಎ ಏರ್‌ಲೈನ್ಸ್ ಸಂಸ್ಥೆಗಳಿವೆ. ಏರ್ ಏಷ್ಯಾದ ಸಂಪೂರ್ಣ ಷೇರು ಪಾಲನ್ನು ಖರೀದಿಸುವ ಪ್ರಸ್ತಾವ ಹಲವು ತಿಂಗಳ ಹಿಂದೆಯೇ ಆಗಿತ್ತು. ಜೂನ್ ತಿಂಗಳಲ್ಲಿ ಈ ಪ್ರಸ್ತಾವಿತ ವ್ಯವಹಾರಕ್ಕೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಜೂನ್ ತಿಂಗಳಲ್ಲಿ ಅನುಮೋದನೆ ನೀಡಿತ್ತು. ಇದೀಗ ಈ ಒಪ್ಪಂದ ಪೂರ್ಣಗೊಂಡಿದೆ.

ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನೊಂದಿಗೆ ವಿಲೀನ
ಏರ್‌ಏಷ್ಯಾ (ಇಂಡಿಯಾ) ಇದೀಗ ಏರ್‌ಇಂಡಿಯಾದ ಪೂರ್ಣ ಸ್ವಾಮ್ಯತ್ವಕ್ಕೆ ಸೇರಿದೆ. ಮೂಲಗಳ ಪ್ರಕಾರ ಏರ್‌ಏಷ್ಯಾ (ಇಂಡಿಯಾ) ಸಂಸ್ಥೆಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ವಿಲೀನಗೊಳಿಸುವ ಸಾಧ್ಯತೆ ಇದೆ.
ಏರ್ ಇಂಡಿಯಾ ಏರ್‌ಲೈನ್ ಸಂಸ್ಥೆ ದೇಶ ವಿದೇಶಗಳ ಮಾರುಕಟ್ಟೆಗಳಲ್ಲಿ ವಿಮಾನಯಾನ ಸೇವೆ ನೀಡುತ್ತದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ದಕ್ಷಿಣ ಭಾರತ ಹಾಗೂ ಇತರೆಡೆಯಿಂದ ಮಿಡಲ್ ಈಸ್ಟ್ ದೇಶಗಳಿಗೆ ವಿಮಾನ ಸೇವೆ ಒದಗಿಸುತ್ತದೆ.
ಏರ್‌ಏಷ್ಯಾ ಗ್ರೂಪ್ ಮುಂದಿನ ಹೆಜ್ಜೆ?
ಇನ್ನು, ಏರ್ ಏಷ್ಯಾ ಏರ್‌ಲೈನ್ ಗ್ರೂಪ್‌ನ ಇತರ ವೈಮಾನಿಕ ಸಂಸ್ಥೆಗಳು ಮಾಮೂಲಿಯಾಗಿ ಸೇವೆ ಮುಂದುವರಿಸಲಿವೆ. ಆಸಿಯಾನ್ ದೇಶಗಳ (ಆಗ್ನೇಯ ಏಷ್ಯನ್ ದೇಶಗಳು) ಮೇಲೆ ಹೆಚ್ಚು ಗಮನ ಹರಿಸುತ್ತದೆ. ಭಾರತಕ್ಕೂ ಅದರ ವೈಮಾನಿಕ ಸೇವೆ ಮುಂದುವರಿಯುತ್ತದೆ.

ಏರ್‌ಏಷ್ಯಾ (ಇಂಡಿಯಾ) ಇದೀಗ ಸಂಪೂರ್ಣವಾಗಿ ಏರ್ ಇಂಡಿಯಾ ಪಾಲಾದ ಬಗ್ಗೆ ಮಾತನಾಡಿದ ಏರ್‌ಏಷ್ಯಾ ಏವಿಯೇಷನ್ ಗ್ರೂಪ್ ಸಿಇಒ ಬೋ ಲಿಂಗಮ್, ಟಾಟಾ ಗ್ರೂಪ್ ಜೊತೆಗಿನ ವ್ಯವಹಾರಕ್ಕೆ ಇದು ಅಂತ್ಯವಲ್ಲ, ಬದಲಾಗಿ ಹೊಸ ಆರಂಭ ಎಂದು ವಿಶ್ಲೇಷಿಸಿದರು.
"ವಿಶ್ವದ ಅತಿದೊಡ್ಡ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಏರ್‌ಏಷ್ಯಾ ಒಳ್ಳೆಯ ವ್ಯವಹಾರ ಪಡೆದಿತ್ತು. ಟಾಟಾ ಗ್ರೂಪ್ ಜೊತೆ ಕೆಲಸ ಮಾಡಿದ ಒಳ್ಳೆಯ ಅನುಭವ ನಮಗೆ ಸಿಕ್ಕಿದೆ. ಈಗ ಆಗಿದ್ದು ನಮ್ಮ ಸಂಬಂಧದ ಅಂತ್ಯವಲ್ಲ. ಬದಲಾಗಿ ಹೊಸ ಸಂಬಂಧದ ಆರಂಭವಾಗಿದೆ. ಮತ್ತೆ ಜೊತೆಗೂಡಿ ಕೆಲಸ ಮಾಡುವಂಥ ಅವಕಾಶಗಳನ್ನು ನಾವು ಅರಸುತ್ತಿದ್ದೇವೆ" ಎಂದು ಬೋ ಲಿಂಗಂ ತಿಳಿಸಿದರು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications