For Quick Alerts
ALLOW NOTIFICATIONS  
For Daily Alerts

3000 ಕೋಟಿ ರು. ಟಿಕೆಟ್ ಹಣ ಹಿಂತಿರುಗಿಸಲಾಗದ ಏರ್ ಲೈನ್ಸ್; ಮುಂದೇನು?

|

ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ್ದ ಅವಧಿಯಲ್ಲಿ ರದ್ದಾದ ವಿಮಾನದ ಟಿಕೆಟ್ ಗಳಿಗೆ ಬದಲಿಯಾಗಿ ನೀಡಿದ್ದ ಕ್ರೆಡಿಟ್ ಶೆಲ್ಸ್ (ಏರ್ ಲೈನ್ಸ್ ಗಳು ವಿತರಿಸುವ ಕ್ರೆಡಿಟ್ ನೋಟ್. ರದ್ದಾದ ವಿಮಾನದ ಟಿಕೆಟ್ ಗೆ ಬದಲಿಯಾಗಿ ಭವಿಷ್ಯದಲ್ಲಿ ಆ ಮೊತ್ತವನ್ನು ಬಳಸಿಕೊಳ್ಳುವ ಅವಕಾಶ) ಅನ್ನು ಪ್ರಯಾಣಿಕರು ಉಪಯೋಗಿಸಿಕೊಳ್ಳಲು ಸಮಯಾವಕಾಶ ನೀಡಲಾಗಿದೆ.

ಈಗಾಗಲೇ ನಗದು ಸಮಸ್ಯೆಯಿಂದ ಬಳಲುತ್ತಿರುವ ವಿಮಾನ ಯಾನ ಸಂಸ್ಥೆಗಳಿಗೆ 3 ಸಾವಿರ ಕೋಟಿ ರುಪಾಯಿ ಹಣ ಹಿಂತಿರುಗಿಸುವುದಕ್ಕೆ ಕಷ್ಟಸಾಧ್ಯ. ಏರ್ ಲೈನ್ಸ್ ಗಳು ಹಂಚಿಕೊಂಡಿರುವ ರಿಫಂಡ್ ಗಳ ದತ್ತಾಂಶದ ಪ್ರಕಾರ, 3000 ಕೋಟಿ ರುಪಾಯಿಗೆ ಕ್ರೆಡಿಟ್ ಶೆಲ್ಸ್ ನೀಡಿವೆ. ಅದನ್ನು ಭವಿಷ್ಯದಲ್ಲಿ ಪ್ರಯಾಣಕ್ಕೆ ಬಳಸಬಹುದು.

ಇನ್ನು ವಿಮಾನ ಯಾನ ಸಂಸ್ಥೆಗಳು ನೀಡಿರುವ ಮಾಹಿತಿ ಪ್ರಕಾರ, 1500 ಕೋಟಿ ರುಪಾಯಿ ಮೊತ್ತವನ್ನು ಪ್ರಯಾಣಿಕರಿಗೆ ಹಿಂತಿರುಗಿಸಲಾಗಿದೆ. ಅದರಲ್ಲೂ ಕೂಡ ದೊಡ್ಡ ಪ್ರಮಾಣದ ಮೊತ್ತವನ್ನು ಪ್ರಯಾಣಿಕರು ಕ್ರೆಡಿಟ್ ಶೆಲ್ ಗಳ ರೂಪದಲ್ಲಿ ಬಳಸಿಕೊಂಡಿದ್ದಾರೆ.

ಕೊರೊನಾ ಹೊಡೆತಕ್ಕೆ ಮಕಾಡೆ ಮಲಗಿದ ವೈಮಾನಿಕ ಕ್ಷೇತ್ರ: ನಷ್ಟ ಎಷ್ಟು ಗೊತ್ತಾ?ಕೊರೊನಾ ಹೊಡೆತಕ್ಕೆ ಮಕಾಡೆ ಮಲಗಿದ ವೈಮಾನಿಕ ಕ್ಷೇತ್ರ: ನಷ್ಟ ಎಷ್ಟು ಗೊತ್ತಾ?

ಲಾಕ್ ಡೌನ್ ಅವಧಿಯ ರೀಫಂಡ್ ಗಳ ಕಡೆಗೆ ಗಮನ ಹರಿಸುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಿಳಿಸಿತ್ತು. ಅದರ ಭಾಗವಾಗಿ ಏರ್ ಲೈನ್ಸ್ ಮತ್ತು ಸರ್ಕಾರದ ನಡುವೆ ನಡೆದ ಮಾತುಕತೆಯಲ್ಲಿ ಈ ಅಂದಾಜು ಸಂಖ್ಯೆ ಚರ್ಚೆಯಾಗಿದೆ. ಈಗಾಗಲೇ ವಿಮಾನ ಯಾನ ಸಂಸ್ಥೆಗಳ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಆದ್ದರಿಂದ ಪ್ರಯಾಣಿಕರಿಗೆ ಈ ಹಣ ಮರುಪಾವತಿಸುವುದು ಹಲವು ಸಂಸ್ಥೆಗಳಿಗೆ ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

3000 ಕೋಟಿ ರು. ಟಿಕೆಟ್ ಹಣ ಹಿಂತಿರುಗಿಸಲಾಗದ ಏರ್ ಲೈನ್ಸ್; ಮುಂದೇನು?

ಇನ್ನೂ ಮುಂದುವರಿದು, ಹಾಗಂತ ಹಣವನ್ನು ಹಿಂತಿರುಗಿಸುವುದಿಲ್ಲ ಎಂದಲ್ಲ. ಆ ಹಣವನ್ನು ಶೆಲ್ ನಲ್ಲಿ ಇಡಲಾಗುವುದು ಎಂದು ಹೆಸರು ಹೇಳಲು ಇಚ್ಛಿಸದ ವಿಮಾನ ಯಾನ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ವಿಮಾನ ಯಾನ ಸಂಸ್ಥೆಗಳ ಸ್ಥಿತಿ ಏನು ಅಂತ ಸರ್ಕಾರಕ್ಕೂ ಗೊತ್ತು. ಆದ್ದರಿಂದ ಹಣವನ್ನೇ ಹಿಂತಿರುಗಿಸಿ ಎಂದು ಬಲವಂತ ಮಾಡುವ ಪರಿಸ್ಥಿತಿಯಲ್ಲಿ ಸರ್ಕಾರವೂ ಇಲ್ಲ.

ಆದರೆ, ವಿಮಾನ ಯಾನ ಸಂಸ್ಥೆಗಳು ಹಾಗೂ ಪ್ರಯಾಣಿಕರು ಎರಡೂ ಕಡೆಯ ಹಿತರಕ್ಷಣೆಗೆ ಏನು ಮಾಡಬೇಕು ಎಂಬ ಬಗ್ಗೆ ಆಲೋಚನೆ ನಡೆಯುತ್ತಿದೆ. ಈ ಬಗ್ಗೆ ವಿಚಾರ ಕೋರ್ಟ್ ನಲ್ಲಿ ಇರುವುದರಿಂದ ಏರ್ ಲೈನ್ಸ್ ಗಳು ಯಾವುದೇ ಪ್ರತಿಕ್ರಿಯೆ ನೀಡಲು ಸಿದ್ಧವಿಲ್ಲ.

ಹಣವನ್ನು ಹಿಂತಿರುಗಿಸುವುದು ಏರ್ ಲೈನ್ಸ್ ಗೆ ಖಂಡಿತ ಸರಳವಿಲ್ಲ. ಕೆಲವು ವಿಮಾನಯಾನ ಸಂಸ್ಥೆಗಳ ಬಳಿ ನಗದು ಇರಬಹುದು. ಅದರರ್ಥ ಆ ಹಣ ಬಳಸಿ ಮರುಪಾವತಿಸಬಹುದು ಅಂತಲ್ಲ. ಏಕೆಂದರೆ ಸಿಬ್ಬಂದಿಗೆ ಸಂಬಳ ನೀಡುವುದಕ್ಕೂ ಕಷ್ಟ ಪಡುತ್ತಿವೆ. ವೆಚ್ಚ ಕಡಿಮೆ ಮಾಡಲು ಯತ್ನಿಸುತ್ತಿವೆ ಮತ್ತು ನಷ್ಟದಲ್ಲಿ ಎಂದು ವಿಮಾನ ಯಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಮತ್ತೊಬ್ಬ ವ್ಯಕ್ತಿ ಸ್ಥಿತಿಯನ್ನು ವಿವರಿಸಿದ್ದಾರೆ.

ಈ ಮಧ್ಯೆ ಪ್ರಯಾಣಿಕರಿಗೆ ಕೊಡಬೇಕಾದ ಹಣಕ್ಕೆ ಕ್ರೆಡಿಟ್ ಶೆಲ್ ನೀಡಿದ್ದು, ಅದನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಬಹುದು. ಈಗ ಆ ಕ್ರೆಡಿಟ್ ಶೆಲ್ ಬಳಕೆಗೆ ನೀಡಿದ್ದ ಗಡುವು ವಿಸ್ತರಣೆ ಮಾಡಬಹುದು. ಆ ಶೆಲ್ ನಲ್ಲಿ ಇರುವ ಹಣವನ್ನು ಯಾವಾಗಾದರೂ ಬಳಸಿಕೊಳ್ಳಲು ತಿಳಿಸಬಹುದು ಎಂದು ಮಾಹಿತಿಯನ್ನು ನೀಡಲಾಗಿದೆ.

English summary

Airlines Not In A Position To Refund Passengers 3000 Crore Ticket Money

Airlines which has to refund ticket money of passengers for flights which were booked during national lock down, not in a position to pay back that money. Know the reason why?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X