For Quick Alerts
ALLOW NOTIFICATIONS  
For Daily Alerts

2020ರಲ್ಲಿ ಬಾಕ್ಸಾಫೀಸ್ ನಲ್ಲಿ ಕಿಚ್ಚು ಹಚ್ಚಲು ಸಜ್ಜಾದ ಸ್ಟಾರ್ಸ್ ಯಾರು?

|

2019ರಲ್ಲಿ ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ಭರ್ಜರಿ ಬೆಳೆ ಎತ್ತಲಾಗಿದೆ. ದಕ್ಷಿಣ ಭಾರತದ ಚಿತ್ರರಂಗಕ್ಕೆ ಹೋಲಿಸಿದರೆ ಬಾಲಿವುಡ್ ನಲ್ಲಿ ಒಟ್ಟು ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ನೂರು ದಾಟುವುದಿಲ್ಲ. ಆದರೆ, ಮಾರುಕಟ್ಟೆ ವಿಷಯದಲ್ಲಿ ಹಿಂದಿ ಚಿತ್ರರಂಗ ವಿಸ್ತೃತವಾಗಿದೆ. 2019ರಲ್ಲಿ ಸುಮಾರು 80ಕ್ಕೂ ಅಧಿಕ ಚಿತ್ರಗಳು ಬಿಡುಗಡೆಯಾಗಿದ್ದು 4,300 ಕೋಟಿ ರು ಬಾಕ್ಸಾಫೀಸ್ ನಲ್ಲಿ ಗಳಿಕೆ ಲೆಕ್ಕ ಸಿಕ್ಕಿದೆ. 2020ರಲ್ಲಿ ಯಾವೆಲ್ಲ ಸ್ಟಾರ್ ನಟರು ದಾಖಲೆ ಮೊತ್ತದ ಗಳಿಕೆ ತೋರಿಸಬಹುದು ಎಂಬುದರ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ...

2020ರಲ್ಲಿ ಅಕ್ಷಯ್ ಕುಮಾರ್, ಅಜಯ್ ದೇವಗನ್, ಜಾನ್ ಅಬ್ರಾಹಂ ಹಾಗೂ ಕಾರ್ತಿಕ್ ಆರ್ಯನ್ ಪ್ರಮುಖ ರೇಸ್ ಕುದುರೆಗಳಾಗಿವೆ.. ಮಿಕ್ಕಂತೆ ಅಚ್ಚರಿಯ ಫಲಿತಾಂಶ ನೀಡಬಲ್ಲ ಸಾಮಾಜಿಕ ಕಳಕಳಿ ಚಿತ್ರಗಳನ್ನು ನಿರೀಕ್ಷಿಸಬಹುದು.

 

ಸಾವಿರಾರು ಕೋಟಿ ಮೌಲ್ಯದ ಆಸ್ತಿ ಇರುವ ಸಿನಿಮಾ ನಿರ್ಮಾಪಕರಿವರು...

ಅಕ್ಷಯ್ ಕುಮಾರ್ ಅವರ ನಟನೆಯ ಹೌಸ್ ಫುಲ್ 4, ಮಿಷನ್ ಮಂಗಲ್, ಗುಡ್ ನ್ಯೂಜ್ ಹಾಗೂ ಕೇಸರಿ ಸೂಪರ್ ಹಿಟ್ ಆಗಿದ್ದು, ಒಟ್ಟಾರೆ 765ಪ್ಲಸ್ ಕೋಟಿ ರು ಸಂಪಾದಿಸಿದೆ, ಇನ್ನೂ ಸಂಪಾದಿಸುತ್ತಲೇ ಇದೆ..

ಅಜಯ್, ಜಾನ್, ಕಾರ್ತಿಕ್ ಚಿತ್ರಗಳು

ಅಜಯ್, ಜಾನ್, ಕಾರ್ತಿಕ್ ಚಿತ್ರಗಳು

ಅಜಯ್ ದೇವಗನ್ ಅವರ ಟೋಟಲ್ ಧಮಾಲ್, ದೇ ದೇ ಪ್ಯಾರ್ ದೇ ಶತದಿನೋತ್ಸವ ಕಂಡಿದ್ದು 257.7 ಕೋಟಿ ರು ಗಳಿಸಿವೆ.. ಈಗ ತಾನಾಜಿ ಕೂಡಾ ಹಿಟ್ ಚಿತ್ರದ ಪಟ್ಟಿ ಸೇರಿದೆ.

ಜಾನ್ ಅಬ್ರಾಹಂ ಮೂರು ಚಿತ್ರಗಳು ತೆರೆ ಕಂಡಿದ್ದು, ಬಾಟ್ಲಾ ಹೌಸ್, ರೋಮಿಯೋ ಅಕ್ಬರ್ ವಾಲ್ಟರ್ ಹಾಗೂ ಪಾಗಲ್ ಪಂತಿ ಗಳಿಕೆ ಒಟ್ಟಾರೆ 175.5 ಕೋಟಿ ರು ನಷ್ಟಾಗಿದೆ.

ಯುವ ನಟ ಕಾರ್ತಿಕ್ ಆರ್ಯನ್ ಅಭಿನಯದ ಲುಕ್ಕಾ ಚುಪ್ಪಿ ಹಾಗೂ ಪತಿ ಪತ್ನಿ ಔರ್ ವೋ ಎರಡು ಜನಮೆಚ್ಚುಗೆ ಗಳಿಸಿದ್ದು, 185 ಕೋಟಿ ರು ಗಳಿಕೆ ಕಂಡಿದೆ.

2020ರ ನಿರೀಕ್ಷೆ 3+3+3

2020ರ ನಿರೀಕ್ಷೆ 3+3+3

ಈಗ ಈ ಸ್ಟಾರ್ ನಟರ 2020ರಲ್ಲಿ ಕನಿಷ್ಠ ಮೂರು ಸಿನಿಮಾವಾದರೂ ರಿಲೀಸ್ ಆಗಲಿದ್ದು, ಉತ್ತಮ ಫಲಿತಾಂಶ ನೀಡುವ ನಿರೀಕ್ಷೆ ಮೂಡಿಸಿದ್ದಾರೆ.

ಬಾಲಿವುಡ್ ನಟಿಯರು ಬಳಸುವ ಕೋಟಿ ಕೋಟಿ ಬೆಲೆಯ ಕಾರುಗಳಿವು

ಅಕ್ಷಯ್ ಕುಮಾರ್ ಅವರ ಸೂರ್ಯವಂಶಿ, ಲಕ್ಷ್ಮಿ ಬಾಂಬ್, ಪೃಥ್ವಿ ರಾಜ್ ಹಾಗೂ ಬಚ್ಚನ್ ಪಾಂಡೆ ಬಿಡುಗಡೆಗೆ ಸಿದ್ಧವಾಗಿದೆ. ಅಜಯ್ ದೇವಗನ್ ಅವರ ತಾನಾಜಿ ರಿಲೀಸ್ ಆಗಿದೆ, ಭುಜ್ ದಿ ಪ್ರೈಡ್ ಆಫ್ ಇಂಡಿಯಾ, ಮೈದಾನ್ ಬಿಡುಗಡೆಯಾಗಬೇಕಿದೆ. ಇದಲ್ಲದೆ, ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ನಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಬ್ರಹಾಂ ಸಾಹಸಭರಿತ ಚಿತ್ರಗಳು
 

ಅಬ್ರಹಾಂ ಸಾಹಸಭರಿತ ಚಿತ್ರಗಳು

ಜಾನ್ ಅಬ್ರಹಾಂ ಅವರು ಮುಂಬೈ ಸಾಗಾ, ಅಟ್ಯಾಕ್ ಹಾಗೂ ಸತ್ಯಮೇವ ಜಯತೇ 2 ಚಿತ್ರಗಳ ಮೇಲೆ ಭಾರಿ ನಿರೀಕ್ಷೆ ಹೊಂದಿದ್ದಾರೆ. ಕಾರ್ತಿಕ್ ಆರ್ಯನ್ ನಟನೆಯಲ್ಲಿ ಈ ವರ್ಷ ಎಲ್ಲಾ ಮೂರು ಸರಣಿ ಚಿತ್ರಗಳು ಬರುತ್ತಿರುವುದು ವಿಶೇಷವಾಗಿದೆ. ಲವ್ ಆಜ್ ಕಲ್ 2, ದೋಸ್ತಾನಾ 2 ಹಾಗೂ ಭೂಲ್ ಭುಲೈಯಾ 2 ನಲ್ಲಿ ಕಾರ್ತಿಕ್ ಮುಖ್ಯ ಪಾತ್ರದಲ್ಲಿದ್ದಾರೆ.

ನಿರೀಕ್ಷೆ: ಅಕ್ಷಯ್ ಕುಮಾರ್ ಹಾಗೂ ರೋಹಿತ್ ಶೆಟ್ಟಿ ಜೋಡಿ ಈ ವರ್ಷದ ಪ್ರಥಮಾರ್ಧದಲ್ಲೇ ಸೂರ್ಯವಂಶಿ ಚಿತ್ರವನ್ನು ತೆರೆಗೆ ತರುವ ಸಾಧ್ಯತೆಯಿದ್ದು, 200 ಕೋಟಿ ರು ಗಳಿಕೆ ನಿರೀಕ್ಷೆ ಹೊಂದಿದ್ದಾರೆ.

ಇವರ ಮೇಲೆ ಚಿತ್ರರಂಗದ ಬಾಕ್ಸಾಫೀಸ್ ಭವಿಷ್ಯ

ಇವರ ಮೇಲೆ ಚಿತ್ರರಂಗದ ಬಾಕ್ಸಾಫೀಸ್ ಭವಿಷ್ಯ

ದೇವಗನ್ ಅವರ ತಾನಾಜಿ ಈಗಾಗಲೇ 200 ಕೋಟಿ ರು ಗಳಿಸುವತ್ತ ದಾಪುಗಾಲಿರಿಸಿದೆ. ಬುಜ್ ದಿ ಪ್ರೈಡ್ ಆಫ್ ಇಂಡಿಯಾ ಆಗಸ್ಟ್ 15ಕ್ಕೆ ರಿಲೀಸ್ ಆಗುವ ಸಾಧ್ಯತೆಯಿದ್ದು, ಸುಲಭವಾಗಿ ಕೋಟಿ ರು ಗಳಿಕೆ ಕ್ಲಬ್ ಸೇರುವ ಸಾಧ್ಯತೆಯಿದೆ.

ಅಬ್ರಹಾಂ ನಟನೆಯಲ್ಲಿನ ಸಾಹಸಮಯ ಚಿತ್ರಗಳು ಸಾಲುಸಾಲಾಗಿ ತೆರೆ ಮೇಲೆ ಬರಲಿದೆ. ಅಟ್ಯಾಖ್ ಚಿತ್ರೀಕರಣ ಆರಂಭವಾಗಿದೆ. ಮಿಲಾಪ್ ಝವೇರಿಯ ಸತ್ಯಮೇವ ಜಯತೇ 2ಗೆ ಸಿದ್ಧತೆ ನಡೆದಿದೆ.

ಸೋನು ಕೆ ಟಿಟು ಕಿ ಸ್ವೀಟಿ, ಲುಕ್ಕಾ ಚುಪ್ಪಿ, ಪತಿ ಪತ್ನಿ ಔರ್ ವೋ ಸಿದ್ಧವಾಗುತ್ತಿದೆ. ಲವ್ ಆಜ್ ಕಲ್ 2 ಹದಿಹರೆಯದವರ ಮೆಚ್ಚುಗೆ ಗಳಿಸಿದೆ. ದೋಸ್ತಾನಾ 2, ಭುಲ್ ಬುಲೈಯಾ 2 ನಂತರ ಬರಲಿದೆ.

ಒಟ್ಟಾರೆ, 2020ರಲ್ಲಿ ಅಕ್ಷಯ್, ದೇವಗನ್, ಅಬ್ರಾಹಂ ಹಾಗೂ ಆರ್ಯನ್ ಮೇಲೆ ಹಿಂದಿ ಚಿತ್ರರಂಗದ ಬಾಕ್ಸಾಫೀಸ್ ಭವಿಷ್ಯ ನಿಂತಿದೆ ಎಂದು ಮಾರುಕಟ್ಟೆ ತಜ್ಞ ಜೋಗಿಂದರ್ ಟುಟೇಜಾ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಯಾವ ಚಿತ್ರದ ಕತೆ ಏನಾಗುವುದೋ ಭವಿಷ್ಯ ಪ್ರೇಕ್ಷಕರ ಕೈಲಿದೆ.

English summary

Akshay Kumar, Ajay Devgn, John Abraham and Kartik Aaryan set to fire at Box Office

2019 was a landmark year for Bollywood with 80-odd Bollywood releases contributing towards over Rs 4,300 crores at the Indian box office. In 2020 Akshay Kumar, Ajay Devgn, John Abraham and Kartik Aaryan set to fire at Box Office.
Story first published: Tuesday, January 21, 2020, 19:54 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more