For Quick Alerts
ALLOW NOTIFICATIONS  
For Daily Alerts

Amazon Lay Offs : ಅಮೇಜಾನ್‌ನಿಂದ 10 ಸಾವಿರ ಉದ್ಯೋಗ ಕಡಿತ? ಎಲ್ಲೆಲ್ಲಿ ಎಷ್ಟು ಲೇ ಆಫ್?

|

ನವದೆಹಲಿ, ನ. 15: ಆರ್ಥಿಕ ಮುಗ್ಗಟ್ಟು, ಅನಿಶ್ಚಿತತೆ ಎದುರಿಸುತ್ತಿರುವ ಸಮಾಜದಲ್ಲಿ ಬಹುತೇಕ ಮಧ್ಯಮವರ್ಗದವರಿಗೆ ನೌಕರಿಯೇ ಜೀವನದ ಆಧಾರಸ್ತಂಭವಾಗಿ ಉಳಿದಿದೆ. ಹೀಗಿರುವಾಗ ವಿಶ್ವದ ದೈತ್ಯ ಕಂಪನಿಗಳಿಂದ ಉದ್ಯೋಗಕಡಿತದ ಭರಾಟೆ ಹೆಚ್ಚಾಗಿದೆ. ಹಲವಾರು ಕಂಪನಿಗಳು ಸಾಲು ಸಾಲಾಗಿ ತಮ್ಮ ನೌಕರವರ್ಗದ ಸಂಖ್ಯೆಯನ್ನು ಮೊಟಕುಗೊಳಿಸುತ್ತಲೇ ಇವೆ. ಟ್ವಿಟ್ಟರ್‌ನಲ್ಲಿ ಎಲಾನ್ ಮಸ್ಕ್ ಮುಲಾಜಿಲ್ಲದೇ ನೌಕರರನ್ನು ಕೆಲಸದಿಂದ ಬಿಡಿಸುತ್ತಿದ್ದಾರೆ. ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ ಬರೋಬ್ಬರಿ 11 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದಾಗಿ ಹೇಳಿದೆ. ಈಗ ಅಮೇಜಾನ್ ಸರದಿ.

ವಿಶ್ವದ ನಂಬರ್ ಒನ್ ಇ-ಕಾಮರ್ಸ್ ಕಂಪನಿ ಎನಿಸಿದ ಅಮೇಜಾನ್ 10 ಸಾವಿರ ಉದ್ಯೋಗಿಗಳನ್ನು ಲೇ ಆಫ್ ಮಾಡುವ ಚಿಂತನೆಯಲ್ಲಿದೆ. ಈ ವಾರವೇ ಇಷ್ಟು ಮಂದಿಯ ನೌಕರಿಗಳಿಗೆ ಕತ್ತರಿ ಬೀಳಬಹುದು ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ನಿನ್ನೆ ಸೋಮವಾರ ತನ್ನ ವರದಿಯಲ್ಲಿ ತಿಳಿಸಿದೆ.

ಅಕ್ಟೋಬರ್ ರಿಟೇಲ್ ಹಣದುಬ್ಬರ 3 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ, ಎಷ್ಟಿದೆ?ಅಕ್ಟೋಬರ್ ರಿಟೇಲ್ ಹಣದುಬ್ಬರ 3 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ, ಎಷ್ಟಿದೆ?

ಈ 10 ಸಾವಿರ ಸಂಖ್ಯೆಯು ಅಮೇಜಾನ್‌ನ ಒಟ್ಟಾರೆ ಸಿಬ್ಬಂದಿ ವರ್ಗದ ಶೇ. 3ರಷ್ಟು ಪ್ರಮಾಣವಾಗಿದೆ. ಭಾರತದಲ್ಲಿ ಎಷ್ಟು ಉದ್ಯೋಗಿಗಳ ಉದ್ಯೋಗಕ್ಕೆ ಕತ್ತರಿ ಬೀಳಲಿದೆ ಎಂಬುದು ಗೊತ್ತಾಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಸಿಗಬಹುದು. ಅಮೇಜಾನ್‌ನಲ್ಲಿ ಲೇ ಆಫ್ ಪ್ರಕ್ರಿಯೆ ನಡೆಯಬಹುದು ಎಂದು ಇತ್ತೀಚೆಗಷ್ಟೇ ಸುಳಿವು ಸಿಕ್ಕಿತ್ತು. ಮುಂದಿನ ಕೆಲ ತಿಂಗಳು ಕಂಪನಿಗೆ ನೇಮಕಾತಿ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುವುದಾಗಿ ಅಮೇಜಾನ್ ಇತ್ತೀಚೆಗೆ ಹೇಳಿತ್ತು.

ಏನು ಕಾರಣ?

ಏನು ಕಾರಣ?

ಅಮೇಜಾನ್ ತನ್ನ ಸಿಬ್ಬಂದಿವರ್ಗ ಕಡಿತಗೊಳಿಸಲು ಸಹಜ ಕಾರಣ ಆರ್ಥಿಕ ಮುಗ್ಗಟ್ಟು. ಬಹಳಷ್ಟು ಅಮೆರಿಕನ್ ಕಂಪನಿಗಳು ಸಾಲು ಸಾಲಾಗಿ ಸಂಕಷ್ಟ ಎದುರಿಸುತ್ತಿವೆ. ಮೈಕ್ರೋಸಾಫ್ಟ್, ಇಂಟೆಲ್‌ನಂಥ ಐಟಿ ಕಂಪನಿಗಳು ಆರ್ಥಿಕ ಬಿಕ್ಕಟ್ಟಿನ ಬಿಸಿಗೆ ಬಸವಳಿದು ಹೋಗಿವೆ. ರಜಾ ಸೀಸನ್‌ನಲ್ಲೂ ಅಮೇಜಾನ್‌ಗೆ ನಿರೀಕ್ಷಿತ ಬಿಸಿನೆಸ್ ಸಿಕ್ಕಿಲ್ಲ. ಆರ್ಥಿಕ ಹಿಂಜರಿತದ ಪರಿಣಾಮವಾಗಿ ಜನರ ಜೇಬಲ್ಲಿ ಹಣ ಕಡಿಮೆ ಇದೆ, ಅಥವಾ ಜನರು ವೆಚ್ಚಕ್ಕೆ ಹೆದರಿ ಉಳಿತಾಯದ ಮೊರೆಹೋಗಿರಬಹುದು. ಇದು ಅಮೇಜಾನ್‌ನ ವ್ಯವಹಾರಕ್ಕೆ ಕುತ್ತು ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಷೇರುಪೇಟೆಯಲ್ಲಿ ಅಮೇಜಾನ್ ಕಳೆಗುಂದಿದೆ. ಅಮೇಜಾನ್ ಷೇರು ಶೇ. 40ರಷ್ಟು ಕುಸಿತ ಕಂಡಿದೆ.

 

ಡಿವೈಸ್ ಯೂನಿಟ್‌ನಲ್ಲಿ ನಷ್ಟ

ಡಿವೈಸ್ ಯೂನಿಟ್‌ನಲ್ಲಿ ನಷ್ಟ

ವರದಿಗಳ ಪ್ರಕಾರ ಅಮೇಜಾನ್‌ನಲ್ಲಿ ಅತಿಹೆಚ್ಚು ಉದ್ಯೋಗನಷ್ಟ ಅನುಭವಿಸುವುದು ಅದರ ಡಿವೈಸಸ್ ಯೂನಿಟ್ ಎನ್ನಲಾಗಿದೆ. ಅಮೇಜಾನ್‌ನ ಬಹಳ ಜನಪ್ರಿಯ ಅಲೆಕ್ಸಾ ಸೇವೆ ನೀಡುವುದು ಇದೇ ಡಿವೈಸ್ ಯೂನಿಟ್‌ನಲ್ಲಿ. ಅಲೆಕ್ಸಾ ಎಂಬುದು ವಾಯ್ಸ್ ಅಸಿಸ್ಟೆಂಟ್ ಸಾಧನ. ನಮ್ಮ ಧ್ವನಿ ನಿರ್ದೇಶನವನ್ನು ಆಲಿಸಿ ಕೆಲಸ ಮಾಡುವ ಸ್ವಯಂಚಾಲಿತ ವ್ಯವಸ್ಥೆ ಅದು. ಬಹಳ ಮಹತ್ವಾಕಾಂಕ್ಷೆಯಿಂದ ಅಮೇಜಾನ್ ಈ ಸಾಧನವನ್ನು ಅಭಿವೃದ್ಧಿಪಡಿಸಿದೆ. ಆದರೆ, ಈ ಸಾಧನದ ನಿರ್ವಹಣೆ ಬಹಳ ದುಬಾರಿಯಾಗಿ ಪರಿಣಮಿಸಿದೆ. ಅಮೇಜಾನ್‌ನ ಡಿವೈಸ್ ಯೂನಿಟ್ ಒಂದು ವರ್ಷದಲ್ಲಿ 5 ಬಿಲಿಯನ್ ಡಾಲರ್‌ನಷ್ಟು ಆಪರೇಟಿಂಗ್ ಲಾಸ್ ಅನುಭವಿಸುತ್ತಿದೆ. ಹಾಗಂತ ಕಂಪನಿ ಇತ್ತೀಚೆಗೆ ಹೇಳಿಕೊಂಡಿತ್ತು.

ಅಮೇಜಾನ್ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಅಲೆಕ್ಸಾವನ್ನು ಜನರು ಅಪ್ಪಿಕೊಳ್ಳುತ್ತಿಲ್ಲ. ಕೆಲವೇ ಸಭೆ ಸಮಾರಂಭಗಳಿಗೆ ಅಲೆಕ್ಸಾ ಬಳಕೆ ಆಗುತ್ತಿದೆಯಂತೆ. ಹೀಗಾಗಿ, ಹೊಸ ರೀತಿಯ ಸಾಧನಗಳನ್ನು ಹೊರತರುವ ನಿಟ್ಟಿನಲ್ಲಿ ಅಮೇಜಾನ್ ಗಮನ ಹರಿಸುತ್ತಿದೆ.

ಈಗ ಉದ್ಯೋಗಕಡಿತವಾಗುತ್ತಿರುವುದು ಹೆಚ್ಚಾಗಿ ಇದೇ ಡಿವೈಸ್ ಯೂನಿಟ್‌ನಲ್ಲೇ. ಅದರ ರೀಟೇಲ್ ವಿಭಾಗ ಮತ್ತು ಎಚ್‌ಆರ್ ವಿಭಾಗಗಳಲ್ಲೂ ಸಾಕಷ್ಟು ಉದ್ಯೋಗನಷ್ಟ ಆಗಬಹುದು ಎಂದು ವರದಿಗಳು ಹೇಳುತ್ತಿವೆ.

 

ಬೇರೆ ಕಂಪನಿಗಳ ಉದ್ಯೋಗಕಡಿತ ಭರಾಟೆ

ಬೇರೆ ಕಂಪನಿಗಳ ಉದ್ಯೋಗಕಡಿತ ಭರಾಟೆ

ಹಲವು ಅಮೆರಿಕನ್ ಕಂಪನಿಗಳು ಸಿಬ್ಬಂದಿವರ್ಗದ ಸಂಖ್ಯೆ ಕಡಿಮೆ ಮಾಡಲು ನಿರ್ಧರಿಸಿವೆ. ಅಲ್ಲಲ್ಲಿ ಬಂದಿರುವ ವರದಿಗಳಿಂದ ಸಿಕ್ಕ ಮಾಹಿತಿ ಪ್ರಕಾರ, ಯಾವ್ಯಾವ ಕಂಪನಿಗಳು ಎಷ್ಟೆಷ್ಟು ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಬಹುದು ಎಂಬ ಅಂದಾಜು ಇಲ್ಲಿದೆ.

ಮೆಟಾ: 11 ಸಾವಿರಕ್ಕೂ ಹೆಚ್ಚು (ಶೇ. 13ರಷ್ಟು ಸಿಬ್ಬಂದಿ)
ಮೈಕ್ರೋಸಾಫ್ಟ್: ಸುಮಾರು 1500-2000 ಮಂದಿ (ಶೇ. 1 ಸಿಬ್ಬಂದಿ)
ಇಂಟೆಲ್: ಶೇ. 20 ಸಿಬ್ಬಂದಿ
ಟ್ವಿಟ್ಟರ್: ಶೇ. 35 ಸಿಬ್ಬಂದಿ
ಸ್ನ್ಯಾಪ್: ಶೇ. 20 ಸಿಬ್ಬಂದಿ
ಬೆಟರ್: ಶೇ. 50 ಸಿಬ್ಬಂದಿ

ರಷ್ಯಾದ ಕೊಂಡೆ ನಾಸ್ಟ್ ಎಂಬ ಮಾಧ್ಯಮ ಸಂಸ್ಥೆ ತನ್ನ ಶೇ. 90ರಷ್ಟು ನೌಕರರನ್ನು ಕೆಲಸದಿಂದ ಕಿತ್ತುಹಾಕಿ ಸದ್ದು ಮಾಡಿತು. ಅಮೆರಿಕದ ಇ-ಟ್ಯಾಕ್ಸಿಯಾದ ಲಿಫ್ಟ್ ತನ್ನ ಸೇ. 13ರಷ್ಟು ಸಿಬ್ಬಂದಿವರ್ಗ ಕಡಿತಗೊಳಿಸಿತು. ಸೀಗೇಟ್, ಫಿಲಿಪ್ಸ್, ವಾಲ್ಮಾರ್ಟ್, ಮಾರ್ಗನ್ ಸ್ಟಾನ್ಲೀ, ಜಾನ್ಸನ್ ಅಂಡ್ ಜಾನ್ಸನ್, ನೆಟ್‌ಫ್ಲಿಕ್ಸ್, ವಾರ್ನರ್ ಬ್ರದರ್ರ್ಸ್, ಟಿಕ್ ಟಾಕ್, ಫೋರ್ಡ್, ಕಾಯಿನ್‌ಬೇಸ್ ಇತ್ಯಾದಿ ಹಲವು ಕಂಪನಿಗಳು ಕನಿಷ್ಠ 100ಕ್ಕೂ ಹೆಚ್ಚು ನೌಕರರನ್ನು ಮನೆಗೆ ಕಳುಹಿಸಿವೆ.

 

English summary

Amazon May Layoffs 10,000 Employees Say Reports

World's number one e-commerce company Amazon is reportedly planning to lay off over 10 thousand employees. The most job loss would be in Amazons devices unit.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X