ಏರ್ ಟೆಲ್ ನಿಂದಲೂ ಪ್ರೀಪೇಯ್ಡ್ ಗ್ರಾಹಕರಿಗೆ ದರ ಏರಿಕೆ; ಡಿಸೆಂಬರ್ 3ರಿಂದ ಜಾರಿ

ಇದೀಗ ಟೆಲಿಕಾಂ ಆಪರೇಟರ್ ಭಾರ್ತಿ ಏರ್ ಟೆಲ್ ನಿಂದ ಡಿಸೆಂಬರ್ 3ನೇ ತಾರೀಕಿನಿಂದ ಅನ್ವಯ ಆಗುವಂತೆ ಮೊಬೈಲ್ ಕರೆ ಹಾಗೂ ಡೇಟಾ ದರಗಳನ್ನು ಏರಿಕೆ ಮಾಡುವ ಬಗ್ಗೆ ಭಾನುವಾರ ಘೋಷಣೆ ಮಾಡಲಾಗಿದೆ. ಇದರಿಂದ ಪ್ರೀಪೇಯ್ಡ್ ಗ್ರಾಹಕರು ಕರೆ ಮತ್ತು ಡೇಟಾಗೆ ಹೆಚ್ಚು ಹಣ ತೆರಬೇಕಾಗುತ್ತದೆ. ವೊಡಾಫೋನ್ ಐಡಿಯಾದಿಂದ ದರ ಏರಿಕೆ ಮಾಡಿದ ಬೆನ್ನಿಗೇ ಏರ್ ಟೆಲ್ ದರ ಏರಿಕೆ ಬಗ್ಗೆ ಮಾಹಿತಿ ನೀಡಿದೆ.

ಭಾರ್ತಿ ಏರ್ ಟೆಲ್ ನಿಂದ ತನ್ನ ಮೊಬೈಲ್ ಗ್ರಾಹಕರಿಗೆ ಪರಿಷ್ಕೃತ ದರ ಯೋಜನೆ ಘೋಷಣೆ ಮಾಡಲಾಗಿದೆ. ಈ ಹೊಸ ದರವು ಡಿಸೆಂಬರ್ 3, 2019ರ ಮಂಗಳವಾರದಿಂದ ಅನ್ವಯ ಆಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಏರ್ ಟೆಲ್ ನಿಂದ ಪರಿಚಯಿಸಿರುವ ಹೊಸ ಯೋಜನೆಗಳ ಪ್ರಕಾರ, ಸದ್ಯಕ್ಕೆ ಇರುವ ಯೋಜನೆಗಳಿಗಿಂತ 42% ತನಕ ಹೆಚ್ಚುವರಿ ದರವನ್ನು ಪ್ರೀಪೇಯ್ಡ್ ಗ್ರಾಹಕರು 'ಅನ್ ಲಿಮಿಟೆಡ್' ವಿಭಾಗದ ಅಡಿಯಲ್ಲಿ ಪಾವತಿಸಬೇಕಾಗುತ್ತದೆ.

ಡಿ. 3ರಿಂದ ಏರ್ ಟೆಲ್ ನಿಂದಲೂ ಪ್ರೀಪೇಯ್ಡ್ ಗ್ರಾಹಕರಿಗೆ ದರ ಏರಿಕೆ

ಏರ್ ಟೆಲ್ ನ ಹೊಸ ಪ್ಲ್ಯಾನ್ ನಲ್ಲಿ ದರಗಳು ದಿನಕ್ಕೆ 50 ಪೈಸೆಯಿಂದ 2.85 ರುಪಾಯಿ ತನಕ ಏರಿಕೆ ಆಗಲಿದ್ದು, ಡೇಟಾ ಮತ್ತು ಕರೆ ಅನುಕೂಲಗಳು ಪಡೆಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರ ಜತೆಗೆ ಏರ್ ಟೆಲ್ ನ ಎಕ್ಸ್ ಸ್ಟ್ರೀಮ್ ನ ಪ್ರೀಮಿಯಂ ಕಂಟೆಂಟ್ ನ ಅನುಕೂಲಗಳನ್ನು ಪಡೆಯಬಹುದು ಎಂದು ತಿಳಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+