For Quick Alerts
ALLOW NOTIFICATIONS  
For Daily Alerts

America IT Company Layoffs: ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ: ಲಕ್ಷಾಂತರ ವೃತ್ತಿಪರರ ಬದುಕು ಅತಂತ್ರ

|

ವಾಷಿಂಗ್ಟನ್‌, ಜನವರಿ 23: ಅಮೆರಿಕಲ್ಲಿ ಐಟಿ ಕಂಪನಿಗಳಲ್ಲಿ ದಿಢೀರ್ ಉದ್ಯೋಗ ಕಡಿತದಿಂದಾಗಿ ಅಲ್ಲಿರುವ ಸಾವಿರಾರು ಭಾರತೀಯ ಐಟಿ ಉದ್ಯೋಗಿಗಳ ಬದುಕು ಬೀದಿಗೆ ಬಿದ್ದಿದೆ. ಅವರೆಲ್ಲರು ಕೆಲಸವಿಲ್ಲದೇ, ಆ ರಾಷ್ಟ್ರದಲ್ಲಿ ಇರಲಾಗದೇ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಕಳೆದ ವರ್ಷ 2022 ನವೆಂಬರ್‌ನಿಂದ ಈವರೆಗೆ ಸುಮಾರು ಎರಡೂವರೆ ತಿಂಗಳಲ್ಲಿ ಅಂದಾಜು ಎರಡು ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಇವರಲ್ಲಿ ಸುಮಾರು ಶೇ. 40ರಷ್ಟು ಮಂದಿ ಭಾರತೀಯರು ಎಂದು ವಾಷಿಂಗ್ಟನ್ ಮಾಧ್ಯಮ ವರದಿ ಮಾಡಿದೆ.

ಪಾನ್ ಜತೆ ಆಧಾರ್‌ ಲಿಂಕ್‌ ಕಡ್ಡಾಯ, ಇಲ್ಲವಾದರೆ ಪಾನ್ ನಿಷ್ಕ್ರೀಯ: ಐಟಿ ಇಲಾಖೆ ಎಚ್ಚರಿಕೆಪಾನ್ ಜತೆ ಆಧಾರ್‌ ಲಿಂಕ್‌ ಕಡ್ಡಾಯ, ಇಲ್ಲವಾದರೆ ಪಾನ್ ನಿಷ್ಕ್ರೀಯ: ಐಟಿ ಇಲಾಖೆ ಎಚ್ಚರಿಕೆ

ಅಮೆರಿಕದಲ್ಲಿ ಫೇಸ್‌ಬುಕ್‌, ಅಮೆಜಾನ್, ಗೂಗಲ್‌ ಹಾಗೂ ಮೈಕ್ರೊಸಾಫ್ಟ್‌ನಂತ ದೈತ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರಲ್ಲಿ ಬಹುತೇಕ ಮಂದಿ ಉದ್ಯೋಗದ ಆಧಾರದಲ್ಲಿ ಎಚ್‌ 1ಬಿ ಮತ್ತು ಎಲ್‌1 ವೀಸಾ ಪಡೆದವೇ ಆಗಿದ್ದಾರೆ. ಐಟಿ ಕಂಪನಿಗಳು ತಮ್ಮ ಸಿಬ್ಬಂದಿಯನ್ನು ದಿಢೀರನೇ ಸೇವೆಯಿಂದ ವಜಾಗೊಳಿಸಿದ್ದರಿಂದ ಅವರೆಲ್ಲರು ಅಮೆರಿಕದಲ್ಲಿ ನೆಲೆಸಲು ತುರ್ತಾಗಿ ಬೇರೊಂದು ಉದ್ಯೋಗ ಹುಡುಕಬೇಕಿದೆ.

ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ: ಲಕ್ಷಾಂತರ ಮಂದಿ ಬದುಕು ಅತಂತ್ರ

ಆ ಮೂಲಕ ವೀಸಾ ಊರ್ಜಿಗೊಳಿಸಿಕೊಳ್ಳಬೇಕಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅನೇಕ ಕಂಪನಿಗಳಲ್ಲಿ ವಜಾ ಪ್ರಕ್ರಿಯೆ ನಡೆದಿವೆ ಎಂದು ಕೆಲಸ ಕಳೆದುಕೊಂಡ ಉದ್ಯೋಗಿಗಳು ಅಳಲು ತೋಡಿಕೊಂಡಿದ್ದಾರೆ.

ಎಚ್‌ 1ಬಿ ವೀಸಾ ಇದು ವಲಸಿಗಯೇತರ ವೀಸಾ ಆಗಿದ್ದು, ಇದನ್ನು ಕೆಲಸದ ಆಧಾರದಲ್ಲಿ ಪಡೆಯಬಹುದಾಗಿದೆ. ಅಮೆರಿಕದದಲ್ಲಿನ ದೈತ್ಯ ಕಂಪನಿಗಳು ವ್ಯಕ್ತಿ ಜ್ಞಾನ, ಕೌಶಲ್ಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಈ ವೀಸಾ ಉಪಯುಕ್ತ ಎನ್ನಲಾಗುತ್ತಿದೆ. ಇನ್ನೂ ವಿಶಿಷ್ಟ ಜ್ಞಾನ, ವ್ಯವಸ್ಥಾಪನಾ ವಿಭಾಗದಲ್ಲಿ ಉದ್ಯೋಗ ಒದಗಿಸುವ ಕಂಪನಿಗಳು ತಮ್ಮದೇ ಇತರ ಶಾಖೆಗಳಿಗೆ ವರ್ಗಾವಣೆ ಮಾಡಲು ಪೂರಕವಾಗಿ ಈ ಎಲ್‌ 1ಎ ಹಾಗೂ ಎಲ್‌ 1ಬಿ ವೀಸಾ ನೀಡಿರುತ್ತವೆ.

ಅಮೆರಿಕದಲ್ಲಿ ಕೆಲಸ ಕಳೆದುಕೊಂಡು ಬಹುತೇಕ ಭಾರತೀಯರು ಈ ವಲಸಿಗಯೇತರ ವೀಸಾ ಪಡೆದವರಾಗಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ತಾಂತ್ರಿಕ ಕ್ಷೇತ್ರದಲ್ಲಿ ದೊಡ್ಡಮಟ್ಟದ ಉದ್ಯೋಗಿಗಳ ಕಡಿತವಾಗಿದೆ. ಭಾರತ ಸೇರಿದಂತೆ ಬೇರೆ ದೇಶಗಳ ಸಾಕಷ್ಟು ಪ್ರತಿಭಾವಂತರು ನೌಕರಿ ಕಳೆದುಕೊಂಡಿದ್ದಾರೆ. ಐಟಿ ಕಂಪನಿಗಳ ವಜಾ ನಿರ್ಧಾರವು ಲಕ್ಷಾಂತರ ನೌಕರರ ಬದುಕು, ಅವರ ಮಕ್ಕಳ ಶಿಕ್ಷಣದ ಮೇಲೆ ಬಿದ್ದಿದೆ.

ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ: ಲಕ್ಷಾಂತರ ಮಂದಿ ಬದುಕು ಅತಂತ್ರ

60 ದಿನದಲ್ಲಿ ಬೇರೆ ಕೆಲಸ ಹುಡುಕಬೇಕು

ಮೂರು ತಿಂಗಳ ಹಿಂದಷ್ಟೇ ಅಮೆರಿಕಕ್ಕೆ ಬಂದಿದ್ದು, ಒಂದೂವರೆ ತಿಂಗಳ ಮಾತ್ರ ಕೆಲಸ ಅವಧಿ ಬಾಕಿ ಇದೆ. ನಿಮ್ಮನ್ನೂ ಸೇವೆಯಿಂದ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಎಚ್‌ 1ಬಿ ವೀಸಾ ಇರುವವರು ಕೇವಲ 60 ದಿನದಲ್ಲಿ ಬೇರೊಂದು ಉದ್ಯೋಗ ಹುಡಕಬೇಕಾದ ಸವಾಲಿಗೆ ಸಿಲುಕಿದ್ದಾರೆ. ಇಲ್ಲವಾದರೂ ಮರಳಿ ಸ್ವದೇಶಕ್ಕೆ ಬರಬೇಕಿದೆ ಎಂದು ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

ಜನವರಿ 18ರಂದು ನನ್ನನ್ನು ಕೆಲಸದಿಂದ ತೆಗೆಯಲಾಗಿದೆ. ನನ್ನ ಬದುಕು ಹೆಚ್ಚು ಕಷ್ಟಕರವಾಗಿದೆ. ಮಕ್ಕಳ ಶಾಲೆಗೆ ಸೇರಿಸಬೇಕಿದ್ದು, ನನಗೆ ಕೆಲಸದ ಅವಶ್ಯಕತೆ ಹೆಚ್ಚಿದೆ ಎಂದು ಮೈಕ್ರೋಸಾಫ್ಟ್ ಕಂಪನಿಯಿಂದ ಕೆಲಸ ಕಳೆದುಕೊಂಡ ಗೃಹಿಣಿ ತಿಳಿಸಿದರು.

ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ: ಲಕ್ಷಾಂತರ ಮಂದಿ ಬದುಕು ಅತಂತ್ರ

ಸ್ಥಳಿಯ ಉದ್ಯಮ ಸಂಘಟನೆ ಸಹಾಯ

ಸದ್ಯ ಕೆಲಸ ಕಳೆದುಕೊಂಡು ಅತಂತ್ರರಾಗಿರುವ ಭಾರತೀಯ ವೃತ್ತಿಪರರಿಗೆ ಅಲ್ಲಿನ ಕೆಲವು ಉದ್ಯಮ- ಸಮುದಾಯ ಆಧಾರಿತ ಸಂಘ, ಸಂಸ್ಥೆಗಳು ನೆರವಿಗೆ ಧಾವಿಸಿವೆ. ಕೆಲಸ ಕಳೆದುಕೊಂಡವರಿಗೂ ಹಾಗೂ ಅಮೆರಿಕದಲ್ಲಿ ಉದ್ಯೋಗಿಗಳ ಅಗತ್ಯತೆ ಇರುವ ಬೇರೆ ಕಂಪನಿಗಳ ನಡುವೆ ಈ ಸಂಘಟನೆಗಳು ಸಂಪರ್ಕ ಸಾಧಿಸುತ್ತಿವೆ. ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತಿವೆ. ಸಂಕಷ್ಟದಲ್ಲಿರುವ ಅನೇಕ ಉದ್ಯೋಗಿಗಳಿಗೆ ಹೊಸ ಉದ್ಯೋಗದ ಸಂದೇಶ ಕಳುಹಿಸುವ ಮೂಲಕ ಆಸರೆಯಾಗುತ್ತಿವೆ ಎಂದು ವರದಿಯಾಗಿದೆ.

English summary

America IT Company Layoffs: The lives of Indians who have lost their jobs and are insecure

America IT Company Layoffs: The lives of Indians who have lost their jobs and are insecure,
Story first published: Monday, January 23, 2023, 23:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X