For Quick Alerts
ALLOW NOTIFICATIONS  
For Daily Alerts

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗೆ ಹೀಗೊಂದು ಆಸೆ

|

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸಿಇಓ ಜೆಫ್ ಬೇಜೋಸ್ ಫುಟ್ಬಾಲ್ ತಂಡದ ಮಾಲೀಕನಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್ ರನ್ನ ಹಿಂದಿಕ್ಕಿ ವಿಶ್ವದ ನಂಬರ್ 1 ಶ್ರೀಮಂತ ವ್ಯಕ್ತಿಯಾಗಿರುವ ಜೆಫ್ ಬೇಜೋಸ್, ನ್ಯಾಷ್ ನಲ್ ಫುಟ್ಬಾಲ್ ಲೀಗ್(NFL) ತಂಡವನ್ನು ಹೊಂದಲು ಯೋಜಿಸುತ್ತಿದ್ದಾರೆಂದು ವರದಿಯಾಗಿದೆ.

2017ರಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ರನ್ನ ಹಿಂದಿಕ್ಕಿದ ಜೆಫ್ ಬೇಜೋಸ್, ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಸದ್ಯ 110 ಬಿಲಿಯನ್ ಅಮೆರಿಕನ್ ಡಾಲರ್‌ (ಭಾರತದ ರುಪಾಯಿಗಳಲ್ಲಿ 1 ಬಿಲಿಯನ್ ಗೆ 7147 ಕೋಟಿ 75 ಲಕ್ಷ ರುಪಾಯಿ) ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗೆ ಹೀಗೊಂದು ಆಸೆ

ಈಗಾಗಲೇ ಅಮೆರಿಕಾದ ಬಹುದೊಡ್ಡ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್ ಮಾಲೀಕನಾಗಿರುವ ಜೆಫ್ ಬೇಜೋಸ್, ಇತ್ತೀಚೆಗಷ್ಟೇ NFL ಕಮಿಷನರ್ ರೋಜರ್ ಗೂಡೆಲ್ ಸೂಟ್ನಿಂದ ಕೊನೆಯ ಸೂಪರ್‌ ಬೌಲ್ ವೀಕ್ಷಿಸಿದರು. ವಾಷಿಂಗ್ಟನ್ ಡಿ.ಸಿಯಲ್ಲಿ ನಿರ್ಮಿಸಲಾಗುವ ಅತ್ಯಾಧುನಿಕ ಕ್ರೀಡಾಂಗಣದ ನಿರ್ಮಾಣಕ್ಕೂ ಸಹಾಯ ಮಾಡಲು ಮುಂದಾಗಿದ್ದಾರೆ.

ನೈಟ್ ಫುಟ್ಬಾಲ್ ಅನ್ನು ಸ್ಟ್ರೀಮ್ ಮಾಡಲು ಅಮೆಜಾನ್ ಸಂಸ್ಥೆಯು ನ್ಯಾಷ್ ನಲ್ ಫುಟ್ಬಾಲ್ ಲೀಗ್(NFL) ಜೊತೆಗೆ ಪಾಲುದಾರಿಕೆ ಹೊಂದಿದೆ. ಜೊತೆಗೆ ವ್ಯವಹಾರದ ದೃಷ್ಟಿಕೋನದಿಂದ NFL ತಂಡವನ್ನು ಖರೀದಿಸಲು ಮನಸ್ಸು ಮಾಡಿದೆ.

English summary

Amazon Ceo Jeff Bezos Plans To Own NFL Team

Amazon Founder and CEO Jeff Bezos is reportedly planning to own a National football league team
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X