For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಸ್ಥಾಪಕ ಬೆಜೋಸ್ ಭಾರತ ಭೇಟಿ ವೇಳೆ ಪ್ರತಿಭಟನೆಗೆ ನಿರ್ಧಾರ

|

ಅಮೆಜಾನ್.ಕಾಮ್ ಸ್ಥಾಪಕ ಜೆಫ್ ಬೆಜೋಸ್ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ವರ್ತಕರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಅಮೆಜಾನ್ ನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಆ ಕಾರ್ಯಕ್ರಮದ ಮೂಲಕ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಗಳ ಜತೆಗೆ ಸಂಪರ್ಕ ಸಾಧಿಸುವ ಉದ್ದೇಶ ಇರಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಅಧಿಕಾರಿಗಳ ಜತೆ ಭೇಟಿಗೂ ಸಮಯ ಕೇಳಿದ್ದಾರೆ. ಇ ಕಾಮರ್ಸ್ ನಿಯಮಾವಳಿಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬೆಜೋಸ್ ಆಗಮನದ ದಿನಾಂಕ, ಭಾರತದಲ್ಲಿ ಎಷ್ಟು ಸಮಯ ಇರಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ.

ಅಮೆಜಾನ್ ನ ಜೆಫ್ ಬೆಜೋಸ್ ರಿಂದ ಮೋದಿ ಭೇಟಿ ಸಾಧ್ಯತೆಅಮೆಜಾನ್ ನ ಜೆಫ್ ಬೆಜೋಸ್ ರಿಂದ ಮೋದಿ ಭೇಟಿ ಸಾಧ್ಯತೆ

ಬೆಜೋಸ್ ಭೇಟಿ ವಿಚಾರವನ್ನು ಅಮೆಜಾನ್ ಕೂಡ ಖಾತ್ರಿ ಪಡಿಸಿಲ್ಲ. ಇನ್ನು ಪ್ರಧಾನಮಂತ್ರಿ ಕಾರ್ಯಾಲಯದಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭಾರತದಲ್ಲಿ ಬೆಜೋಸ್ ಇರುವಷ್ಟು ಸಮಯವೂ ಭಾರತದ ಮುನ್ನೂರು ನಗರಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ದ ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ತಿಳಿಸಿದೆ.

ಅಮೆಜಾನ್ ಸ್ಥಾಪಕ ಬೆಜೋಸ್ ಭಾರತ ಭೇಟಿ ವೇಳೆ ಪ್ರತಿಭಟನೆಗೆ ನಿರ್ಧಾರ

ಈ ಸಂಘಟನೆಗೆ ಏಳು ಕೋಟಿ ಸದಸ್ಯರಿದ್ದಾರೆ. ಅಂದ ಸಿಎಐಟಿಯಿಂದ ಕಳೆದ ಐದು ವರ್ಷಗಳಿಂದ ಅಮೆಜಾನ್, ಫ್ಲಿಪ್ ಕಾರ್ಟ್ ವಿರುದ್ಧ ಹೋರಾಟ ನಡೆಯುತ್ತಲೇ ಇದೆ. ಕನಿಷ್ಠ ಒಂದು ಲಕ್ಷ ಮಂದಿಯೊಂದಿಗೆ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯು ತಿಳಿಸಿದೆ.

ಅಮೆಜಾನ್, ಫ್ಲಿಪ್ ಕಾರ್ಟ್ ನೀಡುತ್ತಿರುವ ಭಾರೀ ಪ್ರಮಾಣದ ರಿಯಾಯಿತಿ, ಆಫರ್ ಗಳಿಂದ ನಷ್ಟ ಉಂಟಾಗುತ್ತಿದೆ ಎಂದು ವರ್ತಕರು ಆರೋಪ ಮಾಡಿದ್ದಾರೆ. ಆದರೆ ಅಮೆಜಾನ್- ಫ್ಲಿಪ್ ಕಾರ್ಟ್ ಎರಡೂ ಕಂಪೆನಿಗಳು ಇದನ್ನು ಅಲ್ಲಗಳೆದಿದೆ.

English summary

Amazon's Jeff Bezos To Face Indiawide Agitation From Traders During His Trip

CAIT (Confederation of All India Traders), a group representing 70 million retailers, said it will protest across 300 cities during Bezos stay in India.
Story first published: Sunday, January 12, 2020, 14:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X