For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಗೆ ಮಾರಾಟ ಮಾಡುವ ಮೂಲಕ ಒಪ್ಪಂದ ಮುರಿದಿದೆ ಫ್ಯೂಚರ್ ಎಂದ ಅಮೆಜಾನ್

By ಅನಿಲ್ ಆಚಾರ್
|

ಅಮೆಜಾನ್.ಕಾಮ್ ಕಂಪೆನಿಯು ಅದರ ಭಾರತದ ಪಾರ್ಟನರ್ ಫ್ಯೂಚರ್ ಗ್ರೂಪ್ ವಿರುದ್ಧ ಗುರುತರ ಆರೋಪ ಮಾಡಿದೆ. 3.4 ಬಿಲಿಯನ್ ಅಮೆರಿಕನ್ ಡಾಲರ್ ಗೆ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಗೆ ಮಾರಾಟ ಮಾಡಲು ಫ್ಯೂಚರ್ ಗ್ರೂಪ್ ಒಪ್ಪಂದ ಮಾಡಿಕೊಳ್ಳುವ ಮೂಲಕ ಒಪ್ಪಂದ ಉಲ್ಲಂಘನೆ ಮಾಡಿದೆ ಎಂಬುದು ಅಮೆಜಾನ್ ಆರೋಪ.

"ನಮ್ಮ ಒಪ್ಪಂದದ ಹಕ್ಕನ್ನು ಸ್ಥಾಪಿಸಲು ಹೆಜ್ಜೆಗಳನ್ನು ಇಡಲು ಆರಂಭಿಸಿದ್ದೇವೆ," ಎಂದು ಸೀಟಲ್ ಮೂಲದ ಇ ಕಾಮರ್ಸ್ ಕಂಪೆನಿ ಅಮೆಜಾನ್ ವಕ್ತಾರೆ ಇಮೇಲ್ ನಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ಈ ಪ್ರಕರಣ ನ್ಯಾಯಾಂಗದ ವ್ಯಾಪ್ತಿಯಲ್ಲಿ ಇರುವುದರಿಂದ ನಾವು ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಫ್ಯೂಚರ್ ಸಮೂಹದಿಂದ ತಕ್ಷಣಕ್ಕೆ ಯಾರೂ ಸಿಕ್ಕಿಲ್ಲ.

ರಿಲಯನ್ಸ್ ರೀಟೇಲ್ ನಿಂದ ಫ್ಯೂಚರ್ ಗ್ರೂಪ್ 24,713 ಕೋಟಿಗೆ ಖರೀದಿರಿಲಯನ್ಸ್ ರೀಟೇಲ್ ನಿಂದ ಫ್ಯೂಚರ್ ಗ್ರೂಪ್ 24,713 ಕೋಟಿಗೆ ಖರೀದಿ

ಕಳೆದ ವರ್ಷ ಅಮೆಜಾನ್ ನಿಂದ ಫ್ಯೂಚರ್ಸ್ ಗೆ ಸೇರಿದ ಲಿಸ್ಟ್ ಆಗದ ಸಂಸ್ಥೆಯೊಂದರಿಂದ 49%, ಅದರ ಜತೆಗೆ ಫ್ಯೂಚರ್ ರೀಟೇಲ್ ಲಿಮಿಟೆಡ್ ನಲ್ಲಿ ಹಕ್ಕು ಖರೀದಿಗಾಗಿ ಒಪ್ಪಿಗೆ ಆಗಿತ್ತು. ಅದು ಮೂರು ಹಾಗೂ ಹತ್ತು ವರ್ಷದ ನಂತರದ ಅವಧಿಯಲ್ಲಿ. ಆದರೆ ಎರಡು ತಿಂಗಳ ಹಿಂದೆ ಅಮೆಜಾನ್ ಪ್ರತಿಸ್ಪರ್ಧಿ ರಿಲಯನ್ಸ್ ನಿಂದ ಫ್ಯೂಚರ್ ಗ್ರೂಪ್ ನ ರೀಟೇಲ್, ಹೋಲ್ ಸೇಲ್, ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ವ್ಯವಹಾರ ಖರೀದಿಸುವ ಘೋಷಣೆ ಮಾಡಿತ್ತು.

ಅಮೆಜಾನ್ ನಿಂದ ಬೇಕಾದರೆ ಖರೀದಿ ಒಪ್ಪಂದ ರದ್ದು ಮಾಡಿಕೊಳ್ಳಬಹುದಾದ ಸಾಧ್ಯತೆ ಇರುತ್ತದೆ. ಆದರೆ ಈಗ ಫ್ಯೂಚರ್ ಗ್ರೂಪ್ ಮಾಡಿರುವುದು ನಿಯಮದ ಉಲ್ಲಂಘನೆಯಂತಿದೆ ಎಂದು ಹೇಳುತ್ತಾರೆ ವಿಶ್ಲೇಷಕರು.

ಭಾರತದಲ್ಲಿ ರೀಟೇಲ್ ಮಾರ್ಕೆಟ್ ಸಾಮರ್ಥ್ಯ 1 ಲಕ್ಷ ಕೋಟಿ ಅಮೆರಿಕನ್ ಡಾಲರ್ ಇದೆ. ಇಲ್ಲಿ ಅಮೆಜಾನ್ ತನ್ನ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಸ್ಥಳೀಯ ಸಹಭಾಗಿತ್ವ ಅತ್ಯಗತ್ಯ. ಫ್ಯೂಚರ್ ಜತೆಗೆ ಅಧಿಕೃತ ಆನ್ ಲೈನ್ ಮಾರಾಟ ಚಾನೆಲ್ ಆಗಿ ಒಪ್ಪಂದ ಆದ ಮೇಲೆ ಅಮೆಜಾನ್ ನಿಂದ ದಿನಸಿಯಿಂದ ಕಾಸ್ಮೆಟಿಕ್ ಹಾಗೂ ಬಟ್ಟೆಗಳ ತನಕ ಮಾರಾಟ ಮಾಡಬಹುದು.

ಇನ್ನು ಭಾರತದ ರೀಟೇಲ್ ಮಾರ್ಕೆಟ್ ಗೆ ಕಾಲಿಡಲು ಟಾಟಾ ಸಮೂಹ ಸಿದ್ಧವಾಗಿದೆ. ರಿಲಯನ್ಸ್ ರೀಟೇಲ್ ತನ್ನದೇ ಕಂಪೆನಿಯ ಇಪ್ಪತ್ತರಷ್ಟು ಪಾಲನ್ನು ಅಮೆಜಾನ್ ಗೆ ಮಾರಾಟ ಮಾಡುವ ಪ್ರಸ್ತಾವ ಇರಿಸಿತ್ತು ಎಂದು ಮೂಲಗಳು ಮಾಹಿತಿ ಹೊರಗಿಟ್ಟಿದ್ದವು. ಈಗ ಅಮೆಜಾನ್ ಕಾನೂನು ಕ್ರಮಕ್ಕೆ ಮುಂದಾದಲ್ಲಿ ರಿಲಯನ್ಸ್ ರೀಟೇಲ್ ಗೆ ಫ್ಯೂಚರ್ ಗ್ರೂಪ್ ಖರೀದಿ ವ್ಯವಹಾರದಲ್ಲಿ ತಡೆ ಆಗಲಿದೆ.

ಕಳೆದ ಆಗಸ್ಟ್ ನಲ್ಲಿ ರಿಲಯನ್ಸ್ ಹಾಗೂ ಫ್ಯೂಚರ್ ಮಧ್ಯೆ ವ್ಯವಹಾರ ಘೋಷಣೆ ಆಗಿತ್ತು. ಸದ್ಯಕ್ಕೆ ನಿಯಂತ್ರಕರ ಅನುಮತಿಗಾಗಿ ಕಾಯಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ರಿಲಯನ್ಸ್ ವಕ್ತಾರರು ನಿರಾಕರಿಸಿದ್ದಾರೆ. ಈ ಹಿಂದೆಯೇ ಅಮೆಜಾನ್ ನಿಂದ ಫ್ಯೂಚರ್ ಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿತ್ತು.

English summary

Amazon Alleges Future Group Violated Contract By Selling Stake To Reliance Industries

Amazon.com alleges that, its Indian partner Future Group violated a contract by entering into a $3.4 billion sale agreement with Reliance Industries.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X