For Quick Alerts
ALLOW NOTIFICATIONS  
For Daily Alerts

1 ಕೋಟಿ 4ಜಿ ಬಳಕೆದಾರರು ಏರ್‌ಟೆಲ್ ತೆಕ್ಕೆಗೆ

|

ಕಳೆದ ಹಣಕಾಸು ತ್ರೈಮಾಸಿಕದಲ್ಲಿ ನಷ್ಟವನ್ನು ಘೋಷಿಸಿದ್ದ ಏರ್‌ಟೆಲ್ ಕಂಪನಿಯ ಖುಷಿ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಕಾರಣ ಭಾರತಿ ಏರ್‌ಟೆಲ್ ಕಂಪನಿಯು ಒಂದು ಕೋಟಿಗೂ ಅಧಿಕ ಹೊಸ 4ಜಿ ಬಳಕೆದಾರರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

 

ಟೆಲಿಕಾಂ ರೆಗ್ಯುಲೇಟರಿ ಆಫ್ ಅಥಾರಿಟಿ ಇಂಡಿಯಾ ಲಿಮಿಟೆಡ್(ಟ್ರಾಯ್‌) ಪ್ರಕಾರ ಅಕ್ಟೋಬರ್ -ನವೆಂಬರ್ ಅವಧಿಯಲ್ಲಿ ಸುಮಾರು 1 ಕೋಟಿ 20 ಲಕ್ಷ ಚಂದಾದಾರರನ್ನು ಕಂಪನಿ ಹೊಂದಿದೆ ಎಂದು ತಿಳಿಸಿದೆ. ಅಕ್ಟೋಬರ್‌ನಲ್ಲಿ 50 ಲಕ್ಷ ಹೊಸ ಚಂದಾದಾರರು ಏರ್‌ಟೆಲ್‌ ಬಳಸುತ್ತಿದ್ದು, ನವೆಂಬರ್‌ನಲ್ಲಿ 70 ಲಕ್ಷ ಹೊಸ ಬಳಕೆದಾರರು ಸೇರಿಕೊಂಡಿದ್ದಾರೆ.

1 ಕೋಟಿ 4ಜಿ ಬಳಕೆದಾರರು ಏರ್‌ಟೆಲ್ ತೆಕ್ಕೆಗೆ

ಈ ಕುರಿತು ಮಾತನಾಡಿರುವ ಏರ್‌ಟೆಲ್ ಕಂಪನಿಯ ವಕ್ತಾರ ''ಗ್ರಾಹಕರು ಏರ್‌ಟೆಲ್ ನೆಟ್‌ವರ್ಕ್ ಬಳಕೆಗೆ ನೀಡಿರುವ ಆದ್ಯತೆಗಳನ್ನು ನಾವು ಗಮನಿಸುತ್ತಿದ್ದೇವೆ. ಮುಂದಿನ ಹಣಕಾಸು ತ್ರೈಮಾಸಿಕದ ವೇಳೆಗೆ ಮತ್ತಷ್ಟು ಚಂದಾದಾರರನ್ನು ಹೊಂದುವ ವಿಶ್ವಾಸ ಹೊಂದಿದ್ದೇವೆ'' ಎಂದಿದ್ದಾರೆ.

ಸೆಪ್ಟೆಂಬರ್ ತಿಂಗಳ ಅಂತ್ಯದ ವೇಳೆಗೆ ಕಂಪನಿಯು 355.2 ಮಿಲಿಯನ್ 4ಜಿ ಬಳಕೆದಾರರನ್ನು ಹೊಂದಿದ್ದು, ಪ್ರತಿಸ್ಪರ್ಧಿ ಜಿಯೋಗಿಂತ ಹಿಂದೆ ಉಳಿದಿತ್ತು. ಆದರೆ ನವೆಂಬರ್‌ ವೇಳೆ 1.20 ಕೋಟಿ ಹೊಸ ಚಂದಾದಾರರನ್ನು ಹೊಂದುವ ಮೂಲಕ ಉತ್ತಮ ಬೆಳವಣಿಗೆ ಸಾಧಿಸಿದೆ.

English summary

Airtel Adds New 1.2 Crore 4G Users

1.2 crore new 4G users have joined in their Airtel network since october
Story first published: Saturday, December 21, 2019, 10:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X