For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ಫುಡ್‌ ಡೆಲಿವರಿ ಸೇವೆ ವಿಸ್ತರಿಸಿದ ಅಮೆಜಾನ್: ಪ್ರೈಮ್ ಸದಸ್ಯರಿಗೆ ಫ್ರೀ ಡೆಲಿವರಿ

|

ಜನಪ್ರಿಯ ಆನ್‌ಲೈನ್ ತಾಣವಾದ ಅಮೆಜಾನ್ ಇಂಡಿಯಾವು ಬೆಂಗಳೂರಿನಲ್ಲಿ ತನ್ನ ಫುಡ್ ಡೆಲಿವರಿ ಸೇವೆ ಅಮೆಜಾನ್ ಫುಡ್ ಅನ್ನು ವಿಸ್ತರಿಸಿದೆ. ಈ ಹಿಂದೆ ಪ್ರಾಯೋಗಿಕವಾಗಿ ಆರಂಭಿಸಿದ್ದ ಸೇವೆಯನ್ನು ಇನ್ನು ಮುಂದೆ ವೈಟ್‌ಫೀಲ್ಡ್, ಎಚ್‌ಎಸ್‌ಆರ್, ಸರ್ಜಾಪುರ, ಕೋರಮಂಗಲ, ಇಂದಿರಾನಗರ, ಎಂಜಿ ರಸ್ತೆ, ಜಯನಗರ, ಜೆಪಿ ನಗರ, ವಿಜಯನಗರ ಸೇರಿದಂತೆ ಬೆಂಗಳೂರಿನ 62 ಪಿನ್‌ ಕೋಡ್‌ಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿದೆ.

ಅತ್ಯಂತ ಜನಪ್ರಿಯ ಹಾಗೂ ಶುಚಿಯಾಗಿರುವ ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳಿಂದ ತಮಗಿಷ್ಟವಾಗಿರುವ ತಿಂಡಿ-ತಿನಿಸುಗಳನ್ನು ಗ್ರಾಹಕರು ಆರ್ಡರ್ ಮಾಡಿ ಹೋಮ್ ಡೆಲಿವರಿ ಪಡೆಯಬಹುದಾಗಿದೆ.

ಬೆಂಗಳೂರಿನಲ್ಲಿ ಫುಡ್‌ ಡೆಲಿವರಿ ಸೇವೆ ವಿಸ್ತರಿಸಿದ ಅಮೆಜಾನ್

ಗ್ರಾಹಕರು ಅಮೆಜಾನ್ ಫುಡ್‌ಗೆ ಆರ್ಡರ್ ಮಾಡಿದಾಗ ಕನಿಷ್ಠ ಡೆಲಿವರಿ ಶುಲ್ಕ 19 ರೂ. ಪಾವತಿ ಮಾಡಬೇಕಾಗುತ್ತದೆ. ಆದರೆ ವಿಶೇಷ ಎಂದರೆ ಅಮೆಜಾನ್ ಪ್ರೈಮ್ ಸದಸ್ಯರು ತಮ್ಮ ಎಲ್ಲಾ ಆರ್ಡರ್‌ಗಳನ್ನು ಉಚಿತ ಡೆಲಿವರಿ ಪಡೆಯಬಹುದಾಗಿದೆ. ಜೊತೆಗೆ ಗ್ರಾಹಕರು ರೆಸ್ಟೋರೆಂಟ್‌ಗಳಿಂದ ಆಕರ್ಷಕ ಕೊಡುಗೆಗಳು ಮತ್ತು ಅಮೆಜಾನ್ ಪೇ ಕ್ಯಾಶ್‌ಬ್ಯಾಕ್‌ಗಳನ್ನು ಪಡೆಯಬಹುದಾಗಿದೆ.

ಭಾರತದಲ್ಲಿ $6.5 ಬಿಲಿಯನ್ ಹೂಡಿಕೆ ಮಾಡಲು ಬದ್ಧವಾಗಿರುವ ಅಮೆಜಾನ್‌, ಬೆಂಗಳೂರಿನಲ್ಲಿರುವ ಗ್ರಾಹಕರು ಕಟ್ಟುನಿಟ್ಟಾದ ಸುರಕ್ಷಾ ಪದ್ಧತಿಗಳನ್ನು ಪಾಲಿಸುತ್ತಿರುವ 2500 ಕ್ಕೂ ಹೆಚ್ಚು ರೆಸ್ಟೋರೆಂ ಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳಿಂದ ಇಂಡಿಯನ್, ಚೈನೀಸ್, ಇಟಾಲಿಯನ್, ಬರ್ಗರ್ಸ್‌, ಡೆಸರ್ಟ್ಸ್ ಸೇರಿದಂತೆ ವಿವಿಧ ರೀತಿಯ ಫುಡ್ ಆರ್ಡರ್ ಮಾಡಬಹುದಾಗಿದೆ.

English summary

Amazon India Expands Amazon Food Delivery Service In Bengaluru

Amazon India’s food delivery service which was launched in the midst of the pandemic in Bengaluru last May, is now available across 62 pincodes covering key localities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X