For Quick Alerts
ALLOW NOTIFICATIONS  
For Daily Alerts

ಈ ಕಂಪನಿಯ ಉದ್ಯೋಗಿಗಳಿಗೆ 35 ಲಕ್ಷ ರುಪಾಯಿ ಕ್ರಿಸ್‌ಮಸ್ ಬೋನಸ್‌

|

ಅಮೆರಿಕಾದ ಮೇರಿಲ್ಯಾಂಡ್ ಮೂಲದ ಸೇಂಟ್ ಜಾನ್ ಪ್ರಾಪರ್ಟಿಸ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. ರಾತ್ರಿ ಊಟಕ್ಕೆಂದು ಆಹ್ವಾನಿಸಿದ್ದ ಕಂಪನಿಯು ತನ್ನ ಪ್ರತಿ ಉದ್ಯೋಗಿಗೆ ಲಕ್ಷಗಟ್ಟಲೆ ಹಣವನ್ನು ಕ್ರಿಸ್‌ಮಸ್ ಬೋನಸ್ ನೀಡಿದೆ.

ಮೇರಿಲ್ಯಾಂಡ್ ಮೂಲದ ಕಂಪನಿ ಸೇಂಟ್ ಜಾನ್ ಪ್ರಾಪರ್ಟಿಸ್ ಮಾಲೀಕರಾದ 81 ವರ್ಷದ ಎಡ್ವರ್ಡ್ ಸೇಂಟ್ ಜಾನ್, ಕಂಪನಿಯ ಲಾಭದ ಸಂಭ್ರಮಾಚರಣೆಗಾಗಿ ತನ್ನ 200 ಉದ್ಯೋಗಿಗಳನ್ನು ರಾತ್ರಿ ಊಟಕ್ಕೆ ಆಹ್ವಾನಿಸಿದ್ದರು. ಎಲ್ಲಾ ಉದ್ಯೋಗಿಗಳು ಊಟವನ್ನು ಮುಗಿಸಿ ಸಂಭ್ರಮಾಚರಣೆಯನ್ನು ಎಂಜಾಯ್ ಮಾಡಿದರು. ಇದರ ಜೊತೆಗೆ ಉದ್ಯೋಗಿಗಳಿಗೆ ಬಹುದೊಡ್ಡ ಗಿಫ್ಟ್ ಸಿಕ್ಕಿದೆ.

ಉದ್ಯೋಗಿಗಳಿಗೆ ಸಪ್ರೈಸ್ ಗಿಫ್ಟ್ ನೀಡಿದ ಮಾಲೀಕ

ಉದ್ಯೋಗಿಗಳಿಗೆ ಸಪ್ರೈಸ್ ಗಿಫ್ಟ್ ನೀಡಿದ ಮಾಲೀಕ

ರಾತ್ರಿ ಊಟ ಮುಗಿದ ಬಳಿಕ ಇನ್ನೇನು ಮನೆಗೆ ತೆರಳಲು ರೆಡಿಯಾಗುತ್ತಿದ್ದ ಉದ್ಯೋಗಿಗಳಿಗೆ ಮಾಲೀಕ ಸಪ್ರೈಸ್ ಗಿಫ್ಟ್ ನೀಡಿದರು. ಪ್ರತಿಯೊಬ್ಬರಿಗೂ ಕೆಂಪು ಬಣ್ಣದ ಮುಚ್ಚಿದ ಲಕೋಟೆಯನ್ನು ನೀಡಿದರು. ಉದ್ಯೋಗಿಗಳು ಇದರಲ್ಲಿ ಅಬ್ಬಬ್ಬಾ ಅಂದ್ರೆ ಏನು ಇರಬಹುದು ಅಂದುಕೊಂಡಿದ್ದರು. ಆದ್ರೆ ಆನಂತರ ಅದನ್ನು ತೆರೆದು ನೋಡಿದ ಉದ್ಯೋಗಿಗಳು ದಿಗ್ಭ್ರಮೆಗೊಂಡಿದ್ದಾರೆ.

ಪ್ರತಿಯೊಬ್ಬರಿಗೂ 35 ಲಕ್ಷ ರುಪಾಯಿ ಬೋನಸ್

ಪ್ರತಿಯೊಬ್ಬರಿಗೂ 35 ಲಕ್ಷ ರುಪಾಯಿ ಬೋನಸ್

ಕೆಂಪು ಬಣ್ಣದ ಮುಚ್ಚಿದ ಲಕೋಟೆಯನ್ನು ನೀಡಿರುವ ಕಂಪನಿ ಮಾಲೀಕ ಎಡ್ವರ್ಡ್ ಸೇಂಟ್ ಜಾನ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದ್ದಾರೆ. ಇದಕ್ಕೆ ಕಾರಣ ಪ್ರತಿಯೊಂದು ಲಕೋಟೆಯಲ್ಲಿದ್ದ ಸಪ್ರೈಸ್ ಗಿಫ್ಟ್. ಉದ್ಯೋಗಿಗಳಿಗೆ ಸಿಕ್ಕ ಪ್ರತಿ ಲಕೋಟೆಯಲ್ಲಿ ಇದ್ದಿದ್ದು 38,000 ಬ್ರಿಟನ್ ಪೌಂಡ್ಸ್ (ಭಾರತದ ರುಪಾಯಿಯಲ್ಲಿ ಸುಮಾರು 35 ಲಕ್ಷ). ಇಷ್ಟು ದೊಡ್ಡ ಮಟ್ಟಿನ ಹಣ ಕಂಡಿದ್ದೇ ತಡ ಪ್ರತಿಯೊಬ್ಬರು ಕುಣಿದು ಕುಪ್ಪಳಿಸಿದ್ದಾರೆ.

ತನ್ನ ಗುರಿ ತಲುಪಿರುವ ಸೇಂಟ್ ಜಾನ್ ಪ್ರಾಪರ್ಟಿಸ್

ತನ್ನ ಗುರಿ ತಲುಪಿರುವ ಸೇಂಟ್ ಜಾನ್ ಪ್ರಾಪರ್ಟಿಸ್

ಕಂಪನಿಯು ಅಂದುಕೊಂಡಿದ್ದ ಗುರಿಯನ್ನು ತಲುಪಿದ್ದಕ್ಕೆ 200 ಉದ್ಯೋಗಿಗಳನ್ನು ಮಾಲೀಕ ಹಾಗೂ ಕಂಪನಿ ಅಧ್ಯಕ್ಷ ಎಡ್ವರ್ಡ್ ಊಟಕ್ಕೆ ಆಹ್ವಾನಿಸಿದ್ದರು. ಪ್ರತಿಯೊಬ್ಬರು ಪಟ್ಟ ಶ್ರಮಕ್ಕೆ ಗಿಫ್ಟ್ ನೀಡಬೇಕೆಂದು ಮೊದಲೇ ಅಂದುಕೊಂಡಿದ್ದರಂತೆ. ಹೀಗಾಗಿ ಈ ಸಪ್ರೈಸ್ ಗಿಫ್ಟ್ ನೀಡಿದ್ದಾರೆ.

'ನಮ್ಮ ಪ್ರತಿಯೊಬ್ಬ ಉದ್ಯೋಗಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇದಕ್ಕೆ ಪ್ರತಿಫಲವಾಗಿ ಉತ್ತಮವಾದದನ್ನು ನಾನು ನೀಡಲು ಸಾಧ್ಯವಿಲ್ಲ. ನಾನು ದೋಣಿಯನ್ನು ಖರೀದಿಸಿರಬಹುದು. ಆದರೆ ಅವರು ದೋಣಿಯನ್ನು ಮುನ್ನೆಡೆಸುತ್ತಿದ್ದಾರೆ. ಅವರಿಂದಲೇ ಇದೆಲ್ಲಾ ಸಾಧ್ಯ, ತಂಡವಿಲ್ಲದೆ ನಾವು ಏನು ಅಲ್ಲ' ಎಂದು ಕಂಪನಿ ಮಾಲೀಕ ಎಡ್ವರ್ಡ್ ತಮ್ಮ ಮನದಾಳದ ಮಾತುಗಳನ್ನು ತಿಳಿಸಿದ್ದಾರೆ.

 

ಉದ್ಯೋಗಿಗಳಿಗೆ ಮುಗಿಲೆತ್ತರದ ಸಂತಸ

ಉದ್ಯೋಗಿಗಳಿಗೆ ಮುಗಿಲೆತ್ತರದ ಸಂತಸ

'ಇಂದು ರಾತ್ರಿ ಏನಾಯಿತು ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ, ನಿಜಕ್ಕೂ ನಮಗೆಲ್ಲರಿಗೂ ಆಶ್ಚರ್ಯದ ಜೊತೆಗೆ ಮುಗಿಲೆತ್ತರದ ಸಂತಸ ತಂದಿದೆ. ಇದು ನಮ್ಮ ಜೀವನವನ್ನೇ ಬದಲಾಯಿಸಬಹುದು' ಎಂದು ಉದ್ಯೋಗಿಯೊಬ್ಬರು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಎಡ್ವರ್ಡ್ ಮಾಲೀಕತ್ವದ ಕಂಪನಿಯ ರಿಯಲ್ ಎಸ್ಟೇಟ್‌ ಹೂಡಿಕೆಗಳ ಮೌಲ್ಯ 3.5 ಬಿಲಿಯನ್ ಅಮೆರಿಕನ್ ಡಾಲರ್‌ (ಭಾರತದ ರುಪಾಯಿಗಳಲ್ಲಿ ಸುಮಾರು 24,751 ಕೋಟಿ) ನಷ್ಟಿದೆ.

 

English summary

America Company Gives Employees 8 Million Pounds Christmas Bonus

US maryland based company left his 200 employees shocked and by announing 8 million pounds christmas bonus.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X